Tag: ಮಂಗಳೂರು

DAKSHINA KANNADA HOME LATEST NEWS

ವಿಟ್ಲ-ಮಂಗಳೂರು ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಇರ್ಫಾನ್

ಮಂಗಳೂರು: ಖಾಸಗಿ ಬಸ್‌ನ ಕಂಡಕ್ಟರ್‌ನೋರ್ವ ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾದ ಘಟನೆ ಮಂಗಳೂರು-ವಿಟ್ಲ ರೂಟಿನ ಸೆಲೀನಾ ಬಸ್‌ನಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿಯಾದ ಇರ್ಫಾನ್ (32) ಮಂಗಳೂರು-ವಿಟ್ಲ ರೂಟಿನ ಸೆಲೀನಾ ಬಸ್‌ನಲ್ಲಿ ಕಂಡಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಆತ ಜು.9 ರಂದು ಸಂಜೆ ಸುಮಾರು 5:00 ಗಂಟೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶನ ಮಾಡಿದ್ದಾನೆ. ಜೊತೆಗೆ ಅಸಭ್ಯವಾದ […]

DAKSHINA KANNADA HOME LATEST NEWS NATIONAL STATE

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಎಂಟು ಬಾಂಗ್ಲಾದ ಪ್ರಜೆಗಳ ಬಂಧನ

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಮುಹಮ್ಮದ್‌ ಮುಖ್ತಾರ್‌ ಅಲಿ (36), ಮುಹಮ್ಮದ್‌ ರಾಕಿಬುರ್‌ ಹುಸೈನ್‌ (44), ಮುಹಮ್ಮದ್‌ ಅಝರುಲ್‌ ಇಸ್ಲಾಂ (36), ಮುಹಮ್ಮದ್‌ ಝೈದ್‌ ಹುಸನ್‌ (18), ಮುಹಮ್ಮದ್‌ ಬಿಲಾಲ್‌ ಹುಸೈನ್‌ (36), ಮುಹಮ್ಮದ್‌ ಹಾಸಿಬುಲ್‌ ಹಸನ್‌ ಶನ್ಟೊ (37), ಮುಹಮ್ಮದ್‌ ಸಮೀವುಲ್‌ ಹಸನ್‌ (23) ಮತ್ತು […]

DAKSHINA KANNADA HOME LATEST NEWS

ಉದ್ಯೋಗಾವಕಾಶ: ಜು.14 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರು: ಕೋಟಕ್ ಮಹೀಂದ್ರಾ ಬ್ಯಾಂಕ್, ಮಂಗಳೂರು ಮತ್ತು ಗೋಲ್ಡನ್ ವಿಂಗ್ಸ್ ಲಿಫ್ಟ್ ಮತ್ತು ಎಲಿವೇಟರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಮತ್ತು ಸಂಭವ್ ಪೌಂಡೇಶನ್, ಬೆಂಗಳೂರು ವತಿಯಿಂದ ಖಾಲಿ ಇರುವ ಅಸಿಸ್ಟಂಟ್ ಮ್ಯಾನೇಜರ್, ಹೆಚ್.ಆರ್ ಮತ್ತು ಟೆಲಿಕಾಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಲಿಪ್ಸ್ ಟೆಕ್ನಿಶಿಯನ್, ಇ.ವಿ ಇಲೆಕ್ಟ್ರಿಶಿಯನ್, ಇಲೆಕ್ಟ್ರಿಶಿಯನ್, ಸಿ.ಎನ್.ಸಿ. ಆಪರೇಟರ್, ಹೆಲ್ಪರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಜುಲೈ 14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ […]

DAKSHINA KANNADA HOME LATEST NEWS

ಮಂಗಳೂರಿನಲ್ಲಿ ಭಾರೀ ಮಳೆಗೆ ಮನೆ ಕುಸಿತ: ಮೂವರ ದುರ್ಮರಣ

ಮಂಗಳೂರು: ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಮನೆಯೊಂದು ಕುಸಿದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಹೆಣ್ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಅವಘಡದ ವೇಳೆ ಒಟ್ಟು ಆರು ಮಂದಿ ಮನೆಯಲ್ಲಿ ಇದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು, ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ […]

HOME LATEST NEWS

MCC ಬ್ಯಾಂಕ್‌ನಿಂದ ₹1,535 ಕೋಟಿ ವ್ಯವಹಾರ: 22 ನೇ ಶಾಖೆ ದೇರಳಕಟ್ಟೆ & 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

ಮಂಗಳೂರು: 114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್, 31 ಮಾರ್ಚ್ 2026ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಹಕಾರ ರತ್ನ ಪುರಸ್ಕೃತ ಹಾಗೂ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಅವರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಒಟ್ಟು ವ್ಯವಹಾರ ವಹಿವಾಟಿನಲ್ಲಿ 22.89% ಬೆಳವಣಿಗೆಯೊಂದಿಗೆ ರು. 1535 ಕೋಟಿ ಮೈಲಿಗಲ್ಲನ್ನು ತಲುಪಿದೆ. ಬ್ಯಾಂಕಿನ ನಿವ್ವಳ ಮೌಲ್ಯ ರು. 83.76 ಕೋಟಿಯಿಂದ ರು. […]

HOME LATEST NEWS

ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಮೆಲ್ವಿನ್ ಜೆ. ಪಿಂಟೋ ನಿಧನ

ಮಂಗಳೂರು: ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್, ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಮೆಲ್ವಿನ್ ಜೆ. ಪಿಂಟೋ ಅವರು ನಿಧನರಾಗಿದ್ದಾರೆ. ೧೯೬೩ರಲ್ಲಿ ಜನಿಸಿದ ಫಾದರ್ ಮೆಲ್ವಿನ್ ಪಿಂಟೋ ಅವರು ಸೇಂಟ್ ಅಲೋಶಿಯಸ್‌ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು. 1981 ರಲ್ಲಿ ಜೆಸ್ಯೂಟ್ ಸಭೆಯನ್ನು ಸೇರಿದ ಇವರು, 1997 ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ಇಂಗ್ಲಿಷ್‌ನಲ್ಲಿ ಎಂ.ಎ, ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೈಕಾಲಜಿ ಮತ್ತು ಕೌನ್ಸೆಲಿಂಗ್‌ನಲ್ಲಿ […]

DAKSHINA KANNADA HOME LATEST NEWS

ಕೇರಳ ಚುನಾವಣೆ: ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ- ಜಿಲ್ಲಾಧಿಕಾರಿ

ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಎ.7 ಸಂಜೆ 5ಗಂಟೆಯಿಂದ ಎಪ್ರಿಲ್ 9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 4ರ ಮಧ್ಯರಾತ್ರಿ 12 ಗಂಟೆಯ ತನಕ ‘‘ಒಣ ದಿನ’’ ಎಂದು ಘೋಷಿಸಿ ಈ ದಿನಗಳಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಗಡಿಭಾಗದ […]

DAKSHINA KANNADA HOME LATEST NEWS STATE

ಕೊನೆಗೂ ಹಾಜಬ್ಬರಿಗೆ ಗೌರವ ಡಾಕ್ಟರೇಟ್‌ ಕೊಡಲು ಮನಸ್ಸು ಮಾಡಿದ ಮಂಗಳೂರು ವಿವಿ

ಮಂಗಳೂರು: ವಿವಿಯ ಕೂಗಳತೆ ದೂರದಲ್ಲಿದ್ದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಕೊನೆಗೂ ಮಂಗಳೂರು ವಿಶ್ವವಿದ್ಯಾಲಯ ಈ ಬಾರಿಯ ಮಂಗಳೂರು ವಿವಿಯ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ. ತನ್ನ ಒಡಲಲ್ಲೇ ಇದ್ದ ಒಬ್ಬ ಸಾಧಕನನ್ನು ಬಿಟ್ಟು ಊರ-ಪರವೂರ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ ನೀಡುತ್ತಿದ್ದ ಮಂಗಳೂರು ವಿವಿ ಕೊನೆಗೂ ಹರೇಕಳ ಹಾಜಬ್ಬರಿಗೆ ಈ ಬಾರಿ ಡಾಕ್ಟರೇಟ್‌ ಪ್ರದಾನ ಮಾಡಲು ಮನಸ್ಸು ಮಾಡಿದೆ. ಹರೇಕಳ ಹಾಜಬ್ಬ ಮೂರು ದಶಕಗಳ ಹಿಂದೆಯೇ ತನ್ನೂರಿಗೆ ಶಾಲೆ ಬೇಕೆಂದು ಕನಸು ಕಂಡಿದ್ದವರು.  ಅದರಕ್ಕಾಗಿ ರಾಜಕೀಯ ನೇತರಾರು, […]

COMMUNITY NEWS HOME

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

ಮಂಗಳೂರು: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಕೇಂದ್ರ ಮಂಡಳಿ ಮತ್ತು ಬೆಂದೂರು ಕಾನ್ಫರೆನ್ಸ್‌ನ ಸಹಯೋಗದೊಂದಿಗೆ ಇತ್ತೀಚೆಗೆ ಬೆಂದೂರು ಚರ್ಚ್ ಸಭಾಂಗಣದಲ್ಲಿ ಅರ್ಥಪೂರ್ಣ ಸಂವಾದಾತ್ಮಕ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 10:30ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಮಂಗಳೂರು ಕೇಂದ್ರ ಮಂಡಳಿಯ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫಾದರ್ ಫ್ಲೇವಿಯನ್ ಲೋಬೊ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ಮತ್ತು ಶ್ರೀ ಜ್ಯೊ ಕುವೆಲ್ಹೊ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. […]

DAKSHINA KANNADA HOME LATEST NEWS

ಗ್ಯಾರೇಜ್‌ನಿಂದ ಬಿಡಿಭಾಗ ಕಳವು: ಓರ್ವನ ಬಂಧನ

ಸುರತ್ಕಲ್ : ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕಳವು ಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿ ಸದ್ಯ ಬೆಂಗಳೂರಿನ ಬನಶಂಕರಿ ಶ್ರೀನಿವಾಸ ನಗರ ನಿವಾಸಿ ಮುಖೇಶ್ ದಾಸ್ ( 46) ಬಂಧಿತ ಆರೋಪಿ. ಆರೋಪಿಯ ಬಳಿಯಿದ್ದ 96 ಸಾವಿರ ರೂ. ಮೌಲ್ಯದ ವಾಹನಗಳ ಬಿಡಿಭಾಗಗಳು, ಕೃತ್ಯಕ್ಕೆ ಬಳಸಿದ್ದ 15 ಲಕ್ಷ ರೂ.‌ಮೌಲ್ಯದ ಈಚರ್ ಲಾರಿ ಸೇರಿದಂತೆ 15.96 ಲಕ್ಷ ರೂ.‌ಮೌಲ್ಯದ ಸೊತ್ತುಗಳನ್ನು ಪೊಲೀಸರು […]