LATEST NEWS

ಮಂಗಳೂರು ಉತ್ತರ ಮಂಡಲ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ

ಮಂಗಳೂರು, ಸೆಪ್ಟೆಂಬರ್ 04 : ಮಂಗಳೂರು ಉತ್ತರ ಮಂಡಲದ ಬಿಜೆಪಿ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮವು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಕಾನೂನು ಪ್ರಕೋಷ್ಠದ ಅವಶ್ಯಕತೆ ಹಾಗೂ ಪಕ್ಷದ ಬೆಳವಣಿಗೆಯಲ್ಲಿ ಅದರ ಪ್ರಮುಖ ಪಾತ್ರವನ್ನು ಕುರಿತು ಸವಿಸ್ತಾರವಾಗಿ ವಿವರಿಸಿದರು.

ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಡಲ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿಯವರು ನೂತನ ಸಮಿತಿ ಸದಸ್ಯರನ್ನು ಅಧಿಕೃತವಾಗಿ ಘೋಷಿಸಿ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು ಅವರು ಪ್ರಕೋಷ್ಟದ ಮಹತ್ವ ಹಾಗೂ ನೂತನ ಸಮಿತಿ ಸದಸ್ಯರ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.

ನೂತನ ಸಮಿತಿ ಪದಾಧಿಕಾರಿಗಳು:

ಸಂಚಾಲಕರು: ಶುಕರಾಜ್ ಎಸ್. ಕೊಟ್ಟಾರಿ ಸಹ ಸಂಚಾಲಕರು: ಶಿವರಾಜ್ ಶೆಟ್ಟಿ ಸದಸ್ಯರು: ರಾಘವೇಂದ್ರ ಟಿ.ಎನ್, ಸುಜಿತ್ ಕುಮಾರ್, ಶ್ರೀದೇವಿ ಆರ್. ಅಮೀನ್, ಆಕರ್ಶ್, ಮತ್ತು ಕೇದಾರ್ ಶೇನವ.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಮತ್ತು ರಣದೀಪ್ ಕಾಂಚನ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸಂಗೀತ ಆರ್. ನಾಯಕ್ ಹಾಗೂ ಕಾನೂನು ಪ್ರಕೋಷ್ಟದ ಜಿಲ್ಲಾ ಸಮಿತಿ ಸದಸ್ಯರಾದ ನರಸಿಂಹ ಹೆಗ್ಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವೇಣು ಕುಮಾರ್, ಕುಮಾರಿ ಅಕ್ಷತಾ ಮತ್ತು ಶಿವರಾಜ್ ಸರಿಪಲ್ಲ ಭಾಗವಹಿಸಿದ್ದರು. ನೂತನ ಸಂಚಾಲಕರಾದ ಶುಕರಾಜ್ ಎಸ್. ಕೊಟ್ಟಾರಿ ಸ್ವಾಗತಿಸಿ, ಕೇದಾರ್ ಶೇನವ ಧನ್ಯವಾದ ಅರ್ಪಿಸಿದರು. ಆಕರ್ಷ ಆಚಾರ್ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Share News