DAKSHINA KANNADAHOMELATEST NEWS

ವಾಮಂಜೂರಿನಲ್ಲಿ ಬರೋಬ್ಬರಿ 10 ಕ್ವಿಂಟಾಲ್‌ ಪಡಿತರ ಅಕ್ಕಿ ವಶ: ಅಕ್ರಮ ಸಾಗಾಟಕ್ಕೆ ಬಳಸಿದ 2 ರಿಕ್ಷಾ ಸೀಝ್‌

ಮಂಗಳೂರು: ಎರಡು ರಿಕ್ಷಾಗಳಲ್ಲಿ ಬರೋಬ್ಬರಿ 10 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ವಿವರ

ಜು.28ರಂದು ನಗರ ಹೊರವಲಯದ ವಾಮಂಜೂರು ಮಸೀದಿ ಬಳಿ ಸಂಜೆ 4 ಗಂಟೆಗೆ ಖಚಿತ ಮಾಹಿತಿ ಮೇರೇಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ  KA-19-AE-5831 ಮತ್ತು KA-19-AC-6084 ನೇ ನಂಬ್ರದ ಆಟೋ ರಿಕ್ಷಾಗಳಲ್ಲಿ ಪಡಿತರ ಅಕ್ಕಿಗಳನ್ನು ಗೋಣಿಯಲ್ಲಿ ತುಂಬಿಸಿ ಲೋಡ್ ಮಾಡಿದ್ದು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ  ಬಳಿಕ ಆಟೋ ರಿಕ್ಷಾ ಸಹಿತ ಅಕ್ಕಿಯನ್ನು ಠಾಣೆಗೆ ತಂದಿದ್ದಾರೆ.

ಪರಿಶೀಲನೆ ವೇಳೆ  KA-19-AE-5831 ನೇ ನಂಬ್ರದ ಆಟೋ ರಿಕ್ಷಾದಲ್ಲಿ ಒಟ್ಟು 15,872 ರೂ ಮೌಲ್ಯದ 4 ಕ್ವಿಂಟಲ್ 96 ಕೆ.ಜಿ ಕೆ.ಜಿ. ಪಡಿತರ ಅಕ್ಕಿಯನ್ನು CHOTU BRAND ಎಂದು ಹೆಸರಿರುವ ಬಿಳಿ ಬಣ್ಣದ 11 ಪಾಲಿಥಿನ್ ಗೋಣಿ ಚೀಲಗಳಲ್ಲಿ, KA-19-AC-6084 ನೇ ನಂಬ್ರದ ಆಟೋ ರಿಕ್ಷಾದಲ್ಲಿ ಒಟ್ಟು 15,968/- ಮೌಲ್ಯದ 4 ಕ್ವಿಂಟಲ್ 99 ಕೆ.ಜಿ ಪಡಿತರ ಅಕ್ಕಿಯನ್ನು CHOTU BRAND ಎಂದು ಹೆಸರಿರುವ ಬಿಳಿ ಬಣ್ಣದ 11 ಪಾಲಿಥಿನ್ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದಾರೆ.

ಈ ಎರಡೂ ಆಟೋ ರಿಕ್ಷಾಗಳಲ್ಲಿ ಇದ್ದ ಅಕ್ಕಿ ಮೇಲ್ನೋಟಕ್ಕೆ ಸರಕಾರದ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯಂತೆ ಕಂಡು ಬಂದಿದೆ. ಈ ಅಕ್ಕಿಯನ್ನು ಎರಡೂ ರಿಕ್ಷಾಗಳ ಚಾಲಕ ಮತ್ತು ಮಾಲಕರು ಅಕ್ರಮವಾಗಿ ಸಾಗಾಟ ಮಾಡಿದ್ದು, ಈ ಹಿನ್ನೆಲೆ ಅಕ್ಕಿ ಹಾಗೂ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share News