COMMUNITY NEWSLATEST NEWS

ಮೋಂತಿ ಫೆಸ್ತ್; ವಿವಿಧ ಚರ್ಚ್ ಗಳಲ್ಲಿ ಮೇರಿ ಮಾತೆಯ ನೊವೆನಾ ಆರಂಭ

ಮಂಗಳೂರು: ಕೆಥೋಲಿಕ್ ಕ್ರೈಸ್ತರು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆಚರಿಸುವ ಮೇರಿ ಮಾತೆಯ ಜನನದ ಹಬ್ಬವಾದ ‘ಮೊಂತಿ ಫೆಸ್ತ್’ಗೆ ಪೂರ್ವಭಾವಿಯಾಗಿ ನಡೆಯುವ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಭಾನುವಾರದಿಂದ ಜಿಲ್ಲೆಯಾದ್ಯಂತ ಆರಂಭಗೊಂಡಿವೆ.

ಹಬ್ಬದ ಸಿದ್ಧತೆಯ ಮೊದಲ ದಿನವಾದ ಭಾನುವಾರ ಬೆಳಗ್ಗೆ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೊವೆನಾ ಪ್ರಾರ್ಥನೆಯೊಂದಿಗೆ ಮೇರಿ ಮಾತೆಯ ಮೂರ್ತಿಗೆ ಹೂಗಳನ್ನು ಅರ್ಪಿಸುವ ಭಕ್ತಿಪೂರ್ವಕ ಕಾರ್ಯಕ್ರಮ ಜರುಗಿತು. ಮುಂದಿನ 9 ದಿನಗಳ ಕಾಲ ಈ ನೊವೆನಾ ಪ್ರಾರ್ಥನೆಗಳು ನಿರಂತರವಾಗಿ ನಡೆಯಲಿದ್ದು, ಪ್ರತೀ ಚರ್ಚ್‌ಗಳಲ್ಲೂ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆಗಳು ಸಲ್ಲಿಕೆಯಾಗಲಿವೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ದೇಶ-ವಿದೇಶಗಳಲ್ಲಿ ಕೆಥೋಲಿಕ್ ಕ್ರೈಸ್ತರು ಈ ಆಚರಣೆಯನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ಮಂಗಳೂರು ಧರ್ಮ ಕೇಂದ್ರದ ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಪಕ್ಷಿಕೆರೆ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಸಿದರು.

ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಪಕ್ಷಿಕೆರೆ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಸಿದರು.

ಅಶೋಕನಗರ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ಸುರತ್ಕಲ್ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ಕೂಳೂರು ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ಬಾಂಬಿಲ್ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ದೇರೆಬೈಲ್ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ಬೋಂದೆಲ್ ಸಂತ ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ನೊವೆನಾ ಪ್ರಾರ್ಥನೆ ನಡೆಯಿತು.

ಪಾಲ್ದನೆ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನೆರವೇರಿತು

ಪೆರುವಾಯಿ ಫಾತಿಮಾ ಮಾತೆಯ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ ನೆರವೇರಿತು.

Share News