Tag: ಕೆನರಾಟಿವಿ

HOME LATEST NEWS

ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಮೆಲ್ವಿನ್ ಜೆ. ಪಿಂಟೋ ನಿಧನ

ಮಂಗಳೂರು: ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್, ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಮೆಲ್ವಿನ್ ಜೆ. ಪಿಂಟೋ ಅವರು ನಿಧನರಾಗಿದ್ದಾರೆ. ೧೯೬೩ರಲ್ಲಿ ಜನಿಸಿದ ಫಾದರ್ ಮೆಲ್ವಿನ್ ಪಿಂಟೋ ಅವರು ಸೇಂಟ್ ಅಲೋಶಿಯಸ್‌ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. 1981 ರಲ್ಲಿ ಜೆಸ್ಯೂಟ್ ಸಭೆಯನ್ನು ಸೇರಿದ ಇವರು, 1997 ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ಇಂಗ್ಲಿಷ್‌ನಲ್ಲಿ ಎಂ.ಎ, ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೈಕಾಲಜಿ ಮತ್ತು ಕೌನ್ಸೆಲಿಂಗ್‌ನಲ್ಲಿ […]

DAKSHINA KANNADA HOME LATEST NEWS

ಕೇರಳ ಸೇರಿ ಮೂರು ರಾಜ್ಯಗಳಲ್ಲಿ ಇಂದು ಮತದಾನ

ಮಂಗಳೂರು: ದೇಶದ ಗಮನ ಸೆಳೆದಿರುವ ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಈ ಮೂರೂ ರಾಜ್ಯಗಳಲ್ಲಿ ಸರ್ಕಾರ ರಚನೆಗಾಗಿ ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೇರಳ: ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಆಡಳಿತಾರೂಢ ಎಲ್‌ಡಿಎಫ್ (LDF) ಮತ್ತು ಪ್ರತಿಪಕ್ಷ ಯುಡಿಎಫ್ (UDF) ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡುತ್ತಿದೆ. ಅಸ್ಸಾಂ: ಅಸ್ಸಾಂನಲ್ಲಿ […]

DAKSHINA KANNADA HOME LATEST NEWS

ಸುಳ್ಯದಲ್ಲಿ ರಸ್ತೆಯ ಬದಿ ಕಸ: ಅಂಗಡಿ ಮಾಲೀಕನ ವಿರುದ್ಧ FIR ದಾಖಲು

ಮಂಗಳೂರು:- ಸುಳ್ಯ ತಾಲೂಕು ಐವರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾರೆ-ಸುಳ್ಯ ರಸ್ತೆಯ ಬೆಂಗಮಲೆ ಎಂಬಲ್ಲಿ ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಅಂಗಡಿ ಮಾಲಿಕರ ಮೇಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಸಾಂದರ್ಭಿಕ ಚಿತ್ರ ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಕಂಡು ಬಂದಿದ್ದು, ತೆರೆದು ಪರಿಶೀಲಿಸಿದಾಗ ಎಲ್ಲಾ ಮೂರೂ ತ್ಯಾಜ್ಯದ ಚೀಲಗಳಲ್ಲಿ ಸುಳ್ಯ ಗಾಂಧಿನಗರದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ರ್ಸ್ ಜೆರ್ಸಿ ಶಾಪ್ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡುಬಂದಿರುತ್ತದೆ. ಚೀಲಗಳಲ್ಲಿ ವಸ್ತ್ರ […]

DAKSHINA KANNADA HOME LATEST NEWS

ಆರಿಫ್ ಹತ್ಯೆ ಪ್ರಕರಣ: ಏಳು ಪ್ರಮುಖ ಆರೋಪಿಗಳ ಬಂಧನ- ವಿದೇಶದಿಂದ ಫಂಡಿಂಗ್‌

ಮಂಗಳೂರು: ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಲ್ಲಿ ನಡೆದ ರೌಡಿಶೀಟರ್‌ ಆರಿಫ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಕಂಡುಬಂದಿದ್ದು, ಪೊಲೀಸರು ಏಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮತ್ತು ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ಮಾಹಿತಿ ನೀಡಿದ್ದಾರೆ. ಆರಿಫ್  ಪ್ರಾಥಮಿಕ ತನಿಖೆಯಲ್ಲಿ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕೀರ್, ಇರ್ಫಾನ್ ಮತ್ತು ರಿಜ್ವಾನ್ ಸಹಿತ 7 ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು […]

LATEST NEWS

ಗೋ ಗ್ಯಾಸ್ ನಿಂದ ಆಟೋಗಳಿಗೆ 100 ರೂ ದರ ನಿಗಧಿ ಶಾಸಕ ಅಶೋಕ್ ರೈ ಮಾತುಕತೆ ಎಫೆಕ್ಟ್

ಪುತ್ತೂರು: ಪುತ್ತೂರಿನಲ್ಲಿರುವ ಗೋ ಗ್ಯಾಸ್ ಸಂಸ್ಥೆಯವರು ಆಟೋ ಗ್ಯಾಸ್ ಅಧಿಕ ಧರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪುತ್ತೂರಿನಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದರು. ಮಧ್ಯಾಹ್ನ ಎ ಸಿ ಕಚೇರಿಯಲ್ಲಿ ಗ್ಯಾಸ್ ವಿತರಕರ ಸಭೆ ನಡೆಸಿದ ಶಾಸಕರು ಹೆಚ್ಚು ದರ ವಸೂಲಿ ಮಾಡದಂತೆ ಸೂಚನೆ ನೀಡಿದ್ದು ಇದರ ಫಲವಾಗಿ ಇಂದು ಗೋ ಗ್ಯಾಸ್ ಸಂಸ್ಥೆಯವರು 120 ರ ಬದಲಾಗಿ 100 ರೂಗೆ […]

HOME INETRNATIONAL LATEST NEWS NATIONAL

Breaking: ಇರಾನ್ ನಲ್ಲಿರುವ ಭಾರತೀಯರಿಗೆ ತುರ್ತು ಸೂಚನೆ

ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಏಪ್ರಿಲ್ 7, 2026 ರಂದು ತುರ್ತು ಸೂಚನೆಯನ್ನು ಹೊರಡಿಸಿದೆ. ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಮುಂದಿನ 48 ಗಂಟೆಗಳ ಕಾಲ ತಾವಿರುವ ಸ್ಥಳದಲ್ಲೇ ಇರುವಂತೆ ಸೂಚಿಸಲಾಗಿದೆ. ಪ್ರಮುಖ ಮಾರ್ಗಸೂಚಿಗಳು ಇದ್ದಲ್ಲೇ ಇರಿ: ಮುಂದಿನ 48 ಗಂಟೆಗಳ ಕಾಲ ಮನೆಯಿಂದ ಹೊರಬರಬೇಡಿ. ಅಪಾಯಕಾರಿ ಸ್ಥಳಗಳಿಂದ ದೂರವಿರಿ: ವಿದ್ಯುತ್ ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಿಗೆ ಹೋಗಬೇಡಿ. ಹೋಟೆಲ್‌ನಲ್ಲಿರುವವರು: ರಾಯಭಾರ ಕಚೇರಿ ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ ಇರುವವರು ಒಳಾಂಗಣದಲ್ಲೇ ಇರಬೇಕು ಮತ್ತು ಅಲ್ಲಿನ […]

HOME NATIONAL

ಮಹಾಕುಂಭದಲ್ಲಿ ಖ್ಯಾತಿ ಗಳಿಸಿದ್ದ ಐಐಟಿ ಬಾಬಾ ಬೆಂಗಳೂರಿನ ಯುವತಿ ಜತೆ ವಿವಾಹ

ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್‌ ಮಹಾಕುಂಭದಲ್ಲಿ ಖ್ಯಾತಿ ಗಳಿಸಿದ್ದ ಐಐಟಿ-ವಾಲೆ ಬಾಬಾ ವಿವಾಹವಾಗಿದ್ದಾರೆ. ಬೆಂಗಳೂರಿನ ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಐಟಿ ವಾಲೆ ಬಾಬಾರ ನಿಜವಾದ ಹೆಸರು ಅಭಯ್‌ ಸಿಂಗ್.‌ ಹರಿಯಾಣದ ಜಜ್ಜರ್‌ ಜಿಲ್ಲೆಯವರು. ಬೆಂಗಳೂರಿನ ಎಂಜಿನಿಯರ್‌ ಪ್ರತೀಕಾ ಎಂಬವರನ್ನು ವರಿಸಿದ್ದಾರೆ. ತನ್ನ ತಂದೆಯನ್ನು ಭೇಟಿಯಾಗಲು ಜಜ್ಜರ್‌ಗೆ ಐಐಟಿ ವಾಲೆ ಬಾಬಾ ಭೇಟಿ ಕೊಟ್ಟಿದ್ದರು. ವಕೀಲರಾಗಿರುವ ತಮ್ಮ ತಂದೆಯನ್ನು ಭೇಟಿ ಮಾಡಲು ತಹಸಿಲ್ ಸಂಕೀರ್ಣಕ್ಕೆ ತೆರಳಿದ್ದರು. ಈ ವೇಳೆ ಪತ್ನಿ ಪ್ರತೀಕಾ ಕೂಡ ಜೊತೆಗಿದ್ದರು. ಕಳೆದ ವರ್ಷ […]

HOME LATEST NEWS

ಪೊಳಲಿ ಚೆಂಡು ಹಸ್ತಾಂತರ

ಮೂಡುಬಿದಿರೆ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ತಯಾರಿಸಲಾದ ಚೆಂಡನ್ನು ಸೋಮವಾರ ಮೂಡುಬಿದಿರೆಯಲ್ಲಿ ಪೊಳಲಿ ಕ್ಷೇತ್ರಕ್ಕೆ ಹಸ್ತಾಂತರಿಸಲಾಯಿತು. ನುರಿತ ಚಮ್ಮಾರ ಪದ್ಮನಾಭ ಅವರು 27 ವರ್ಷಗಳಿಂದ ಕ್ಷೇತ್ರದ ಜಾತ್ರೆಗೆ ಚೆಂಡು ತಯಾರಿಸಿಕೊಡುತ್ತಿದ್ದಾರೆ. ಈ ಚೆಂಡನ್ನು ಸೋಮವಾರ ಬೆಳಿಗ್ಗೆ ಪದ್ಮನಾಭ ಅವರ ಮನೆಯಂಗಳದಲ್ಲಿರುವ ಮಹಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪೂಜಿಸಲಾಯಿತು. ಬಳಿಕ ಪೊಳಲಿ ಕ್ಷೇತ್ರದ ಪರವಾಗಿ ಬಂದ ಕಡಪುಕರಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊಳಲಿ ತಂಡದಲ್ಲಿ ಕೃಷ್ಣಪ್ಪ ಕಲ್ಕುಡ, ಉಮೇಶ, ಪ್ರಸಾದ್ ಗಾಣಿಗ ನರಿಕೊಂಬು, ಪ್ರಕಾಶ್ ಕಲ್ಕುಡ, ಸತೀಶ್ ಹರೇಕಳ, […]

HOME LATEST NEWS NATIONAL

ತಂದೆ-ಮಗನ ಲಾಕಪ್‌ ಡೆತ್‌ ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ ಪ್ರಕಟ

ಚೆನ್ನೈ: 2020ರಲ್ಲಿ ಕೊರೊನಾ ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು […]

DAKSHINA KANNADA HOME LATEST NEWS

ಕರಾವಳಿ ಚರ್ಚ್‌ಗಳಲ್ಲಿ ಪಾಸ್ಕ ಹಬ್ಬದ ಸಂಭ್ರಮಾಚರಣೆ

ಮಂಗಳೂರು: ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆಯ ಬಲಿಪೂಜೆಗಳು ನಡೆಯಿತು. ಸಂಜೆ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ ಮಾಡುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ವ್ಯಕ್ತಿಗಳಾಗುವಂತೆ ಸಂದೇಶ ಸಾರಲಾಯಿತು. ಬೆಂಕಿ ಆಶೀರ್ವಚನ, ಮೆರವಣಿಗೆ, ಪಾಸ್ಕಾ ಗಾಯನ ನಡೆಯಿತು. ಹಳೆ ಹಾಗೂ […]