ಜೆರುಸಲೆಮ್ ನಗರದ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ
ಜೆರುಸಲೆಮ್: ಇರಾನ್ ನಿಂದ ಉಡಾಯಿಸಲಾದ ಕ್ಷಿಪಣಿಗಳು ಇಸ್ರೇಲ್ ಜೆರುಸಲೆಮ್ ನಗರದ ಮೇಲೆ ನೇರ ದಾಳಿ ನಡೆಸಿವೆ. ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಹಾರಿಸಲ್ಪಟ್ಟಿರುವುದನ್ನು ಇಸ್ರೇಲ್ ಸೇನೆ ಪತ್ತೆಹಚ್ಚಿದ ಬಳಿಕ ಪಶ್ಚಿಮ ಜೆರುಸಲೆಮ್ ನಲ್ಲಿ ವಾಯುದಾಳಿ ಎಚ್ಚರಿಕಾ ಸೈರನ್‌ಗಳು ಮೊಳಗಿದವು. ಇದಾದ ನಂತರ ನಗರದಲ್ಲಿ ಜೋರಾಗಿ ಸರಣಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ. “ಸ್ವಲ್ಪ ಸಮಯದ ಹಿಂದೆ, ಇರಾನ್ ನಿಂದ ಇಸ್ರೇಲ್ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ನಾವು ಗುರುತಿಸಿದ್ದೇವೆ,” ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. “ಅಪಾಯವನ್ನು […]











