ಮಂಗಳೂರು: ಟ್ರಾಫಿಕ್ ಫೈನ್ ಮೇಲೆ 50% ರಿಯಾಯಿತಿ- ಸೆ.12ರವರೆಗೆ ಮಾತ್ರ
ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ವಾಹನಿಗರಿಗೆ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳುವುದಕ್ಕಾಗಿ ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಲು ಆ.23ರಿಂದ ಸೆ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಬಳಿ (ಎಎಸ್‌ಐ-ಪಿಐ ಡಿವೈಸ್) ಲಾಲ್‌ಬಾಗ್‌ನಲ್ಲಿರುವ ಮನಪಾ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳಲ್ಲಿ ಪಾವತಿಸಬಹುದು. ಉಳಿದಂತೆ ಕದ್ರಿಯ ಪೂರ್ವ ಸಂಚಾರ ಠಾಣೆ, ಪಾಂಡೇಶ್ವರದ ಪಶ್ಚಿಮ ಸಂಚಾರ ಠಾಣೆ, ಬೈಕಂಪಾಡಿಯ ಮಂಗಳೂರು ಉತ್ತರ ಠಾಣೆ, ಜಪ್ಪಿನಮೊಗರಿನ ದಕ್ಷಿಣ ಸಂಚಾರ ಠಾಣೆ […]