ವಿಟ್ಲ: ಇಲ್ಲಿನ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ವಕೀಲರೊಬ್ಬರ ಮನೆಯಲ್ಲಿ ಕಳವು ನಡೆದಿದೆ. ವಕೀಲೆ ಸಫಿಯಾ ನೌಫಲ್ ಅವರ ಮನೆಯಲ್ಲಿ ಘಟನೆ ನಡೆದಿದೆ.

ಮನೆಮಂದಿ ಎಲ್ಲ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯ ಒಳಗಡೆ ಇದ್ದ ಕಪಾಟನ್ನು ಹುಡುಕಾಟ ನಡೆಸಿ, ಅಲ್ಲಿ ಏನೂ ಸಿಗದ ಕಾರಣ ವಕೀಲರಿಗೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಈ ಘಟನೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಅವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.