Tag: ಕೆನರಾಟಿವಿ

DAKSHINA KANNADA HOME LATEST NEWS

ಕೇರಳ ಚುನಾವಣೆ: ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ- ಜಿಲ್ಲಾಧಿಕಾರಿ

ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಎ.7 ಸಂಜೆ 5ಗಂಟೆಯಿಂದ ಎಪ್ರಿಲ್ 9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 4ರ ಮಧ್ಯರಾತ್ರಿ 12 ಗಂಟೆಯ ತನಕ ‘‘ಒಣ ದಿನ’’ ಎಂದು ಘೋಷಿಸಿ ಈ ದಿನಗಳಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಗಡಿಭಾಗದ […]

DAKSHINA KANNADA HOME LATEST NEWS

ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು- ಗಂಭೀರ ಗಾಯ

ಬೆಳ್ತಂಗಡಿ: ಶಾಲೆಗೆ ತೆರಳುತ್ತಿದ್ದ ಅಕ್ಕ ತಂಗಿಯರು ಬಸ್ ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ. ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ರೂಪ ಮತ್ತು ನಾಗರಾಜ್ ಗೌಡ ದಂಪತಿಯ ಪುತ್ರಿಯರಾದ ದ್ವೀತಿಯ ಪಿಯುಸಿ ವಿದ್ಯಾರ್ಥಿ ಚರಿಷ್ಮಾ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಚದ್ಮಿಕಾ ಗಾಯಗೊಂಡವರು. ಇಬ್ಬರು ಇಂದು ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ಒಮ್ಮೆಲೆ ಬಸ್ […]

DAKSHINA KANNADA HOME LATEST NEWS

ರಾಜ್ಯಾದ್ಯಂತ ಎ.2ರವರೆಗೆ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಎ.2ರವರೆಗೆ ಒಣ ಹವೆ, ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೀದರ್ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ತಿಳಿಸಿದೆ. […]

HOME INETRNATIONAL LATEST NEWS

ಯುದ್ಧ ಮಾಡುವರ ಪ್ರಾರ್ಥನೆಯನ್ನು ದೇವರು ಆಲಿಸುವುದಿಲ್ಲ: ಪೋಪ್‌ ಲೀಯೋ ಸಂದೇಶ

ರೋಮ್‌: ‘ಜೀಸಸ್‌ ಶಾಂತಿಯ ಸಂಕೇತ. ಅವರು ಯಾವ ಯುದ್ಧವನ್ನೂ ಬೆಂಬಲಿಸುವುದಿಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲಾಗದು’. “ಮಾನವೀಯತೆಯು ಇಂದು ಶಿಲುಬೆಗೇರಿಸಲ್ಪಟ್ಟಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮಾತುಕತೆಯ ಮೂಲಕ ಶಾಂತಿ ಕಂಡುಕೊಳ್ಳಿ” ಎಂದು ಪಶ್ಚಿಮ ಏಷ್ಯಾದ ದೇಶಗಳಿಗೆ ಪೋಪ್‌ 14ನೇ ಲಿಯೊ ಕರೆ ನೀಡಿದ್ದಾರೆ.  ‘ಗರಿಗಳ ಭಾನುವಾರ’ ಆಚರಣೆಯ ಅಂಗವಾಗಿ ವ್ಯಾಟಿಕನ್‌ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ಉದ್ದೇಶಿಸಿ ಸಂದೇಶ ನೀಡಿದ ಅವರು, ‘ದೇವರು ಹಿಂಸೆಯನ್ನು ಒಪ್ಪುವುದಿಲ್ಲ, ಯುದ್ಧ ಮಾಡುವರ ಪ್ರಾರ್ಥನೆಯನ್ನೂ ಅವರು […]

DAKSHINA KANNADA HOME LATEST NEWS

ರಸ್ತೆ ಡಿವೈಡರ್‌ಗೆ ಬೈಕ್ ಢಿಕ್ಕಿ: 19ರ ಯುವಕ ಸಾವು-ಮತ್ತೋರ್ವ ಗಂಭೀರ

ಬೆಳ್ತಂಗಡಿ: ಸವಾರನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮಾರ್ಚ್ 28ರ ತಡರಾತ್ರಿ ಸಂಭವಿಸಿದೆ. ಲಾಯಿಲ ಗ್ರಾಮದ ಅಮ್ಮಣ್ಣಂಗಡಿ ನಿವಾಸಿ ಚಂದ್ರಶೇಖರ್ ಅವರ ಪುತ್ರ ನಿತೇಶ್ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಬೈಕ್ ಚಲಾಯಿಸುತ್ತಿದ್ದ ಪುತ್ತೂರು ನಿವಾಸಿ ಲಿಖಿತ್ (20) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಉಜಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಎಂದು […]

DAKSHINA KANNADA HOME LATEST NEWS

ಪ್ರತಿ ತಾಲೂಕಿನಲ್ಲಿ ಬೀದಿನಾಯಿಗಳ ಆಶ್ರಯ ಕೇಂದ್ರ: ಜಿಲ್ಲಾಧಿಕಾರಿ

ಮಂಗಳೂರು:- ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಇಂತಹ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳ ಜನನ ನಿಯಂತ್ರಣ […]

DAKSHINA KANNADA HOME LATEST NEWS STATE

ಕೊನೆಗೂ ಹಾಜಬ್ಬರಿಗೆ ಗೌರವ ಡಾಕ್ಟರೇಟ್‌ ಕೊಡಲು ಮನಸ್ಸು ಮಾಡಿದ ಮಂಗಳೂರು ವಿವಿ

ಮಂಗಳೂರು: ವಿವಿಯ ಕೂಗಳತೆ ದೂರದಲ್ಲಿದ್ದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಕೊನೆಗೂ ಮಂಗಳೂರು ವಿಶ್ವವಿದ್ಯಾಲಯ ಈ ಬಾರಿಯ ಮಂಗಳೂರು ವಿವಿಯ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ. ತನ್ನ ಒಡಲಲ್ಲೇ ಇದ್ದ ಒಬ್ಬ ಸಾಧಕನನ್ನು ಬಿಟ್ಟು ಊರ-ಪರವೂರ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ ನೀಡುತ್ತಿದ್ದ ಮಂಗಳೂರು ವಿವಿ ಕೊನೆಗೂ ಹರೇಕಳ ಹಾಜಬ್ಬರಿಗೆ ಈ ಬಾರಿ ಡಾಕ್ಟರೇಟ್‌ ಪ್ರದಾನ ಮಾಡಲು ಮನಸ್ಸು ಮಾಡಿದೆ. ಹರೇಕಳ ಹಾಜಬ್ಬ ಮೂರು ದಶಕಗಳ ಹಿಂದೆಯೇ ತನ್ನೂರಿಗೆ ಶಾಲೆ ಬೇಕೆಂದು ಕನಸು ಕಂಡಿದ್ದವರು.  ಅದರಕ್ಕಾಗಿ ರಾಜಕೀಯ ನೇತರಾರು, […]

DAKSHINA KANNADA HOME LATEST NEWS

ತೊಕ್ಕೊಟ್ಟು: ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಓರ್ವನ ಮರ್ಡರ್‌

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಈತ ಓರ್ವ ರೌಡಿಶೀಟರ್‌ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, […]

DAKSHINA KANNADA HOME LATEST NEWS

1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಬೆಂಗಳೂರು: ಒಂದನೇ ತರಗತಿಯ ಮಕ್ಕಳಿಗೆ ಶಾಲೆ ಸೇರ್ಪಡೆಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಯುಕೆಜಿ ಮುಗಿಸಿದರೂ 6 ವರ್ಷ ಪೂರ್ಣಗೊಂಡಿಲ್ಲವೆಂದು ಚಿಂತೆಯಲ್ಲಿದ್ದ  ಪೋಷಕರು ನಿರಾಳರಾಗಿದ್ದಾರೆ. ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ […]

DAKSHINA KANNADA HOME LATEST NEWS

ಮಂಗಳೂರು ಪೊಲೀಸರ ಹೆಸರಲ್ಲೇ ನಕಲಿ ವೆಬ್‌ಸೈಟ್….!

ಮಂಗಳೂರು: ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡು ಸೈಬರ್ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಆನ್‌ಲೈನ್ ಜೂಜಾಟ ನಡೆಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರದ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರೇವಣ ಸಿದ್ದಪ್ಪ ಅವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದಿನಾಂಕ 25-03-2026ರಂದು ಸಂಜೆ ಸೈಬರ್ ವಿಭಾಗದ ಅಧಿಕಾರಿಗಳು ಗೂಗಲ್ ಪರಿಶೀಲಿಸುತ್ತಿದ್ದಾಗ, ‘ಮಂಗಳೂರು ಸಿಟಿ ಪೊಲೀಸ್’ ಹೆಸರಿನಲ್ಲಿ ನಕಲಿ […]