Tag: ಕೆನರಾಟಿವಿ ನ್ಯೂಸ್‌

COMMUNITY NEWS

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಾಲ್ವರು ಕಾರ್ಮೆಲೈಟ್ ಡೀಕನ್‌ಗಳಿಗೆ ಪವಿತ್ರ ಗುರುದೀಕ್ಷೆ

ಮಂಗಳೂರು, ಮೇ 15: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೇ 14 ನಡೆದ ಭವ್ಯ ಸಮಾರಂಭದಲ್ಲಿ ನಾಲ್ವರು ಡಿಸ್ಕಾಲ್ಡ್ ಕಾರ್ಮೆಲೈಟ್ ಡೀಕನ್‌ಗಳಿಗೆ ಪವಿತ್ರ ಗುರುದೀಕ್ಷೆ ನೀಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ವಂ. ಆಲ್ವಿನ್ ಡಿಸೋಜಾ, ವಂ. ಲೋಯ್ ಜಾಕ್ಸನ್ ಕ್ರಾಸ್ತಾ, ವಂ. ಎಲ್ಸ್ಟನ್ ಮೊಂತೇರೊ ಮತ್ತು ವಂ. ಹಿಲರಿ ರೊಡ್ರಿಗಸ್ ಅವರಿಗೆ ಪವಿತ್ರ ದೀಕ್ಷೆ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ಡಾ. ಪೀಟರ್ ಪೌಲ್ […]

HOME

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ವಾರ್ಷಿಕ ಹಬ್ಬ

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಇಂದು (ಮೇ.13) ವಾರ್ಷಿಕ ಹಬ್ಬ ನಡೆಯಿತು. ಹಬ್ಬದ ದಿವ್ಯಬಲಿಪೂಜೆಯನ್ನು ನೂತನ ಧರ್ಮಗುರು ಹಾಗೂ ಮಂಗಳೂರಿನ ಬಿಜೈ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂದನೀಯ ಜೀವನ್‌ ಡಿಸೋಜಾ ಇವರು ನೆರವೇರಿಸಿದರು.ಈ ವೇಳೆ ನಡೆದ ಧಾರ್ಮಿಕ ಪ್ರವಚನದಲ್ಲಿ, ಕನ್ಯಾ ಮೇರಿ ಮಾತೆಯು 1917 ರ ಮೇ 13ರಂದು ಪೋರ್ಚುಗಲ್‌ನ ಫಾತಿಮಾ ಎಂಬಲ್ಲಿ ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜೆಸಿಂತಾ ಎಂಬ ಮೂವರು ಮಕ್ಕಳಿಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ಕನ್ಯಾ ಮೇರಿ ಕಾಣಿಸಿಕೊಂಡರು. […]

LATEST NEWS

ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಜೆ.ಎಫ್. ಅಸೋಸಿಯೇಷನ್ (ರಿ.) ಬಜಾಲ್ ನಂತೂರ್ ಮಂಗಳೂರು ಇದರ ವತಿಯಿಂದ, ಯೇನಪೋಯ ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಸಹಯೋಗ ದೊಂದಿಗೆ ಬಜಾಲ್‌ನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ (ಮರ್ಹೂಮ್ ಬಿ. ಪಕ್ರುದ್ದೀನ್ ವೇದಿಕೆ) ಬೃಹತ್ ರಕ್ತದಾನ ಶಿಬಿರವು ಭಾನುವಾರ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ಅವರು, “ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಿದೆ. ರಕ್ತದಾನದ ಮೂಲಕ ರೋಗಿಗಳ ಮತ್ತು ಗಾಯಗೊಂಡವರ […]

LATEST NEWS

ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗ ಬೇಕು ಉದ್ದೇಶದೊಂದಿಗೆ ವಿಜಯ ರೂರಲ್‌ ಡೆವಲಪ್ಮೆಂಟ್‌ ಫೌಂಡೇಶನ್‌ ಕಾರ್ಯಾಚರಣೆ : ರಾಜೇಶ್‌ ಖನ್ನಾ

ಮಂಗಳೂರು: ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಆಶಯದೊಂದಿಗೆ ಕಾರ್ಯಾಚರಿಸುತ್ತಿರುವ ವಿಆರ್‌ ಡಿಎಫ್‌ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಳೆದ 36 ವರ್ಷಗಳಿಂದ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಇದೀಗ ಶಿವಮೊಗ್ಗ ಹಾಗೂ ಹಾಸನ ವಿಸ್ತರಣೆಗೆ ಮುಂದಾಗಿದೆ. ಗ್ರಾಮೀಣ ಮಟ್ಟದಿಂದಲೇ ಅಭಿವೃದ್ಧಿ ಕಾರ್ಯಗಳು, ಜ್ಞಾನ ವೃದ್ಧಿ ಹಾಗೂ ಸಮಾಜ ಸೇವೆಯ ಕೆಲಸಗಳಾಗಬೇಕು ಅನ್ನುವ ಉದ್ದೇಶದೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್‌ ಖನ್ನಾ ತಿಳಿಸಿದರು. ಅವರು ಬ್ಯಾಂಕ್ ಆಫ್ […]

DAKSHINA KANNADA HOME LATEST NEWS

ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಮಂಗಳೂರು: ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರು ಬರೆದಿರುವ ‘ವಿಂಚ್ಣಾರ್ ಕಾಣಿಯೊ’ ಪುಸ್ತಕದ ಲೋಕಾರ್ಪಣೆ ಸಮಾರಂಭವು 2026ರ ಮೇ 10, ಭಾನುವಾರ ಸಂಜೆ 5:00 ಗಂಟೆಗೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಮತ್ತು ಕೊಂಕಣಿ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಸಂಚಾಲಕರಾದ ಶ್ರೀ ಮೆಲ್ವಿನ್ ರೊಡ್ರಿಗಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕೃತಿಯು […]

HOME INETRNATIONAL LATEST NEWS

ಶಾರ್ಜಾದಲ್ಲಿ ಭೀಕರ ಅಪಘಾತ: ಮೂಡಬಿದ್ರೆ ಮೂಲದ 5 ವರ್ಷದ ಬಾಲಕಿ ಕೊನೆಯುಸಿರು

ಶಾರ್ಜಾ: ಶಾರ್ಜಾ- ದುಬೈ ಬಾರ್ಡರ್ ನ ಅನ್ಸಾರ್ ಮಾಲ್ ಬಳಿ ಭಾನುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಶಿರ್ತಾಡಿ ಮೂಲದ ಬಾಲಕಿಯೋರ್ವಳು ಮೃತಪಟ್ಟಿದ್ದಾಳೆ. ಶಿರ್ತಾಡಿಯ ದಿ.ಟಿ.ಆಲಿಯಬ್ಬ ಅವರ ಪುತ್ರ ಹಕೀಮ್ ಎಂಬವರ ಪುತ್ರಿ ಫಾತಿಮಾ ಅನಿಹಾ (5) ಈ ಅಪಘಾತದಲ್ಲಿ ಮೃತಪಟ್ಟ ಬಾಲಕಿ.< ಹಕೀಮ್ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬ ಕೂಡಾ ಅಲ್ಲೇ ವಾಸವಾಗಿದ್ದಾರೆ. ಭಾನುವಾರ ಶಾಪಿಂಗ್ ಮುಗಿಸಿ ವಾಪಾಸ್ ಬಂದು ತಮ್ಮ ಕಾರಲ್ಲಿ ಕೂರಲು ಸಿದ್ಧರಾದಾಗ ಹಿಂದಿನಿಂದ ಬಂದ ಮತ್ತೊಂದು ಕಾರು […]

LATEST NEWS

ಎಂಸಿಸಿ ಬ್ಯಾಂಕ್ ವತಿಯಿಂದ ಗೋವಾದಲ್ಲಿ ಎರಡು ದಿನಗಳ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ಗೋವಾದ ‘ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್’ (Courtyard by Marriott) ಸಭಾಂಗಣದಲ್ಲಿ ಎರಡು ದಿನಗಳ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಬದಲಾಗುತ್ತಿರುವ ತಾಂತ್ರಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ವಿಶ್ಲೇಷಿಸುವುದು ಹಾಗೂ ಅಂತರರಾಜ್ಯ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ […]

LATEST NEWS

ಯಕ್ಷದ್ರುವ ಪಟ್ಲ ಫೌಂಡೇಶನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಮಂಗಳೂರು: ಎಪ್ರಿಲ್ 28: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮೇ 30 ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ **ಪಟ್ಲ ಸಂಭ್ರಮ 2026 ** ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ (SSLC) ಮತ್ತು ಪಿಯುಸಿ ( 2nd PUC) ವಿಭಾಗದಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿ ವೇತನವನ್ನು […]

LATEST NEWS

ಧವಳ ಕೋ-ಆಪರೇಟಿವ್ ಸೊಸೈಟಿ ಮಂಗಳೂರು: 2025-26ನೇ ಸಾಲಿನಲ್ಲಿ ರೂ. 200 ಕೋಟಿ ವ್ಯವಹಾರ; ರೂ. 50.95 ಲಕ್ಷ ನಿವ್ವಳ ಲಾಭ

ಮಂಗಳೂರು: ನಗರದ ಹೃದಯ ಭಾಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧವಳ ಕೋ-ಆಪರೇಟಿವ್ ಸೊಸೈಟಿ ನಿಯಮಿತವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಸುಮಾರು ರೂ. 200 ಕೋಟಿ ವ್ಯವಹಾರದೊಂದಿಗೆ ರೂ. 50.95 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ (ಜೂನ್ 2022) ರಾಜ್ಯಮಟ್ಟದ ಉದ್ದೇಶದೊಂದಿಗೆ ಆರಂಭಗೊಂಡ ಈ ಸಂಸ್ಥೆಯು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆ ಮಾಡಿದೆ. ದಿನಾಂಕ 31.03.2026ರ ಅಂತ್ಯಕ್ಕೆ ಸಂಸ್ಥೆಯು […]

LATEST NEWS

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ

ಮಂಗಳೂರು, ಏಪ್ರಿಲ್ 25: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಣ್ಣ ಸೇತುವೆ (ಕಾಲು ಸಂಕ) ಮುರಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಸಾಗುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು […]