canaratvnews

ಮಂಗಳೂರು: ನಂತೂರಿನಲ್ಲಿ ಯುವತಿ ಹೊಟ್ಟೆ ಮೇಲೆ ಹರಿದ ಸಿಟಿ ಬಸ್ಸು

ಮಂಗಳೂರು: ಸಿಟಿ ಬಸ್‌ಗಳ ಅವಸರದ ವೇಗಕ್ಕೆ ಮತ್ತೊಂದು ಜೀವವೊಂದು ನಿನ್ನೆ ಬಲಿಯಾಗಿದೆ. ನಂತೂರು ಬಸ್ ಸ್ಟಾಪ್ ಬಳಿ ಸ್ಕೂಟರಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಸಹ ಸವಾರೆಯೊಬ್ಬರ ಹೊಟ್ಟೆಯ ಮೇಲೆ ಬಸ್ಸು ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ನಗರದ ಬಳ್ಳಾಲ್‌ಭಾಗ್‌ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ.

ಘಟನೆ ವಿವರ

ನಿನ್ನೆ ರಾತ್ರಿ ಸಮಯ ಸುಮಾರು 7-45 ಗಂಟೆಗೆ ನಂತೂರು ಬಸ್ಟ್ಯಾಂಡ್ ಬಳಿ ಬಲ್ಲಾಳ್ ಭಾಗ್ ಕಡೆಯಿಂದ ವಾಮಂಜೂರು ಕಡೆಗೆ KA- 19HT-8178 ನಂಬರ್‌ನ ಸ್ಕೂಟರ್‌ನಲ್ಲಿ ಕಿಶೋರ್ ಹಾಗೂ ಸಹಸವಾರೆಯಾಗಿ ದೀಪ್ತಿ ತೆರಳುತ್ತಿದ್ದರು. ಈ ವೇಳೆ ನಂತೂರು ಬಸ್ ಸ್ಟಾಪ್ ಬಳಿ ಸ್ಕೂಟರಿಗೆ ಹಿಂದಿನಿಂದ ಅತೀ ವೇಗದಿಂದ ಬಂದ ರೂಟ್‌ ನಂ.22ರ  ಶ್ರೀ ಗಣೇಶ ಎಂಬ ಹೆಸರಿನ KA-19D-5868 ನಂಬ್ರದ ಬಸ್ಸು ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ಸವಾರ ಕಿಶೋರ್‌ ಹಾಗೂ ಸಹ ಸವಾರೆ ದೀಪ್ತಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ದೀಪ್ತಿ ಬಸ್ಸಿನ ಚಕ್ರದ ಮುಂಭಾಗಕ್ಕೆ ಸಿಲುಕಿ ಮುಂದೆ ತಳ್ಳಲ್ಪಟ್ಟು ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Share News
Exit mobile version