canaratvnews

ಮಂಗಳೂರು: ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ  ವರ್ಗಾವಣೆ

ಮಂಗಳೂರು:  ನಗರದ ಕಮೀಷನರೇಟ್‌ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ  ಇನ್ಸ್‌ಪೆಕ್ಟರ್‌ಗಳ  ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ ಕರಾವಳಿ ಕಾವಲು ಪಡೆಯ ಇನ್ಸ್‌ಪೆಕ್ಟರ್‌ ಪ್ರಮೋದ್ ಕುಮಾರ್ ಸುರತ್ಕಲ್ ಠಾಣೆಗೆ , ಚಿಕ್ಕಮಗಳೂರು ಸೆನ್ ಠಾಣೆಯಿಂದ ಗವಿರಾಜು ಆರ್.ಪಿ.ಗ್ರಾಮಾಂತರ ಪೊಲೀಸ್ ಠಾಣೆಗೆ, ಮಂಗಳೂರು ಕರಾವಳಿ ಕಾವಲು ಪಡೆಯಿಂದ ಅನಂತಪದ್ಮನಾಭ ಪೂರ್ವ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಗಣೇಶ್ ಕೆ.ಎಲ್.ಅವರನ್ನು ಆದೇಶ ಮಾರ್ಪಡಿಸಿ ಉಡುಪಿ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

Share News
Exit mobile version