• Home  
  • ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ “Mangalore IAS – A School for Civil Services” ಸಂಸ್ಥೆಯ ಉದ್ಘಾಟನೆ
- HOME - LATEST NEWS

ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ “Mangalore IAS – A School for Civil Services” ಸಂಸ್ಥೆಯ ಉದ್ಘಾಟನೆ

ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಜು.11ರಂದು ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷ ಅತೀ ವಂದನೀಯ ಧರ್ಮಧ್ಯಕ್ಷ ರಾದ ಡಾ.ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರು. ರಾಮಕೃಷ್ಣ ಮಠದ ಸ್ವಾಮೀಜಿ ಯುಗಾನಂದ ಅವರು ದೀಪ ಪ್ರಜ್ವಲನೆ, ಆಶೀರ್ವಚನ ನೀಡಿದರು. ನಂತರ […]

Share News

ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಜು.11ರಂದು ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷ ಅತೀ ವಂದನೀಯ ಧರ್ಮಧ್ಯಕ್ಷ ರಾದ ಡಾ.ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರು. ರಾಮಕೃಷ್ಣ ಮಠದ ಸ್ವಾಮೀಜಿ ಯುಗಾನಂದ ಅವರು ದೀಪ ಪ್ರಜ್ವಲನೆ, ಆಶೀರ್ವಚನ ನೀಡಿದರು.

ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಅತೀ ವಂದನೀಯ ಡಾ ಹೆನ್ರಿ ಡಿಸೋಜಾ ರವರು ವಿದ್ಯಾರ್ಥಿಗಳಿಗೆ ನಾವೂ ಎಲ್ಲಿ ಹುಟ್ಟಿದ್ದು ಮುಖ್ಯವಲ್ಲಾ ಎಲ್ಲಿಗೆ ಗುರಿ ಮುಟ್ಟುತ್ತೇವೆ ಏನೂ ಸಾಧನೆ ಮಾಡುತ್ತೇವೆ ಮತ್ತು ಎಷ್ಟ್ಟು ಸಾಧಕ ರಾಗುತ್ತೇವೆ ಅದು ಮುಖ್ಯ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾದ ಸ್ವಾಮಿ ಯುಗಾನಂದರವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಶಿಕ್ಷಣ ವಾಣಿಜ್ಯ ಬ್ಯಾಂಕಿಂಗ್ ವೈದಕೀಯ ಕ್ಷೆತ್ರದಲ್ಲಿ ಮುಂಚೂಣಿ ಯಲ್ಲಿ ಇದೆ. ರಾಷ್ಟ್ರೀಯ ಬ್ಯಾಂಕ್ ಗಳು ಇಲ್ಲಿಂದ ಆರಂಭ ಗೊಂಡಿದ್ದು, ಕೆಲವರಿಗೂ ಈ ವಿಷಯ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಐಎಎಸ್ ತರಬೇತಿ ಯಾವುದೇ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಗಳು ಇಲ್ಲದ್ದು ತುಂಬಾ ಬೇಸರ ತಂದಿದೆ. ಇದನ್ನು ಅರಿತು ಈಗ ಈ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಇಲ್ಲಿ ಆರಂಭ ಗೊಂಡಿದ್ದು ಸಂತೋಷ ದಾಯಕ ವಾಗಿದೆ ಇದರಿಂದ ತುಂಬಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

 

ಡೈಜಿ ವರ್ಲ್ಡ್ ಇದರ ನಿರ್ದೇಶಕ ವಾಲ್ಟರ್ ನಂದಳಿಕೆಯವರು ನನಗೂ ಪೊಲೀಸ್ ಇಲಾಖೆ ಗೆ ಸೇರಲು ಅಸೆ ಇತ್ತು. ಅವಾಗ ನನಗೆ ಗೈಡ್ ಮಾಡಲು ಯಾರು ಇರಲಿಲ್ಲ. ಈಗ ಎಷ್ಟೋ ತರಬೇತಿ ಕೇಂದ್ರ ಗಳು ಇವೆ ಯಾವ ಮಾಹಿತಿ ಬೇಕಾದರೂ ಸುಲಭ ರೀತಿಯಲ್ಲಿ ತಿಳಿಯಬಹುದು. ಇಲ್ಲಿ ಹುಡುಗಿಯರ ಸಂಖ್ಯೆ ನೋಡುವಾಗ ತುಂಬಾ ಖುಷಿ ಯಾಗುತ್ತದೆ ಯಾಕೆಂದರೆ ಅವರನ್ನು ಅಧಿಕಾರಿಗಳ ಸಮವಸ್ತ್ರ ದಲ್ಲಿ ನೋಡಲು ಮತ್ತು ಗೌರವ ಕೊಡಲು ಖುಷಿ ಯಾಗುತ್ತದೆ. ನಾನು ಇಂತಹ ತರಬೇತಿ ಕೇಂದ್ರ ಗಳನ್ನು ನಮ್ಮ ಜಿಲ್ಲೆಯಲ್ಲಿ ಆಗಬೇಕು ಎಂದು ಹಲವು ಬಾರಿ ಪ್ರಯತ್ನ ಮಾಡಿದ್ದೂ, ಈಗ ಇಲ್ಲಿ ಈ ಕೇಂದ್ರ ಆರಂಭವಾಗಿದ್ದು, ಇದರ ಸದುಪಯೋಗ ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸಲಿ ನಮ್ಮ ಜಿಲ್ಲೆಯ ಪತಾಕೆ ಪ್ರಪಂಚದಡೆ ವಿಸ್ತರ ವಾಗಲಿ ಎಂದು ಶುಭ ಹಾರೈಸಿದರು.

ಸಂದೇಶ ಫೌಂಡೇಶನ್ ನಿರ್ದೇಶಕ ವಂದನೀಯ ರೋಷನ್ ರೋಸಾರಿಯೋ ಸ್ವಾಗತಿಸಿದರು. Mangalore IAS ಸಂಸ್ಥೆಯ ಸಂಸ್ಥಾಪಕ ಸಂತೋಷ್ ರಾವ್  ಅವರು ಸಂಸ್ಥೆಯ ಉದ್ದೇಶ ಹಾಗೂ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು. ಸಂದೇಶ ಸಂಸ್ಥೆಯ ಟ್ರಸ್ಟಿ  ರೊಯ್ ಕ್ಯಾಸ್ಟಲಿನೋ ರವರು ಧನ್ಯವಾದ ಗೈದರು. ಜಾಸ್ಮಿನ್ ಜೇನಿಫರ್ ನಿರೂಪಿಸಿದರು.

Share News