canaratvnews

ಯೆಯ್ಯಾಡಿಯಲ್ಲಿ ಚೂರಿ ಇರಿತಕ್ಕೊಳಗಾದ ಯುವಕ ಸಾ*ವು

ಮಂಗಳೂರು: ಜೂನ್ 6ರಂದು ಯೆಯ್ಯಾಡಿಯಲ್ಲಿ ನಡೆದ ಚೂರಿ ಇರಿತದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಕೌಶಿಕ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟರೆಂದು ತಿಳಿದು ಬಂದಿದೆ.

ಜೂ.6ರಂದು ಯೆಯ್ಯಾಡಿಯ ಬಾರೊಂದರ ಬಳಿ ಜಗಳ ನಡೆದು ಬಿಜೈ ನಿವಾಸಿ ಬ್ರಿಜೇಶ್ ಶೆಟ್ಟಿ ಎಂಬಾತ ಕೌಶಿಕ್‌ ಗೆ ಚೂರಿ ಇರಿದಿದ್ದ. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಕೌಶಿಕ್‌ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೌಶಿಕ್‌ ಇಂದು ಆಸ್ಪತ್ರೆಯಲ್ಲಿ ಮತಪಟ್ಟರೆಂದು ತಿಳಿದು ಬಂದಿದೆ. ಈ ದಾಳಿ ಇಬ್ಬರ ನಡುವಿನ ಹಳೇ ವೈಷಮ್ಯದ ಕಾರಣದಿಂದ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Share News
Exit mobile version