ಮಂಗಳೂರು :ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇಡೀ ಕರ್ನಾಟಕ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ ಹಾಗೂ ವಂಚನೆಯ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಹಿಂದೂ ಮಹಿಳೆಗೆ ತಕ್ಷಣದ ಕಾನೂನು, ಮಾನಸಿಕ, ವೈದ್ಯಕೀಯ ಮತ್ತು ಸಾಮಾಜಿಕ ನೆರವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉನ್ನತ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಕರ್ನಾಟಕವು ರಾಜ್ಯಮಟ್ಟದ

“ಹಿಂದೂ ಮಹಿಳಾ ಸಹಾಯವಾಣಿ (88844 37733)” ವಿಶ್ವ ಹಿಂದೂ ಪರಿಷತ್ ಕರ್ನಾಟಕವು ರಾಜ್ಯಮಟ್ಟದ ಯೋಜನೆಯನ್ನು ಬೆಂಗಳೂರಿನ ‘ಧರ್ಮಶ್ರೀ’ ವಿಹೆಚ್‌ಪಿ ಕಾರ್ಯಾಲಯದಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ.


ಈ ಸಹಾಯವಾಣಿಯಲ್ಲಿ ಮಹಿಳಾ ವಕೀಲರು, ಕ್ರಿಮಿನಲ್ ಮತ್ತು ಕುಟುಂಬ ಕಾನೂನು ವಕೀಲರು, ಮನೋವೈದ್ಯರು, ಆಪ್ತಸಮಾಲೋಚಕರು, ಸಮಾಜಸೇವಕರು, ವೈದ್ಯರು, ಸೈಬರ್ ಭದ್ರತಾ ತಜ್ಞರು, ಕಾನೂನು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ “ಮಹಿಳಾ ಸುರಕ್ಷಾ ಸಮಿತಿ” ರಚಿಸಿ, ಸಹಾಯವಾಣಿಗೆ ಬಂದ ಪ್ರತಿಯೊಂದು ಪ್ರಕರಣವನ್ನು ಜವಾಬ್ದಾರಿಯುತವಾಗಿ ಪರಿಶೀಲಿಸಲಾಗುತ್ತದೆ. ಸಂತ್ರಸ್ತರಿಗೆ ಕಾನೂನು ಸಲಹೆ, ಸಮಾಲೋಚನೆ ನೀಡುವುದರೊಂದಿಗೆ ಅಗತ್ಯವಿದ್ದಲ್ಲಿ ಆಸ್ಪತ್ರೆಗಳು, ಆಶ್ರಯಗ್ರಹಗಳು ಹಾಗೂ ಇತರ ಸೇವಾಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪುನರ್ವಸತಿ ನೆರವು ಒದಗಿಸಲಾಗುತ್ತದೆ

ನಮ್ಮ ಮಹಿಳೆಯರ ಸುರಕ್ಷತೆ, ಗೌರವ, ನ್ಯಾಯ ಮತ್ತು ಸಬಲೀಕರಣಕ್ಕೆ ಕಾನೂನುಬದ್ಧ ಹಾಗೂ ಮಾನವೀಯ ನೆರವು ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನೆರವಿನ ಅಗತ್ಯವಿರುವ ಸಂಕಷ್ಟದಲ್ಲಿರುವ ಮಹಿಳೆಯರು ಈ ಸಹಾಯವಾಣಿಯ ಉಪಯೋಗ ಪಡೆಯಬೇಕು ಮತ್ತು ಸಮಾಜ ಬಾಂಧವರು ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಹಕರಿಸಬೇಕು.
“ಶರಣ್ ಪಂಪ್ ವೆಲ್ ವಿಶ್ವ ಹಿಂದೂ ಪರಿಷದ್
