ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ಕುರಿತು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪತ್ರದ ಮೂಲಕ ಮಾಹಿತಿ ರವಾನಿಸಲಾಗಿದೆ.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಪಟ್ಟಿ
1) ಶ್ರೀ ಪಿ. ಎಂ. ನರೇಂದ್ರಸ್ವಾಮಿ
2)ಶ್ರೀ ಶಿವರಾಜ್ ತಂಗಡಗಿ
3)ಶ್ರೀ ರುದ್ರಪ್ಪ ಲಮಾಣಿ
4)ಶ್ರೀ ಕೆ. ಎಸ್. ಬಸವಂತಪ್ಪ
5)ಶ್ರೀ ಬಿ. ನಾಗೇಂದ್ರ
6)ಶ್ರೀ ಟಿ. ರಘುಮೂರ್ತಿ
7)ಶ್ರೀ ಬಿ. ಜಡ್. ಜಮೀರ್ ಅಹ್ಮದ್ ಖಾನ್
8)ಶ್ರೀ ರಿಜ್ವಾನ್ ಅರ್ಷದ್
9)ಶ್ರೀ ಸಂತೋಷ್ ಲಾಡ್
10)ಶ್ರೀ ಮಧು ಬಂಗಾರಪ್ಪ
11)ಶ್ರೀ ಪುಟ್ಟರಂಗಶೆಟ್ಟಿ
12) ಎಸ್.ಎಸ್.ಮಲ್ಲಿಕಾರ್ಜುನ್
13)ಡಾ. ಅಜಯ್ ಸಿಂಗ್
14)ಶ್ರೀ ಎನ್. ಚಲುವರಾಯಸ್ವಾಮಿ
15)ಶ್ರೀ ಕೆ. ಎಮ್. ಶಿವಲಿಂಗೇಗೌಡ
16)ಶ್ರೀ ಎಚ್. ಸಿ. ಬಾಲಕೃಷ್ಣ
17)ಶ್ರೀಮತಿ ಗಾಯತ್ರಿ ಶಾಂತೇಗೌಡ
18)ಶ್ರೀ ಬಸವರಾಜ ರಾಯರೆಡ್ಡಿ
19)ಶ್ರೀ ವಿಜಯಾನಂದ ಕಾಶಪ್ಪನವರ್
20)ಶ್ರೀ ಲಕ್ಷ್ಮಣ ಸವದಿ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯ ಮೇರೆಗೆ, ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಸೂಚಿಸಲಾಗಿದೆ. ಈ ಪ್ರತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ರವಾನಿಸಲಾಗಿದೆ.
ನೂತನ ಸಂಪುಟ ಸದಸ್ಯರ ಪ್ರಮಾಣ ಸ್ವೀಕಾರ ಸಮಾರಂಭ ಇಂದು ಸಂಜೆ 4.05 ಕ್ಕೆ ಲೋಕಭವನದ ಆವರಣದಲ್ಲಿ ನಡೆಯಲಿದೆ.
