DAKSHINA KANNADAHOMELATEST NEWSSTATE

ವಿಟ್ಲ: ರೈತ ರತ್ನ ಪ್ರಶಸ್ತಿ-2026 ಭಾಜನರಾದ ಯುವ ರೈತ ಬಲರಾಮ್‌ ಬಿ.ಜಿ

ವಿಟ್ಲ: ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್‌ ಸಂಸ್ಥೆಯು ಆಯೋಜಿಸುತ್ತಿರುವ ರೈತ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಯುವ ರೈತ ಬಲರಾಮ್‌ ಬಿ.ಜಿ ಅವರು ಆಯ್ಕೆಯಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮುರುವದ ರಾಜೇಶ್‌ ಭಟ್‌ ಬಿ.ಜಿ ಹಾಗೂ ಸುಜಾತ ಆರ್‌ ಭಟ್‌ ಅವರ ದಂಪತಿಯ ಪುತ್ರ ಬಲರಾಮ್‌ ಬಿ.ಜಿ ಅವರು ಸದ್ಯ ಅಳಿಕೆ ಗ್ರಾಮದ ಬಲಕ್ಕ ಎಂಬಲ್ಲಿ ಕೃಷಿ ಮಾಡುತ್ತಿದ್ದು, ಶೈಕ್ಷಣಿಕವಾಗಿ ಸ್ನಾತಕೋತ್ತರ ಪದವಿ ಪಡೆದು ಉತ್ತಮ ಕಂಪನಿಯಲ್ಲಿ ಉದ್ಯೋಗ ಪಡೆದರೂ ಇವರು ಮರಳಿದ್ದು ಕೃಷಿಗೆ. ಸದ್ಯ ಇವರು ಅಡಿಕೆ, ತೆಂಗು ಕೊಕ್ಕೋ, ಕರಿಮೆಣಸು ಇದರ ಜೊತೆಗೆ ಆಡು-ಕೋಳಿ, ಕುರಿ ಸಾಕಾಣಿಕೆ ಸೇರಿದಂತೆ ಬಹುಬೆಳೆಯ ಕೃಷಿಯನ್ನು ಮಾಡುತ್ತಿದ್ದಾರೆ. ಇವರ ವಿಶೇಷತೆ ಎಂದರೆ ಪ್ರತಿಯೊಂದು ಕೃಷಿಯಲ್ಲೂ ಆಧುನಿಕತೆಯನ್ನು ಅಳವಡಿಸಿಕೊಂಡಿರುವುದು. ಈ ಹಿನ್ನೆಲೆ ಅವರ ಸಾಧನೆ ಗಮನಿಸಿದ ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್‌ ಸಂಸ್ಥೆಯು  ಅವರಿಗೆ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಬಗ್ಗೆ  ಯುವ ಕೃಷಿಕರಾದ ನಮ್ಮಂತವರನ್ನು ಗುರುತಿಸಿರುವುದಕ್ಕೆ ಖುಷಿ ಪಡುತ್ತೇನೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಯುವ ರೈತರು ಏಕಬೆಳೆಯ ಬದಲಾಗಿ ಬಹುಬೆಳೆಯನ್ನು ಮಾಡಿ ಜೊತೆಗೆ ಮಣ್ಣಿನ ಫಲವತ್ತತೆ ಉಳಿಕೊಂಡು ಹೋಗಿ ಎಂದರು. ಜೊತೆಗೆ ಸರಕಾರ ಹಾಗೂ ಸಹಕಾರ ಕೇತ್ರದಿಂದ ಸಿಗುವ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

Share News