ಇಂದು ಮಂಗಳೂರಿಗೆ CM & DCM: ಸಂಚಾರ ವ್ಯತ್ಯಯ ಸಾಧ್ಯತೆ
ಮಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಲ ಮತ್ತು ನರಿಂಗಾನ ಹಾಗೂ ಅಂಬ್ಲಮೊಗರುವಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇವರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. ಹಾಗಾಗಿ ಸುಗಮ ಸಂಚಾರದ ದೃಷ್ಟಿಯಿಂದ ತುರ್ತು ಸಂದರ್ಭ ಹೊರತುಪಡಿಸಿ ಈ ಮಾರ್ಗಗಳಲ್ಲಿ ಸಂಚರಿಸದೆ ಬದಲಿ ಮಾರ್ಗ ಉಪಯೋಗಿಸು ವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಸಂಚಾರ ದಟ್ಟಣೆಯಾಗುವ ಮಾರ್ಗಗಳು: ಕೆಂಜಾರು ಜಂಕ್ಷನ್, ಮರವೂರು, ಕಾವೂರು, ಬೋಂದೆಲ್, ಪದವಿನಂಗಡಿ, […]






