• Home  
  • ಪ್ರಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ: ಚಂಚಲ ತೇಜೋಮಯ
- LATEST NEWS

ಪ್ರಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ: ಚಂಚಲ ತೇಜೋಮಯ

ಮಂಗಳೂರು: ಪ್ರಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯವಾಗಿದೆ ಎಂದು ಯಶಸ್ವಿನಿ ಮಹಿಳಾ ಮಂಡಳಿಯ ಸ್ಥಾಪಕಾಧ್ಯಕ್ಷರು ಹಾಗೂ ಶ್ರೇಷ್ಠ ಸಹಕಾರಿ ಪುರಸ್ಕೃತರಾದ ಶ್ರೀಮತಿ ಚಂಚಲ ತೇಜೋಮಯ ತಿಳಿಸಿದ್ದಾರೆ. ಯಶಸ್ವಿನಿ ಮಹಿಳಾ ಮಂಡಲದ ವತಿಯಿಂದ ಉರ್ವ ಸ್ಟೋರ್ ಸುತ್ತಮುತ್ತ ಗಿಡಗಳನ್ನು ನೆಡುವ ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ಹಂಚುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತದನಂತರ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ‘ವನಿತಾಂಗಣ’ದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಕಲ ಜೀವರಾಶಿಗಳಿಗೂ ನೀರು […]

Share News

ಮಂಗಳೂರು: ಪ್ರಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯವಾಗಿದೆ ಎಂದು ಯಶಸ್ವಿನಿ ಮಹಿಳಾ ಮಂಡಳಿಯ ಸ್ಥಾಪಕಾಧ್ಯಕ್ಷರು ಹಾಗೂ ಶ್ರೇಷ್ಠ ಸಹಕಾರಿ ಪುರಸ್ಕೃತರಾದ ಶ್ರೀಮತಿ ಚಂಚಲ ತೇಜೋಮಯ ತಿಳಿಸಿದ್ದಾರೆ.

ಯಶಸ್ವಿನಿ ಮಹಿಳಾ ಮಂಡಲದ ವತಿಯಿಂದ ಉರ್ವ ಸ್ಟೋರ್ ಸುತ್ತಮುತ್ತ ಗಿಡಗಳನ್ನು ನೆಡುವ ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ಹಂಚುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತದನಂತರ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ‘ವನಿತಾಂಗಣ’ದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಕಲ ಜೀವರಾಶಿಗಳಿಗೂ ನೀರು ಅತ್ಯಾವಶ್ಯಕ ಎಂದ ಅವರು, ಪ್ರಕೃತಿಯಲ್ಲಿ ಇರುವೆ ಹಾಗೂ ಗೆದ್ದಲು ಗಳಂತಹ ಸಣ್ಣ ಸಣ್ಣ ಜೀವಿಗಳು ಭೂಮಿಯಲ್ಲಿ ರಂಧ್ರಗಳನ್ನು ನಿರ್ಮಿಸಿ ನೀರನ್ನು ಇಂಗಿಸಿಕೊಳ್ಳಲು ಸಹಾಯ ಮಾಡುತ್ತವೆ. ಪ್ರಾಣಿಗಳು ತಮ್ಮದೇ ಆದ ರೀತಿಯಲ್ಲಿ ಭೂಮಿಯನ್ನು ಸಂರಕ್ಷಿಸುವಂತೆ, ಮನುಷ್ಯನೂ ಪರಿಸರವನ್ನು ಪೋಷಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರದ ಪ್ರಸಿದ್ಧ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, “ಪ್ರಕೃತಿಯನ್ನು ಉಳಿಸಿದರೆ ಮಾತ್ರ ಮಾನವನ ಬದುಕು ಸುರಕ್ಷಿತವಾಗಿರುತ್ತದೆ. ಅನಿವಾರ್ಯ ಕಾರಣಗಳಿಂದ ಒಂದು ಗಿಡವನ್ನು ಕಡಿಯಬೇಕಾಗಿ ಬಂದರೆ, ಅದರ ಬದಲಾಗಿ 10 ಗಿಡಗಳನ್ನು ನೆಟ್ಟು ಪೋಷಿಸಬೇಕು. ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸಬೇಕು ಮತ್ತು ಗಿಡ ನೆಡಬೇಕು” ಎಂದು ಕರೆ ನೀಡಿದರು.

ಮನೆಯ ಸುತ್ತಮುತ್ತ ಗಿಡ ಬೆಳೆಸಿ: ರಮಣಿ ಬೋಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರಮಣಿ ಬೋಳೂರು ಮಾತನಾಡಿ, “ಮಹಿಳೆಯರು ತಮಗೆ ಅಗತ್ಯವಿರುವ ಸಣ್ಣ ಸಣ್ಣ ಗಿಡಗಳನ್ನು ತಮ್ಮ ಮನೆಯ ಸುತ್ತಮುತ್ತ ತಾವೇ ನೆಟ್ಟು ಪೋಷಿಸಬೇಕು. ಇದರಿಂದ ಮನಸ್ಸಿಗೆ ಆಹ್ಲಾದ ದೊರೆಯುವುದರ ಜೊತೆಗೆ ಪ್ರಕೃತಿಗೂ ನಮ್ಮದೊಂದು ಸಣ್ಣ ಕೊಡುಗೆ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಕವಿತಾ ಅವರು ಸ್ವತಃ ರಚಿಸಿದ ಪರಿಸರ ಗೀತೆಯನ್ನು ಗೀತಾಶೇಟ್, ಸುಮತಿ ಶೆಣೈ ಮತ್ತು ಪ್ರತಿಭಾ ನಾಥ್ ಅವರು ಹಾಡಿ ಎಲ್ಲರ ಗಮನ ಸೆಳೆದರು. ಇದೇ ವೇಳೆ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳನ್ನು ಅನಿತಾ ಶೇಟ್ ಅವರು ಯಶಸ್ವಿಯಾಗಿ ನಿರ್ವಹಿಸಿದರು. ಸ್ಪರ್ಧೆಗಳಲ್ಲಿ ಸ್ವರ್ಣಲತಾ ಮಲ್ಲಿ, ನಿರ್ಮಲಾ ಶೆಟ್ಟಿ, ಜಯಶಾಲಿಯಾನ್, ಅನಿತಾ, ಸಂಧ್ಯಾ, ವೀಣಾ ಶೆಟ್ಟಿ, ಮಲ್ಲಿಕಾ, ವತ್ಸಲಾ ಹಾಗೂ ದಯಾಮಣಿ ಅವರು ವಿಜೇತರಾದರು.

ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯದರ್ಶಿ ನಾಗವೇಣಿ ಪಿ. ಅವರು ಕಾರ್ಯಕ್ರಮ ನಿರೂಪಿಸಿದರು. ಕವಿತಾ ಮನೋಹರ್ ಸ್ವಾಗತಿಸಿದರೆ, ಶ್ರೀರಂಜಿನಿ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಪ್ರಮುಖರಾದ ತಾರಾ ಕುಮಾರಿ, ಜ್ಯೋತಿ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Share News