DAKSHINA KANNADALATEST NEWS

ವಿಟ್ಲ ಪಟ್ಟಣಪಂಚಾಯತ್ ಮೂರು ವರ್ಷದಲ್ಲಿ ೧೧೧.೫೭ ಕೋಟಿ ಅನುದಾನ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ಗೆ ನಾನು ಶಾಸಕನಾದ ಮೂರು ವರ್ಷದ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ೧೦೦ ಕೋಟಿ ಸೇರಿ ಒಟ್ಟು ೧೧೧.೫೭ ಕೋಟಿ ಅನುದಾನವನ್ನು ನೀಡಿದ್ದೇವೆ, ಮುಂದಿನ ಎರಡು ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ, ಹಿಂದೆ ಶಾಸಕರಾಗಿದ್ದವರು ಅಧಿಕಾರದ ಅವಧಿಯಲ್ಲಿ ಕಚೇರಿಯಲ್ಲಿ ಕುಳಿತು ಡೀಲ್ ಮಾಡಿದ್ದರು ಅವರೇ ಈಗ ರಸ್ತೆಯಲ್ಲಿ ಗುಂಡಿ ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಆರೋಪಿಸಿದ್ದಾರೆ.

ಅವರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಜನರು ನಮಗೆ ವೋಟು ಹಾಕಿದ್ದು ಅಭಿವೃದ್ದಿ ಮಾಡುವ ಉದ್ದೇಶದಿಂದ ಈ ಕಾರಣಕ್ಕೆ ಜನರ ಬೇಡಿಕೆಯನ್ನು ಈಡೇರಿಸುತತಿದ್ದೇವೆ, ಕಾಂಕ್ರೀಟ್ ಕಾಣದ ರಸ್ತೆಗಳನ್ನು ಅಭಿವೃದ್ದಿ ಮಾಡುತ್ತಿದ್ದೇವೆ,ಮೂರು ವರ್ಷದಲ್ಲಿ ಶಾಸಕ ಅಶೋಕ್ ರೈ ಕ್ಷೇತ್ರಕ್ಕೆ ಎಷ್ಟು ಅನುದಾನ, ಎಲ್ಲೆಲ್ಲಿಗೆ ಅನುದಾನ ನೀಡಿದ್ದೇವೆ ಎಂಬುದರ ಜಾತಕ ನಮ್ಮಲ್ಲಿದೆ ಅಗತ್ಯವಿದ್ದವರು ರಸ್ತೆಯಲ್ಲಿ ಗುಂಡಿ ಹುಡುಕುವವರು ತಮ್ಮ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಬಹುದು.ಅಭಿವೃದ್ದಿಯೋಂದೇ ನಮ್ಮ ಮಂತ್ರವಾಗಿದೆ, ನಮ್ಮದು ಅಭಿವೃದ್ದಿ ರಾಜಕೀಯವಾಗಿದೆ ಇದೇ ಕಾರಣಕ್ಕೆ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದಾರೆ ಬೇಕಾದರೆ ಜನರಲ್ಲಿ ಕೇಳಿ ನೋಡಿ ಎಂದು ಸವಾಲು ಹಾಕಿದರು.

ವಿಭಜನೆ ಮಾಡಿ ವೋಟು ಕೇಳುವುದಿಲ್ಲ.

ನಾವು ಜನರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ, ಗಲಭೆ ಸೃಷ್ಟಿಸಿ, ಯಾರದ್ದೋ ಮಕ್ಕಳನ್ನು ಜೈಲಿಗೆ ಕಳುಹಿಸಿ, ಯಾರದ್ದೋ ಮಕ್ಕಳ ಮೇಲೆ ಕೇಸು ಹಾಕಿಸಿ ನಾವು ಜನರಲ್ಲಿ ವೋಟು ಕೇಳುತ್ತಿಲ್ಲ, ನಾವು ಜನರ ಬೇಡಿಕೆಯನ್ನು ಈಡೇರಿಸಿ ಅಭಿವೃದ್ದಿ ಮಾಡಿ ವೋಟು ಕೇಳುತ್ತಿದ್ದೇವೆ ಎಂದು ಮಾಜಿ ಶಾಸಕ ಮಠಂದೂರು ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಬಿಜೆಪಿಗೆ ಅಭಿವೃದ್ದಿ ಮಾಡಿ ಗೊತ್ತಿಲ್ಲ ಅವರಿಗೆ ಧರ್ಮದ ಹೆಸರಿನಲ್ಲಿ ಜನರ ನಡುವೆ ಸಂಘರ್ಷ ಸೃಷ್ಟಿ ಮಾಡುವುದೇ ಕೆಲಸ. ಅಧಿಕಾರಕ್ಕೆ ಬಂದಿದ್ದ ಇವರು ಹಿಂದೂ ಧರ್ಮಕ್ಕೆ ನೀಡಿದ ಕೆಲಸವೇನು ಎಂಬುದನ್ನು ಬಹಿರಂಗಪಡಿಸಲಿ, ಕೇವಲ ವೋಟಿಗಾಗಿ ಇವರು ಧರ್ಮವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಜನ ಈಗ ವಿದ್ಯಾವಂತರಾಗಿದ್ದಾರೆ, ಬಿಜೆಪಿಯ ನಾಟಕ ಪೋಷಕರಿಗೂ ಅರ್ಥವಾಗುತ್ತಿದೆ ಮುಂದೆ ಇವರ ಧರ್ಮ ರಾಜಕೀಯ ನಾಟಕ ನಡೆಯುವುದಿಲ್ಲ ಜನ ಅಭಿವೃದ್ದಿ ಪರ ಇದ್ದಾರೆ ಎಂದು ಶಾಸಕರು ಹೇಳಿದರು.

ಮುಂದಿನ ಎರಡು ಅವಧಿಯಲ್ಲಿ ನೀವು ಮನೆಯಲ್ಲೇ ಇರಿ

ಕಾಂಗ್ರೆಸ್ ಎಂದಿಗೂ ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲ, ಬಿಜೆಪಿ ಶಾಸಕರಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೆಲಸವನ್ನು ಮಾಡುವುದಿಲ್ಲ ಆದರೆ ನಾನು ಯಾವತ್ತೂ ಬಿಜೆಪಿ ಕಾಂಗ್ರೆಸ್ ಎಂಬ ರಾಜಕೀಯ ಮಾಡಿಲ್ಲ. ಪಕ್ಷ ನೋಡಿ ವ್ಯಕ್ತಿಯನ್ನು ಅಳೆಯುವ ಕೆಲಸವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಬಿಜೆಪಿ ಶಾಸಕರು ಧರ್ಮ ನೋಡಿ, ಜಾತಿ ನೋಡಿ ಅನುದಾನ ಹಂಚುತ್ತಿದ್ದರು ಆದರೆ ನಾವು ಆ ದುಷ್ಟ ಕೆಲಸವನ್ನು ಮಾಡುವುದೇ ಇಲ್ಲ. ಅಧಿಕಾರದಲ್ಲಿದ್ದಾಗ ರಾಜಧರ್ಮ ಪಾಲನೆ ಮಾಡುವುದೇ ನನ್ನ ಧರ್ಮವಾಗಿದೆ ಎಂದು ಶಾಸಕರು ಹೇಳಿದರು.ಮುಂದಿನ ಎರಡು ಅವಧಿಗೆ ಜನ ನಮ್ಮನ್ನು ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ. ಎಲ್ಲಾ ಜಾತಿ, ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಪುತ್ತೂರು ಕ್ಷೆತ್ರವನ್ನು ಅಭಿವೃದ್ದಿ ಮಾಡುವುದಾಗಿ ಶಾಸಕರು ಹೇಳಿದರು.

ಸೋಮವಾರ ಕಚೇರಿಗೆ ಬನ್ನಿ

ನಿಮ್ಮ ಯಾವುದೇ ಕೆಲಸ ಕಾರ್ಯಗಳು ಬಾಕಿ ಇದ್ದರೆ ಅಧಿಕಾರಿಗಳಿಂದ ತೊಂದರೆಯಾಗಿದ್ದಲ್ಲಿ ನೇರವಾಗಿ ನನ್ನ ಕಚೇರಿಗೆ ಬಂದು ತಿಳಿಸಿ ನಿಮಗೆ ನನ್ನಿಂದಾಗುವ ಸಹಾಯ ಮಾಡಿಯೇ ಮಾಡುತ್ತೇನೆ. ಬೆಳಿಗ್ಗೆಯಿಂದ ರಾತ್ರಿ ೧೦ ಗಂಠೆತನಕ ಸಾರ್ವಜನಿಕರಿಗಾಗಿ ಸಮಯವನ್ನು ಮೀಸಲಿಡುತ್ತೇನೆ. ಪಕ್ಷಾತೀತವಾಗಿ ನಾನು ನೆರವು ಮಾಡುತ್ತೇನೆ ಎಂದು ಹೇಳಿದ ಶಾಸಕರು ಬಾಡಿಗೆ ಮನೆಯಲ್ಲಿ ವಾಸವಿದ್ದವರಿಗೆ ೩ ಸೆಂಟ್ಸ್ ಜಾಗ, ವಿದ್ಯುತ್ ಇಲ್ಲದವರಿಗೆ ವಿದ್ಯುತ್ ಕೊಡುಸವ ಕೆಲಸವನ್ನು ಮಾಡುತ್ತೇನೆ. ಪ್ರತೀ ಮನೆಗೂ ದಿನದ ೨೪ ಗಂಟೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಕೆಲಸ ಮಾಡುತ್ತೇನೆ. ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚುಗಳ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಪುತ್ತೂರಿನಲ್ಲಿ ಶಾಂತಿಯುತ, ಸುಭದ್ರ ಆಳಡಿತ ನೀಡುತ್ತೇನೆ, ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕರು ಹೇಳಿದರು.

೧೫ ದಿನದಲ್ಲಿ ಹಕ್ಕು ಪತ್ರ ಕೊಡದಿದ್ರೆ ನೀರಿಲ್ಲದ ಊರಿಗೆ ಟ್ರಾನ್ಸ್‌ಫರ್

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಪ್ಪಾಗಿ ಭಾಗದಲ್ಲಿ ಸುಮಾರು ೧೫ ಮನೆಗಳಿಗೆ ೯೪ ಸಿ ಹಕ್ಕು ಪತ್ರ ನೀಡಿಲ್ಲ. ೧೩ ವರ್ಷದಿಂದ ಕುಟುಂಬಗಳು ಮನೆ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ ಕಚೇರಿ ಅಲೆಯುತ್ತಿರುವ ವಿಚಾರವನ್ನು ನನ್ನ ಬಳಿ ಹೇಳಿದ್ದಾರೆ. ಮುಂದಿನ ೧೫ ದಿವಸದೊಳಗೆ ಎಲ್ಲಾ ಕುಟುಂಬಗಳಿಗೂ ಹಕ್ಕು ಪತ್ರ ಕೊಡಬೇಕು. ಈ ಕುಟುಂಬಗಳು ವಾಸ ಮಾಡಿವು ಜಾಗ ಸ್ಮಶಾನದ ಜಾಗ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಹಕ್ಕು ಪತ್ರ ಕೊಡಿ ಉಳಿದ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿ . ಹಕ್ಕು ಪತ್ರವನ್ನು ನಿಗಧಿತ ದಿನದೊಳಗೆ ಕೊಡದೇ ಇದ್ದರೆ ಇದಕ್ಕೆ ಯಾರು ಕಾರಣ ಕರ್ತರೋ ಅವರನ್ನು ನೀರಿಲ್ಲದ ಊರಿಗೆ ಖಂಡಿತವಾಗಿಯೂ ಟ್ರಾನ್ಸ್‌ಫರ್ ಮಾಡಿಸುತ್ತೇನೆ. ಮನೆ ಕಟ್ಟಿಕೊಂಡು ೧೩ ವ ರ್ಷದಿಂದ ವಾಸವಾಗಿದ್ದರೂ ಹಕ್ಕು ಪತ್ರ ಕೊಡಲು ಅಧಿಕಾರಿಗಳಿಗೇನು ಸಂಕಟ

ನಮ್ಮ ವಾರ್ಡಿಗೆ ಇದುವರೆಗೂ ಯಾವ ಶಾಸಕರೂ ಬಂದಿಲ್ಲ

ನಮ್ಮ ವಾರ್ಡು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿದ್ದರೂ ಇಷ್ಟು ವರ್ಷದಲ್ಲಿ ಯಾವ ಶಾಸಕರೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ, ಮೊದಲ ಬಾರಿಗೆ ನೀವು ಬಂದಿದ್ದೀರಿ. ನಮ್ಮ ಬೇಡಿಕೆಯನ್ನು ಈಡೇರಿಸಿದ್ದೀರಿ.ಮುಂದಿನ ಚುನಾವಣೆಯಲ್ಲಿ ನಾವು ಪಕ್ಷ ನೋಡದೆ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಬಹುತೇಕ ವಾರ್ಡಿನ ನಿವಾಸಿಗಳು ಶಾಸಕರಲ್ಲಿ ನೋವು ತೋಡಿಕೊಂಡರು. ನಮಗೆ ಅಭಿವೃದ್ದಿ ಮುಖ್ಯ ಯಾರು ಅಭಿವೃದ್ದಿ ಮಾಡುತ್ತಾರೋ ಅವರಿಗೆ ನಾವು ವೋಟು ಹಾಕಿಯೇ ಹಾಕುತ್ತೇವೆ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಮಾಣ ಮಾಡಿದರು.

ಮುಂದಿನ ಜನವರಿಯಲ್ಲಿ ಶುದ್ದ ಕುಡಿಯುವ ನೀರು

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಈ ಕಾರಣಕ್ಕೆ ೧೦೦ ಕೋಟಿ ಅನುದಾನ ಇಟ್ಟಿದ್ದೇವೆ, ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಜನವರಿ ವೇಳೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಶಾಸಕರು ಈ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದರು.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಶಿಲಾನ್ಯಾಸ ಕಾರ್ಯಕ್ರಮ

ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬದನಾಜೆ ರಸ್ತೆಗೆ 10 ಲಕ್ಷ ಅನುದಾನದಲ್ಲಿ ಶಿಲಾನ್ಯಾಸ

5 ಲಕ್ಷ ಅನುದಾನದಲ್ಲಿ ವಿಟ್ಲಪ್ಪಣ ಪಂಚಾಯತ್ ವ್ಯಾಪ್ತಿಯ ನಿಡ್ಯ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆ ಕುರುಂಬಳ ರಸ್ತೆ ಅಭಿವೃದ್ದಿ ಶಿಲಾನ್ಯಾಸ

5 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕರ ಕಾಯರ್ ಮಾರ್ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ಕಲ್ಲಕಟ್ಟ ಕೊಲ್ಯ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

5 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪೊನ್ನೋಟು ದೇವಸ್ಯ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ವಿಟ್ಲ ಬಾಕಿಮಾರ್ ಅರಮನೆ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ಚಂದಪ್ಪಾಡಿ ರಸ್ತೆ ಹಾಗೂ 5 ಲಕ್ಷ ಅನುದಾನದಲ್ಲಿ ಗೊಳಿದಡಿ ದೈವಸ್ಥಾನದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ಪುಚ್ಚೆಗುತ್ತು ಮುಗೇರ ದೈವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

5 ಲಕ್ಷ ಅನುದಾನದಲ್ಲಿ ಅಪ್ಪೇರಿಪಾದೆ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

5 ಲಕ್ಷ ಅನುದಾನದಲ್ಲಿ ಉಕ್ಕುಡ ಸರೋಳಿಯಲ್ಲಿ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ್ಲಿ ಉಕ್ಕುಡ ದರ್ಬೆ ರಸ್ತೆ ಅಭಿವೃದ್ದಿ ಹಾಗೂ 5 ಲಕ್ಣ ಅನುದಾನದಲ್ಲಿ ಒಳರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ

10 ಲಕ್ಣ ಅನುದಾನದಲ್ಲಿ ಉಕ್ಕುಡ ದರ್ಬೆ ಜಂಕ್ಷನ್ ಅಭಿವೃದ್ದಿ,10 ಲಕ್ಷ ಅನುದಾನದಲ್ಲಿ ಕಾನತ್ತಡ್ಕ ದರ್ಬೆ ರಸ್ತೆ,5 ಲಕ್ಷ ಅನುದಾನದಲ್ಲಿ ಉಕ್ಕುಡ ದರ್ಬೆ ಒಳ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಡಿಸಿಸಿ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್,ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ್ ವಿಟ್ಲ, ಹಂಝ, ರಮನಾಥ ವಿಟ್ಲ , ಸುಧೀರ್ ಉಕ್ಕುಡ,ಸುರೇಶ್ ವಿಟ್ಲ, ಮುರಳೀ ನಾಯಕ್, ಅಬ್ದುಲ್ ರಹಿಮಾನ್ ಕಾಂತಡ್ಕ, ಅಬ್ದುಲ್ ರಹಿಮಾನ್ ಕುರುಂಬಳ,ಚಂದ್ರಹಾಸ ಗೌಡ, ಕೃಷ್ಣಯ್ಯ ವಿಟ್ಲ ಅರಮನೆ, ಆನಂದ ದರ್ಬೆ, ಗಿರಿಧರ್ ಪುಚ್ಚೆಗುತ್ತು, , ಎಸ್ ಕೆಮಹಮ್ಮದ್, ಸುನಿತಾ ಕೋಟ್ಯಾನ್ ಉಕ್ಕುಡ, ರವಿ ಬಿಕೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಫಲಾನುಭವಿಗಳು ಉಪಸ್ಥಿತರಿದ್ದರು.

Share News