Tag: ವಿಟ್ಲ

DAKSHINA KANNADA HOME LATEST NEWS

ವಿಟ್ಲ: ವಾಹನ ದಟ್ಟನೆ ನಿಯಂತ್ರಿಸಲು ಫ್ಲೆಕ್ಸ್ ಮತ್ತು ತಳ್ಳುಗಾಡಿ ತೆರವು

ವಿಟ್ಲ: ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆ ನಿಯಂತ್ರಿಸಲು ಇಲ್ಲಿನ ಪಟ್ಟಣ ಪಂಚಾಯತ್ ಅಧಿಕಾರಿಗಳು ವಾಹನ ದಟ್ಟನೆಗೆ ಕಾರಣವಾಗುತ್ತಿದ್ದ ಫ್ಲೆಕ್ಸ್ ಮತ್ತು ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಶನಿವಾರ ಪಟ್ಟಣ ಪಂಚಾಯತ್ ವತಿಯಿಂದ ಪೊಲೀಸ್, ಇಲಾಖೆ ಮತ್ತು ವಾಹನ ಚಾಲಕ ಸಭೆ ಕರೆಯಲಾಗಿತ್ತು. ಈ ವೇಳೆ ಈ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಅಳವಡಿಸಲಾಗಿದ್ದ ಪ್ರಚಾರದ ಫ್ಲೆಕ್ಸ್ […]

DAKSHINA KANNADA HOME LATEST NEWS

ಕೋಳಿ ಅಂಕದ ಮೇಲೆ ವಿಟ್ಲ ಪೊಲೀಸರಿಂದ ದಾಳಿ

ವಿಟ್ಲ: ಗುಡ್ಡೆಯಲ್ಲಿ ಕೋಳಿ ಅಂಕ ನಡೆಸುತ್ತಿದ್ದಾಗ ವಿಟ್ಲ ಪೊಲೀಸರು ದಿಢೀರ್‌ ಪೊಲೀಸ್‌ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಳಿ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವ ಪೊಲೀಸರು, ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಹರೆಬೆಟ್ಟು ಎಂಬ ಗುಡ್ಡೆಯಲ್ಲಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ. ಈ ವೇಳೆ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಮರೆಯಲ್ಲಿ ನಿಂತು ಗಮನಿಸಿದಾಗ ಸದ್ರಿ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ […]

DAKSHINA KANNADA HOME LATEST NEWS

ವಿಟ್ಲ: ಫಾತಿಮಾ ಮಾತ ಸಮುದಾಯ ಭವನ ಉದ್ಘಾಟನೆ

ವಿಟ್ಲ:  ಎಲ್ಲರ ಸಹಕಾರ ಅನ್ಯೂನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡು ಇಂದು ಲೋಕಾರ್ಪಣೆಗೊಂಡಿದೆ. ಅಭಿವೃದ್ಧಿಯ ಸಂಕೇತವೇ ಈ ಒಂದು ಸಭಾಭವನ ಆಗಿದೆ. ನಮ್ಮೊಳಗಿನ‌ ಸಂಬಂದ ಇನ್ನಷ್ಟು ಗಟ್ಟಿಯಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ರವರು ಹೇಳಿದರು. ಅವರು ಮೇ.೫ರಂದು ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರುವಾಯಿ ಮುಚ್ಚಿರಪದವು ಫಾತಿಮ ಮಾತೆ ದೇವಾಲಯದ ಫಾತಿಮಾ ಮಾತಾ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರು ಮಾತನಾಡಿ ಇದೊಂದು […]

DAKSHINA KANNADA HOME LATEST NEWS

ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಆರೋಪಿ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಮಾಣಿಲ ಗ್ರಾಮದ ಮುರುವದಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ನಿವಾಸಿ ಮಹೇಶ್ ಭಟ್ ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಎಸಗಿರುವ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಸೆಕ್ಷನ್ ಹಾಗೂ ದಲಿತ ದೌರ್ಜನ್ಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಕುರಿತು ತಕ್ಷಣ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ […]

DAKSHINA KANNADA HISTORY HOME

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣ- ಆರೋಪಿ ಮಹೇಶ್‌ ಭಟ್‌ ಬಂಧನಕ್ಕೆ ಒತ್ತಾಯ

ಬಂಟ್ವಾಳ: ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು  ಸಮಗ್ರ ತನಿಖೆಗೊಳಪಡಿಸಬೇಕು ಮತ್ತು ಆರೋಪಿ ಮಹೇಶ್ ಭಟ್‌ನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ, ಡಿಎಚ್‌ಎಸ್, ಜೆಎಮ್‌ಎಸ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಸ್‌ಎಫ್‌ಐ ದ.ಕ. ಜಿಲ್ಲಾ ಸಮಿತಿಗಳ ಮುಖಂಡರು ದ.ಕ. ಜಿಲ್ಲಾ ಎಸ್ಪಿಯನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಆರೋಪಿಯ ವಿರುದ್ಧ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಕೂಡ ಆತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಅಲ್ಲದೆ […]