HOMELATEST NEWSSTATE

ರಾಜ್ಯದಲ್ಲಿ 3 ತಿಂಗಳಲ್ಲಿ 3,202 HIV ಪ್ರಕರಣಗಳು ದೃಢಪಟ್ಟಿದೆ: ಸಚಿವ ಖಾದರ್

ಬೆಂಗಳೂರು : 2026ರ ಎಪ್ರಿಲ್ ನಿಂದ ಜೂನ್ ವರೆಗೆ ಅಂದರೆ 3ತಿಂಗಳಲ್ಲಿ ಒಟ್ಟು 3,202ಎಚ್‍ಐವಿ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2004ರಿಂದ ಇಲ್ಲಿಯ ವರೆಗೂ 39,028 ಎಚ್‍ಐವಿ ಸೋಂಕಿತರು 18 ರಿಂದ 35 ವಯೋಮಾನದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಹಾಗೂ ಅಪಾಯ ಹಂಚಿನಲ್ಲಿರುವ ಜನರಲ್ಲಿ ಸುಮಾರು 56 ಸಾವಿರ ಎಚ್‍ಐವಿ ಪರೀಕ್ಷೆಗೆ ಒಳಪಡದೆ ಉಳಿದಿರುತ್ತಾರೆ. ಆದುದರಿಂದ ತಮ್ಮ ಎಚ್‍ಐವಿ ಸ್ಥಿತಿಯನ್ನು ತಿಳಿದುಕೊಳ್ಳಲು breakfreeindia.org-HIV Self Risk Assessment QR Code scan ಅನ್ನು ಸ್ಕ್ಯಾನ್ ಮಾಡಿ, ಅಪಾಯವಿದ್ದರೆ ಎಚ್‍ಐವಿ ಪರೀಕ್ಷೆಗೆ ಒಳಪಡಲು ಸೂಚಿಸಲಾಗಿದೆ ಎಂದರು.

ಜೊತೆಗೆ ರಾಜ್ಯದ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಎಚ್‍ಐವಿ ಸೋಂಕು ತಗುಲಿದೆ ಮತ್ತು ಸರಕಾರವು ಕಾಲೇಜುಗಳಲ್ಲಿ ಎಚ್‍ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಎಚ್‍ಐವಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶಿದಿಂದ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷ(ಎಂಎಎಸ್) ಕಾರ್ಯಕ್ರಮವನ್ನು ಹಾಗೂ ಎಚ್‍ಐವಿ/ಏಡ್ಸ್ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 8 ತಿಂಗಳ ರೆಡ್ ರಿಬ್ಬನ್ ಜಾಗೃತಿ ಅಭಿಯಾನದಲ್ಲಿ ಪ್ರತಿ ತಿಂಗಳು ವಿವಿಧ ಕಾರ್ಯಚಟುವಟಿಕಗಳನ್ನು ಹಮ್ಮಿಕೊಳ್ಳಲಾಗುವುದು. ಎಚ್‍ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ, 2017ರ ಪ್ರಕಾರ ಯಾವುದೇ ವ್ಯಕ್ತಿಗೆ ಎಚ್‍ಐವಿ ಪರೀಕ್ಷೆ ಕಡ್ಡಾಯಗೊಳಿಸಲು ಅವಕಾಶ ಇರುವುದಿಲ್ಲ. ಆದಕಾರಣ ಕಡ್ಡಾಯಗೊಳಿಸಲಾಗಿಲ್ಲ ಎಂದು ಮಾಹಿತಿ ನೀಡಿದರು.

Share News