Tag: canaratv

LATEST NEWS

ಮಂಗಳೂರು ವಿವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜು ತಂಡಕ್ಕೆ ಉಭಯ ವಿಭಾಗಗಳಲ್ಲಿ ಪ್ರಶಸ್ತಿ

ಮಂಗಳೂರು,ಏಪ್ರಿಲ್ 15: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ರೋಚಕ ಕ್ರೀಡಾಕೂಟದಲ್ಲಿ ಮೂಡುಬಿದ್ರೆಯ ಆಳ್ವಾಸ್ ಕಾಲೇಜು ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಮಾರೋಪ ಸಮಾರಂಭ: ಪಂದ್ಯಾಟದ ಸಮಾರೋಪ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆವರೆಂಡ್ ಡಾ. ಸ್ಟ್ಯಾನಿ ಗೋವಿಯಸ್ ಅವರ ಅಧ್ಯಕ್ಷತೆಯಲ್ಲಿ […]

HOME LATEST NEWS

*ನಾರಿ ಶಕ್ತಿ ವಂದನ್‌ ಮಸೂದೆʼ ಜಾರಿಗೆ ದ ಕ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಸದ ಕ್ಯಾ. ಚೌಟರ ಕಚೇರಿಯಲ್ಲಿ ಸಹಿ ಸಂಗ್ರಹ*

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಐತಿಹಾಸಿಕ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಕಚೇರಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ವಿವಿಧ ಕೆಲಸಗಳ ನಿಮಿತ್ತ ಸಂಸದ ಕ್ಯಾ. ಚೌಟ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯರು, ಕೇಂದ್ರ ಸರ್ಕಾರದ ಐತಿಹಾಸಿಕ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಜಾರಿಯಾಗುತ್ತಿರುವ […]

HOME LATEST NEWS

ಟೆರೇಸ್‌ನಲ್ಲಿ ಟಾಟಾ ಸುಮೋ ಕಾರಿನಂತೆ ಕಾಣುವ ವಾಟರ್‌ ಟ್ಯಾಂಕ್

ಆಂಧ್ರ ಪ್ರದೇಶ, ಏಪ್ರಿಲ್ 15: ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಸಾಲ ಮಾಡಿಯಾದರೂ ಸರಿಯೇ, ತಾವು ಅಂದುಕೊಂಡಂತೆ ಮನೆ ನಿರ್ಮಿಸಿಕೊಳ್ತಾರೆ. ತಾನು ಕಟ್ಟುವ ವಿಭಿನ್ನವಾಗಿ ರಬೇಕೆಂದು ಎಂದು ಬಯಸುವವರು ಇದ್ದಾರೆ. ವ್ಯಕ್ತಿಯೊಬ್ಬರು ತನ್ನ ಮನೆಯ ಮಹಡಿಯಲ್ಲಿ ನೀರಿನ ಟ್ಯಾಂಕ್‌ನ್ನು ಕಾರಿನ ರೀತಿ ನಿರ್ಮಿಸಿದ್ದಾರೆ. ಇದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಪಟ್ಟಣದ ಮನೆಮಾಲೀಕರೊಬ್ಬರ ಐಡಿಯಾ ಇದು. ಮನೆಯ ಮೇಲೆ ಹೊಚ್ಚ ಹೊಸ ಟಾಟಾ ಸುಮೋ ಆಕಾರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಾರಿನ ವಿನ್ಯಾಸಕ್ಕೆ ಒತ್ತು […]

LATEST NEWS

ಕದ್ರಿ ಶಿವಭಾಗ್: ತೋಮನಾಯ್ಗರ ರಸ್ತೆ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರಿಂದ ಭೂಮಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ಕದ್ರಿ ಶಿವಭಾಗ್ ವಾರ್ಡಿನ ತೋಮನಾಯ್ಗರ ರಸ್ತೆಯ ಬದಿಯಲ್ಲಿ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, “ಮಳೆಗಾಲದಲ್ಲಿ ರಾಜಕಾಲುವೆಯಿಂದ ನೀರು ಉಕ್ಕಿ ಸ್ಥಳೀಯ ಮನೆಗಳಿಗೆ ನುಗ್ಗುತ್ತಿರುವ ಸಮಸ್ಯೆಯನ್ನು ಮನಗಂಡು, ಇಲ್ಲಿನ ನಿವಾಸಿಗಳು ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ಅನುದಾನ ಮೀಸಲಿರಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ರಾಜ್ಯದ ಇತಿಹಾಸದಲ್ಲೇ ಮಹಾನಗರ […]

COMMUNITY NEWS DAKSHINA KANNADA LATEST NEWS

ಮಂಗಳೂರು ಉದ್ಯಮಿಗಳಿಗೆ ‘ರಚನಾ’ ಸಂಸ್ಥೆಯಿಂದ ಎಐ(AI) ತರಬೇತಿ ಕಾರ್ಯಾಗಾರ

ಮಂಗಳೂರು: ಏಪ್ರಿಲ್ 14 : ಸ್ಥಳೀಯ ಉದ್ಯಮ ವಲಯವನ್ನು ಡಿಜಿಟಲ್ ಯುಗಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ, ಮಂಗಳೂರಿನ ‘ರಚನಾ’ ಕೆಥೊಲಿಕ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮಂಗಳೂರು ಕ್ಲಬ್‍ನಲ್ಲಿ ‘ವ್ಯವಹಾರ ಮತ್ತು ಉತ್ಪಾದಕತೆಗಾಗಿ ಎಐ ಪರಿಕರಗಳು’ ಎಂಬ ವಿಷಯದ ಕುರಿತು ಇತ್ತೀಚೆಗೆ ಒಂದು ದಿನದ ತೀವ್ರತರವಾದ ಕಾರ್ಯಾಗಾರವನ್ನು ಆಯೋಜಿಸಿತ್ತು. ಸಂದೇಶ ಸಂಸ್ಥೆಯ ನಿರ್ದೇಶಕರಾದ ಫಾದರ್ ಸುದೀಪ್ ಪೌಲ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಚನಾ ಸಂಸ್ಥೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟೆಲಿನೊ ಅವರು ಮಾತನಾಡಿ, “ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು […]

LATEST NEWS

*ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನಾಚರಣೆ: ‘ಲೀನ್‌ಸ್ಪಾರ್ಕ್’ ಪುಸ್ತಕ ಬಿಡುಗಡೆ*

ಬೆಂಗಳೂರು: ನಗರದ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ (SJU) ಏಪ್ರಿಲ್ 11 ರಂದು ಸಂಸ್ಥೆಯ ನಾವೀನ್ಯತೆ ಮಂಡಳಿಯ (IIC) ವತಿಯಿಂ ದ ‘ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಜೇವಿಯರ್ ಹಾಲ್‌ನಲ್ಲಿ ನಡೆದ ಈ ಉನ್ನತ ಮಟ್ಟದ ಕಾರ್ಯಕ್ರಮವು ವಿಶ್ವವಿದ್ಯಾಲಯವನ್ನು ದಾರ್ಶನಿಕ ಚಿಂತನೆಯ ಕೇಂದ್ರವಾಗಿ ಮಾರ್ಪಡಿಸಿತ್ತು. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ತಜ್ಞರ ವೈವಿಧ್ಯಮಯ ಗುಂಪನ್ನು ಆಕರ್ಷಿಸಿದ ಈ ಸಮಾವೇಶವು,”ಮಿತವ್ಯಯದ ಮತ್ತು ಸರಳ ಚಿಂತನೆ’ ಯ ಮೂಲಕ ಶೈಕ್ಷಣಿಕ ಸಿದ್ಧಾಂತವನ್ನು ನೈಜ- ಪ್ರಪಂಚದ ಅನ್ವಯದೊಂದಿಗೆ […]

LATEST NEWS

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ ಆಚರಣೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿಯನ್ನು ಏಪ್ರಿಲ್ 14 ಭಕ್ತಿಪೂರ್ವಕವಾಗಿ ಆಚರಿಸಿತು.ಕಾರ್ಯಕ್ರಮದ ಆರಂಭದಲ್ಲಿ ಬಂದರು ಪ್ರದೇಶದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಭರತ್ ಶೆಟ್ಟಿ, ಎನ್‌ಎಂಪಿಎ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಹಾಗೂ ಮುಖ್ಯ ಅತಿಥಿಗಳಾದ ಪ್ರೊ. ದಯಾನಂದ ನಾಯಕ್, ಮಾಜಿ […]

LATEST NEWS

ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿದ ಧೀಮಂತ ವ್ಯಕ್ತಿ ಅಂಬೇಡ್ಕರ್: ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ಬಾಲ್ಯದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದು, ಅದನ್ನೇ ಸವಾಲಾಗಿ ಸ್ವೀಕರಿಸಿದ ಧೀಮಂತ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಆಗಿದ್ದಾರೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಆಡಳಿತದ ನೀತಿ ನಿರೂಪಣೆಯಲ್ಲಿ ಮಹಿಳೆಯರು, ದುರ್ಬಲರು ಭಾಗವಹಿಸಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು. ಇದನ್ನು ಈಡೇರಿಸಲು […]

HOME LATEST NEWS

ಬಿಜೆಪಿ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ: ಗಣ್ಯರಿಂದ ಪುಷ್ಪನಮನ

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ, ಎಸ್‌ಸಿ/ಎಸ್‌ಟಿ ಮೋರ್ಚಾದ ಸಹಯೋಗದೊಂದಿಗೆ ಭಾರತ ರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ದೇಶದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ದಾರಿದೀಪ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ […]

LATEST NEWS

ಟೆಂಪಲ್ ಸ್ಕೇರ್ ಪುತ್ತೂರು ಮಡಿಲಿಗೆ ಜಿಪಿಎಲ್ ಟ್ರೋಫಿ

ಮೂಲ್ಕಿ : ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಮ್ಗಿಲೆ ದಿ ಒರಿಜಿನಲ್ ಆಭರಣ್ ಜಿಪಿಎಲ್ ಉತ್ಸವದ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಪ್ರಶಸ್ತಿಯನ್ನು ಟೆಂಪಲ್ ಸ್ಕೇರ್ ಪುತ್ತೂರು ಮುಡಿಗೇರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ಸ್ ಮಂಗಳೂರು ಮೊದಲು ಬಿಗುವಾದ ಬೌಲಿಂಗ್ ಸಂಘಟಿಸಿ ಏಳು ಓವರ್ ಗಳಲ್ಲಿ ಟೆಂಪಲ್ ಸ್ಕೇರ್ ಪುತ್ತೂರನ್ನು 50 ರನ್ನಿಗೆ ಸೀಮಿತಗೊಳಿಸಿತು. ಆದರೆ ಟೆಂಪಲ್ ಸ್ಕೇರ್ ಪುತ್ತೂರು ತಂಡದ ಕರಾರುವಕ್ಕಾದ ಬೌಲಿಂಗ್ ನಿಂದ 6.5 […]