Tag: canaratv

LATEST NEWS

ಶಕ್ತಿನಗರ ಕಾಲೇಜಿನಲ್ಲಿ MRPL CSR ಯೋಜನೆಯಡಿ ನೂತನ ಸೌಲಭ್ಯಗಳ ಉದ್ಘಾಟನೆ: ಶಾಸಕ ವೇದವ್ಯಾಸ ಕಾಮತ್ ಶ್ಲಾಘನೆ

ಮಂಗಳೂರು, ಜೂನ್ 10: ಶಕ್ತಿನಗರದ ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂಆರ್‌ಪಿಎಲ್ ಸಿ‌ಎಸ್‌ಆರ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಬಾಲಕಿಯರ ಮತ್ತು ಬಾಲಕರ ಶೌಚಾಲಯಗಳು, ನೀರಿನ ಸಂಪು ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಉದ್ಘಾಟನಾ ಸಮಾರಂಭವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಇಂತಹ ಮೂಲಭೂತ ಸೌಕರ್ಯಗಳು ಅತ್ಯಂತ ಅಗತ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ನಮ್ಮ ಮನವಿಗೆ ಸ್ಪಂದಿಸಿ ಎಂಆರ್‌ಪಿಎಲ್ ನೀಡುತ್ತಿರುವ ಸಹಕಾರ […]

HOME LATEST NEWS

ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ; ತುರ್ತು ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಗಳ ವ್ಯಾಪಕ ಹರಡುವಿಕೆಯಿಂದಾಗಿ ರೈತರು ಎದುರಿಸುತ್ತಿರುವ ಗಂಭೀರ ಆರ್ಥಿಕ ಮತ್ತು […]

LATEST NEWS

ತುಳು ಸಿನಿಮಾರಂಗದಲ್ಲಿ ಮಿಂಚುತ್ತಿರುವ ಕೊಂಕಣಿ ಪ್ರತಿಭೆ ವೆನ್ಸಿಟಾ ಡಾಯಸ್: ಜೂನ್ 11ಕ್ಕೆ ಬಿಡುಗಡೆಯಾಗಲಿದೆ ‘ಕಜ್ಜ’

ಮಂಗಳೂರು, ಜೂನ್ 09: ಮಂಗಳೂರಿನ ಪ್ರತಿಭಾವಂತ ಮಗಳು ವೆನ್ಸಿಟಾ ಡಾಯಸ್ ಅವರು, ಜೂನ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ತುಳು ಚಿತ್ರ ‘ಕಜ್ಜ’ದ ಮೂಲಕ ತುಳು ಸಿನಿಮಾರಂಗದಲ್ಲಿ ತಮ್ಮ ಹೆಜ್ಜೆಯನ್ನು ಮುಂದುವರಿಸುತ್ತಿದ್ದು, ಯುವ ಕನಸುಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಕ್ಯಾಥೊಲಿಕ್ ಸಮುದಾಯದ ಹೆಮ್ಮೆಯ ಸದಸ್ಯೆ ಮತ್ತು ಭಾವನಾತ್ಮಕ ಕಲಾವಿದೆಯಾಗಿರುವ ವೆನ್ಸಿಟಾ, ಈಗಾಗಲೇ ‘ಅಸ್ಮಿತಾಯ್’ ಮತ್ತು ‘ಗಬ್ಬರ್ ಸಿಂಗ್’ನಂತಹ ಚಿತ್ರಗಳಲ್ಲಿನ ತಮ್ಮ ಅಭಿನಯದ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಅವರ ಶ್ರದ್ಧೆ ಮತ್ತು ಪ್ರತಿಭೆಗೆ ‘ಕೋಸ್ಟಲ್‌ವುಡ್ ಫಿಲ್ಮ್‌ಫೇರ್ ಅವಾರ್ಡ್ಸ್-2025’ರಲ್ಲಿ ‘ಅತ್ಯುತ್ತಮ […]

LATEST NEWS

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆ: ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಯುವರಾಜ್‌ಗೆ ಚಿನ್ನ ಹಾಗೂ ಬೆಳ್ಳಿ ಪದಕಗಳ ಗರಿ

ಬೆಂಗಳೂರು, ಜೂನ್ 09: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜೂನ್ 5ರಂದು ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ 9ನೇ ತರಗತಿ ‘ಬಿ’ ವಿಭಾಗದ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಉದ್ದ ಜಿಗಿತ ಸ್ಪರ್ಧೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು […]

LATEST NEWS

ಡೊರ್ನಹಳ್ಳಿಯಲ್ಲಿ ಸಂತ ಅಂತೋನಿ ಯವರ ವಾರ್ಷಿಕ ಮಹೋತ್ಸವದ ಐದನೇ ದಿನದ ನೊವೆನಾ ಭಕ್ತಿ ಆಚರಣೆ

ಮೈಸೂರು, ಜೂನ್ 08: ಮೈಸೂರಿನ ಡೊರ್ನಹಳ್ಳಿಯಲ್ಲಿರುವ ಪ್ರಸಿದ್ಧ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಸಿದ್ಧತೆಯಾಗಿ ಐದನೇ ದಿನದ ನೊವೆನಾ ಪ್ರಾರ್ಥನೆಯು ಜೂನ್ 08 ಸೋಮವಾರ ಅತ್ಯಂತ ಭಕ್ತಿ ಶ್ರದ್ಧೆಗಳಿಂದ ನಡೆಯಿತು. ಈ ಪವಿತ್ರ ದಿವ್ಯ ಬಲಿಪೂಜೆಯ ನೇತೃತ್ವವನ್ನು ಮಡಿಕೇರಿಯ ಸಂತ ಮೈಕಲ್ ಚರ್ಚ್‌ನ ಧರ್ಮಗುರುಗಳಾದ ರೆ| ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ಅವರು ವಹಿಸಿದ್ದರು. ತಮ್ಮ ಧರ್ಮೋಪದೇಶದಲ್ಲಿ ಮಾತನಾಡಿದ ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ಅವರು, “ಸಂತ ಅಂತೋನಿಯವರ ಜೀವನ ಮತ್ತು ಬೋಧನೆಗಳನ್ನು ಮಾದರಿಯಾಗಿಟ್ಟುಕೊಂಡು ಪ್ರಾರ್ಥನೆ, ನಂಬಿಕೆ ಮತ್ತು […]

LATEST NEWS

ಬಡವರ ನೋವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ: ವೃದ್ಧೆಯ ಕಣ್ಣೀರು ಒರೆಸಿದ ಜನನಾಯಕ

ಪುತ್ತೂರು, ಜೂನ್ 08 : ಅಧಿಕಾರ ಎನ್ನುವುದು ಕೇವಲ ಕಚೇರಿಯ ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವುದಲ್ಲ, ಅದು ಜನರ ನಡುವೆ ಹೋಗಿ ಅವರ ಕಷ್ಟ ಸುಖಗಳಿಗೆ ಭಾಗಿಯಾಗುವುದು ಎಂಬುದನ್ನು ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಲ್ನಾಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಶಾಸಕರ ಬಡವರ ಪರ ಕಾಳಜಿಗೆ ಸಾಕ್ಷಿಯಾಗಿದೆ. ಮೇಲಿನ ಚಿತ್ರವನ್ನು ನೋಡಿ, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಅವರು ವೃದ್ದ ತಾಯಿಯೋರ್ವರಿಗೆ ಎರಡು ಕೈಗಳನ್ನು ಜೋಡಿಸಿ ಕೈ […]

LATEST NEWS

ಕಲಾಂಗಣದಲ್ಲಿ ಹಾಸ್ಯರಸ ಉಕ್ಕಿಸಿದ ‘ಉಪ್ರಾಂತ್‌ಚ್‌ ಕಳ್ಚೆಂ’ ನಾಟಕ

ಮಂಗಳೂರು: ಪ್ರಸಿದ್ಧ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್‌ ಸೊಭಾಣ್‌’ ಇದರ ತಿಂಗಳ ಸರಣಿಯ 294 ನೇ ಕಾರ್ಯಕ್ರಮವು ಜೂನ್ 07 ರಂದು ಶಕ್ತಿನಗರದ ಕಲಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಂಗೀತ ಉಪಕರಣಗಳ ಮಾರಾಟ ಮಳಿಗೆ ‘ಸಿಂಫನಿ’ ಇದರ ಮಾಲಕರಾದ ಲೊಯ್‌ ನೊರೊನ್ಹಾ ಇವರು ಸಾಂಪ್ರದಾಯಿಕವಾಗಿ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಮತ್ತು ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಪ್ರಸಿದ್ಧ ‘ಕೊಮಿಡಿ ಕಂಪೆನಿ’ ನಾಟಕ […]

LATEST NEWS

ಕಡಬ ಪತ್ರಕರ್ತರ ಸಮಾಜ ಸೇವೆ ಮಾದರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಶ್ಲಾಘನೆ

ಕಡಬ: ಜೂನ್,08 : ಪತ್ರಕರ್ತರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ಸಮಾಜದ ಜನರ ಅನುಕೂಲಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ನೀಡುವ ಮೂಲಕ ಕಡಬದ ಪತ್ರಕರ್ತರ ಸಂಘ ಮಾದರಿ ಕೆಲಸ ಮಾಡುತ್ತಿದೆ ಎಂದು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಹೇಳಿದರು. ಅವರು ಸೋಮವಾರ ಕಡಬ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ […]

LATEST NEWS

ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ ಹಾನಿಯಾದರೆ ಇಂಜಿನಿಯರ್ ಗಳೇ ಹೊಣೆ ಸಚಿವ ಖಾದರ್ ಎಚ್ಚರಿಕೆ

ಮಂಗಳೂರು: ಜೂನ್, 08: ಮಳೆಗಾಲದಲ್ಲಿ ಎದುರಾಗುವ ಯಾವುದೇ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗಳು ರಸ್ತೆಯಲ್ಲಿ ನೀರು ನಿಲ್ಲುವ ಪ್ರಕರಣಗಳನ್ನು ಸಮನ್ವಯದಿಂದ ನಿರ್ವಹಿಸಬೇಕು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ವ್ಯಾಪ್ತಿ ಮೀರಿ ಕ್ರಮ ಕೈಗೊಳ್ಳಬೇಕು ಎಂದರು. […]

LATEST NEWS

ವಿಟ್ಲ ರಸ್ತೆ ಕಾಮಗಾರಿ- ಸಂಚಾರ ಮಾರ್ಗ ಬದಲಾವಣೆ

ವಿಟ್ಲ ,ಜೂನ್ 08 : ಪುತ್ತೂರು ವಿಧಾನಸಭಾ ಕ್ಷೇತ್ರದ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಜೂನ್ 5 ರಿಂದ ಮುಂದಿನ 3 ತಿಂಗಳವರೆಗೆ ಅನ್ವಯವಾಗುವಂತೆ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಮತ್ತು ಚಾಲಕರು ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಲಾಗಿದೆ: ವಿಟ್ಲದಿಂದ ಕಲ್ಲಡ್ಕ ಕಡೆಗೆ ಹೋಗುವ ವಾಹನಗಳು: […]