canaratvnews

ಒಂದೂವರೆ ವರ್ಷದ ಮಗುವಿನ ಕೈ ಹಾಗೂ ಹೊಟ್ಟೆ ಮೇಲೆ ಚಲಿಸಿದ ಕಾರು….!

ಮಂಗಳೂರು: ಒಂದೂವರೆ ವರ್ಷದ ಮಗುವಿನ ಕೈ ಹಾಗೂ ಹೊಟ್ಟೆಯ ಮೇಲೆ ಕಾರೊಂದು ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದ ಬಿಜೈ ಕಾಪಿಕಾಡ್‌ನಲ್ಲಿ ನಡೆದಿದೆ.

ಘಟನೆ ವಿವರ

ನಿಂಗಪ್ಪ ಎಂಬವರು ನಗರದ ಬಿಜೈ ಕಾಪಿಕಾಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು,  ಏ.9 ರಂದು ಅಪಾರ್ಟ್ ಮೆಂಟಿನ ಮುಖ್ಯಗೇಟಿನ ಬಲ ಬದಿಯಲ್ಲಿ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದರು.

ಈ ವೇಳೆ ಜೊತೆಯಲ್ಲಿ ತನ್ನ (1 ½) ವರ್ಷದ ಮಗು ಬೇಬಿ ಪ್ರಜ್ವಲ್ ಹರಿಜನ ಎಂಬವನು ಆಚೆ ಈಚೆ ಅಂಬೆ ಕಾಲಿನಲ್ಲಿ ನಡೆದಾಡುತ್ತಿದ್ದು, ಇದೇ ವೇಳೆ ಬಿಜೈ ಕಾಪಿಕಾಡ್ ರಸ್ತೆ ಕಡೆಯಿಂದ ಬಂದ KA-05-MM-8454 ನೋಂದಣಿಯ ಕಾರನ್ನು ಅದರ ಚಾಲಕ ಸುರೇಶ್‌ ಎಂಬಾತ ಅಜಾಗರೂಕತೆಯಿಂದ ಅಪಾರ್ಟ್ ಮೆಂಟಿನ ಮೈನ್ ಗೇಟ್ ನ ಒಳಗೆ ತಂದಿದ್ದಾನೆ.

ಈ ವೇಳೆ ಅಲ್ಲೇ ಆಚೆ ಈಚೆ ಅಂಬೆ ಕಾಲಿನಲ್ಲಿ ನಡೆದಾಡಿಕೊಂಡಿದ್ದ ಬೇಬಿ ಪ್ರಜ್ವಲ್ ಹರಿಜನ ಮಗುವಿಗೆ ಕಾರು ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಮಗು ಅಲ್ಲೇ ಕೆಳಗೆ ಬಿದ್ದಾಗ ಕಾರಿನ ಎದುರಿನ ಎಡಬದಿಯ ಚಕ್ರ ಮಗುವಿನ ಕೈ ಹಾಗೂ ಹೊಟ್ಟೆಯ ಮೇಲೆ ಚಲಿಸಿದೆ.

ಇದರಿಂದ ತಕ್ಷಣ ಮಗು ಪ್ರಜ್ಞಾಹೀನಗೊಂಡಿದ್ದು, ತಕ್ಷಣ ಅದೇ ಕಾರಿನಲ್ಲಿಯೇ ಖಾಶಘೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು, ಮಗುವಿನ ಎರಡೂ ಕೈಗಳ ತೋಳು ಭಾಗದಲ್ಲಿ ಮೂಳೆ ಮುರಿತದ ಗಾಯ, ಕಿಡ್ನಿ ಮತ್ತು ಲಿವರ್ ಗೆ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ ತಿಳಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.

Share News
Exit mobile version