ಮಂಗಳೂರು: ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಹಿತ ಮೂವರ ಬಂಧನ
ಮಂಗಳೂರು: ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಆಡೂರಿನ ಮಸೂದ್ ಎಂ.ಕೆ. (45), ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಮುಹಮ್ಮದ್ ಆಶಿಕ್ (24) ಮತ್ತು ಸುಬೇರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸಾಗಾಟಕ್ಕೆ ಬಳಸಿದ ಎರಡು ಕಾರು ಮತ್ತು 123 ಕೆ.ಜಿ. ಗಾಂಜಾ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಆರೋಪಿಗಳು ಗಾಂಜಾವನ್ನು ಆಂಧ್ರಪ್ರದೇಶದಿಂದ ತಂದು ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಮಾರಾಟ […]