• Home  
  • ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಮತ್ತು ಹಿರಿಯ ವೈದ್ಯರಿಗೆ ಸನ್ಮಾನ
- LATEST NEWS

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಮತ್ತು ಹಿರಿಯ ವೈದ್ಯರಿಗೆ ಸನ್ಮಾನ

ಮಂಗಳೂರು, ಜು.13:-ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸರಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆ.ಎಂ.ಸಿ.) ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ 70 ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿವೆ. ಈ ಸುದೀರ್ಘ ಸೇವೆಯ ನೆನಪಿನಲ್ಲಿ ಎರಡೂ ಸಂಸ್ಥೆಗಳ ವೈದ್ಯರ ನಿಸ್ವಾರ್ಥ ಸೇವಾ ಕೈಂಕರ್ಯವನ್ನು ಸ್ಮರಿಸುವ ವಿಶೇಷ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಹಿರಿಯ ವೈದ್ಯರಿಗೆ ಗೌರವ ಸನ್ಮಾನ:ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಹಿರಿಯ ತಜ್ಞರುಗಳಾದ […]

Share News

ಮಂಗಳೂರು, ಜು.13:-ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸರಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆ.ಎಂ.ಸಿ.) ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ 70 ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿವೆ. ಈ ಸುದೀರ್ಘ ಸೇವೆಯ ನೆನಪಿನಲ್ಲಿ ಎರಡೂ ಸಂಸ್ಥೆಗಳ ವೈದ್ಯರ ನಿಸ್ವಾರ್ಥ ಸೇವಾ ಕೈಂಕರ್ಯವನ್ನು ಸ್ಮರಿಸುವ ವಿಶೇಷ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಹಿರಿಯ ವೈದ್ಯರಿಗೆ ಗೌರವ ಸನ್ಮಾನ:ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಹಿರಿಯ ತಜ್ಞರುಗಳಾದ ಡಾ. ಆರ್.ಎಲ್. ಕಾಮತ್, ಡಾ. ಎಸ್.ಆರ್. ನಾಯಕ್, ಡಾ. ಅಶ್ಫಾಕ್, ಡಾ. ಸುರೇಶ್ ಶೆಟ್ಟಿ, ಡಾ. ಶ್ರದ್ಧಾ ಶೆಟ್ಟಿ, ಡಾ. ಪ್ರಿಯಾ ಬಲ್ಲಾಳ್, ಡಾ. ಅನುಪಮಾ ಸುರೇಶ್, ಡಾ. ನಿಖಿಲ್ ಶೆಟ್ಟಿ, ಡಾ. ಭಾರತಿ ರಾವ್, ಡಾ. ಸಂತೋಷ್ ರೈ, ಡಾ. ರಂಜನ್, ಡಾ. ಸುಮೇಶ್ ರಾವ್, ಡಾ. ನೂತನ್ ಕಾಮತ್, ಡಾ. ಸುಚೇತಾ ರಾವ್, ಡಾ. ಪುಂಡಲೀಕ ಬಾಳಿಗಾ, ಡಾ. ಶ್ರದ್ಧಾ ಪೂಜಾರಿ, ಡಾ. ಜಗದೀಶ್, ಡಾ. ದಯಾನಂದ್ ಹಾಗೂ ಡಾ. ಸದಾನಂದ ಪೂಜಾರಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ಸಿ. ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು, ಕೆ.ಎಂ.ಸಿ. ವೈದ್ಯರ ಸೇವೆಯನ್ನು ಗುರುತಿಸಿ ಗೌರವಿಸಿದ ಲೇಡಿಗೋಷನ್ ಆಸ್ಪತ್ರೆಯ ಆಡಳಿತ ಮಂಡಳಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು.

ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, “ತಾಯಿ-ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸರಕಾರಿ ಹಾಗೂ ಕೆ.ಎಂ.ಸಿ. ವೈದ್ಯರ ಅಪರಿಮಿತ ಸೇವೆ ಅನನ್ಯವಾದದ್ದು. ಕಳೆದ ಐದು ವರ್ಷಗಳಲ್ಲಿ ತಾಯಿ ಮರಣ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತರುವಲ್ಲಿ ಇಂದು ಸನ್ಮಾನಿತರಾದ ಎಲ್ಲಾ ಹಿರಿಯ ವೈದ್ಯರ ಶ್ರಮ ಮತ್ತು ಮಾರ್ಗದರ್ಶನ ಕಾರಣವಾಗಿದೆ. ಇಂತಹ ಮೌಲ್ಯಯುತ ಸೇವೆ ಸದಾ ಮುಂದುವರಿಯಲಿ” ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಲೇಡಿಗೋಷನ್ ಆಸ್ಪತ್ರೆಯ ಸಿಬ್ಬಂದಿಗಳು ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರನ್ನು ಸಹ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸೀಮಾ ಸ್ವಾಗತಿಸಿದರು. ಅಂಬಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಪ್ರಭಾ ಹಾಗೂ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರೆ, ಲವಿನಾ ವಂದನಾರ್ಪಣೆ ಮಾಡಿದರು.

Share News