Tag: ಕೆನರಾಟಿವಿ

COMMUNITY NEWS

ಪೆರುವಾಯಿ ಚರ್ಚ್‌ನಲ್ಲಿ ವಂ. ಪ್ರವೀಣ್ ಮೊಂತೇರೊ ಅವರ ಯಾಜಕ ದೀಕ್ಷೆಯ ದಶಮಾನೋತ್ಸವ ಸಂಭ್ರಮಾಚರಣೆ

ವಿಟ್ಲ:ಪೆರುವಾಯಿ, ಮೇ 24:ಇಲ್ಲಿನ ಫಾತಿಮಾ ಮಾತೆಯ ದೇವಾಲಯದ ವ್ಯಾಪ್ತಿಯ ಜೋನ್ ಮೊಂತೇರೊ ಹಾಗೂ ದುಲ್ಸಿನ್ ದಂಪತಿಯ ಪುತ್ರ ವಂದನೀಯ ಪ್ರವೀಣ್ ಮೊಂತೇರೊ ಅವರು ಯಾಜಕ ದೀಕ್ಷೆ ಪಡೆದು 10 ವರ್ಷಗಳು ಸಂದ ಹಿನ್ನೆಲೆಯಲ್ಲಿ, ಅವರ ಯಾಜಕ ದೀಕ್ಷೆಯ ದಶಮಾನೋತ್ಸವ ಸಂಭ್ರಮಾಚರಣೆಯು ಭಾನುವಾರ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಜರುಗಿತು. ದೇವಾಲಯದಲ್ಲಿ ನಡೆದ ಪವಿತ್ರ ದಿವ್ಯ ಬಲಿಪೂಜೆಯಲ್ಲಿ ಪೆರುವಾಯಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಸೈಮನ್‌ ಡಿಸೋಜಾ, ದಶಮಾನೋತ್ಸವ ಸಂಭ್ರಮದ ರೂವಾರಿ ವಂದನೀಯ ಪ್ರವೀಣ್ ಮೊಂತೇರೊ ಹಾಗೂ ವಂದನೀಯ ರೋಷನ್ […]

COMMUNITY NEWS

ಮೊನ್ಸಿಂಜರ್ ಲೆಸ್ಲಿ ಶೆಣಯ್ ನಿಧನ:

ಮಂಗಳೂರು, ಮೇ 24: ಉರ್ವಾ ಮೂಲದ ಗೌರವಾನ್ವಿತ ಧರ್ಮಗುರು ಹಾಗೂ ಪ್ರಸಿದ್ಧ ದಾನಿ ಮೊನ್ಸಿಂಜರ್ ಲೆಸ್ಲಿ ಶೆಣಯ್ (79) ಅವರು ಭಾನುವಾರ ಮೇ 24 ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಜೀವನ ಮತ್ತು ಸೇವೆ: 1947ರ ಅಕ್ಟೋಬರ್ 4ರಂದು ಉರ್ವಾದಲ್ಲಿ ಜನಿಸಿದ ಅವರು, 1976ರ ಮೇ 14ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದರು. 1979ರಿಂದ ಅಮೆರಿಕದ ಫ್ರೆಸ್ನೋ ಧರ್ಮಪ್ರಾಂತ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು, 1985ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದರು. ಆದಾಗ್ಯೂ, ತಮ್ಮ ಹುಟ್ಟೂರಿನೊಂದಿಗೆ ನಿರಂತರ ಸಂಪರ್ಕ […]

LATEST NEWS

ನೀಟ್ ಪರೀಕ್ಷೆ ಅಕ್ರಮ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕೆಪಿಸಿಸಿ ವಕ್ತಾರ ಅಭಿಷೇಕ್ ಉಳ್ಳಾಲ್ ಆಗ್ರಹ

ಮಂಗಳೂರು:ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ತೀವ್ರ ಧಕ್ಕೆ ತಂದಿದ್ದು, ಈ ಆಡಳಿತಾತ್ಮಕ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಕ್ತಾರರಾದ ಶ್ರೀ ಅಭಿಷೇಕ್ ಉಳ್ಳಾಲ್ ಅವರು ತೀವ್ರವಾಗಿ ಆಗ್ರಹಿಸಿದ್ದಾರೆ. ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಹಾಗೂ ರಾಷ್ಟ್ರೀಯ […]

LATEST NEWS

ಓಲೈಕೆಗಾಗಿ ಬ್ರದರ್ಸ್ ಗಳಿಗೆ ಅಮಾಯಕ ಪಟ್ಟ ಕಟ್ಟಿದ ಕಾಂಗ್ರೆಸ್ :- ಶಾಸಕ ಕಾಮತ್ ಆಕ್ರೋಶ

ಮಂಗಳೂರು:ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ಶಿವಲಿಂಗದ ವಿರೂಪಗೊಳಿಸಿ, ಭಕ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗಂಭೀರ ಅಪರಾಧಿಗಳನ್ನು ಕಾಂಗ್ರೆಸ್ ಸರ್ಕಾರ ‘ಅಮಾಯಕರು’ ಎಂದು ಬಿಂಬಿಸಲು ಹೊರಟಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಆಳಂದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ, ಜಿಲ್ಲಾಧಿಕಾರಿ ಮತ್ತು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಸಮಾಜಘಾತುಕ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ. […]

LATEST NEWS

ಮಂಗಳೂರು ವಿಮಾನ ದುರಂತದ ಸಂತ್ರಸ್ತರಿಗೆ ಸಾಮರಸ್ಯ ಮಂಗಳೂರು’ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿ

ಮಂಗಳೂರು: ಹದಿನಾರು ವರ್ಷಗಳ ಹಿಂದೆ (2010ರ ಮೇ 22) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳಿಗೆ ‘ಸಾಮರಸ್ಯ ಮಂಗಳೂರು’ ಸಂಘಟನೆಯ ಪದಾಧಿಕಾರಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸಂಸ್ಥೆಯ ಪದಾಧಿಕಾರಿಗಳು ತಣ್ಣೀರುಭಾವಿ ಬಳಿ ನಿರ್ಮಿಸಲಾಗಿರುವ ವಿಮಾನ ದುರಂತದ ಸ್ಮಾರಕಕ್ಕೆ ತೆರಳಿ, ಪುಷ್ಪ ನಮನ ಸಲ್ಲಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, “ಮಂಗಳೂರು ವಿಮಾನ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಒಂದು ಕರಾಳ […]

LATEST NEWS

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 35ನೇ ಪುಣ್ಯಸ್ಮರಣೆ

ಮಂಗಳೂರು:ರಾಜೀವ್ ಗಾಂಧಿಯವರು ನವ ಭಾರತದ ದಿಕ್ಸೂಚಿಯಾಗಿದ್ದರು. ವಿಜ್ಞಾನ, ತಂತ್ರಜ್ಞಾನ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ. ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ 35ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಳಿಕ ಅವರು ಮಾತನಾಡುತ್ತಿದ್ದರು. 21ನೇ ಶತಮಾನಕ್ಕಾಗಿ ಭಾರತವನ್ನು ಕಟ್ಟುವ ಕನಸನ್ನು, ದೂರದೃಷ್ಟಿಯ ವೈಜ್ಞಾನಿಕ, ವೈಚಾರಿಕ ಚಿಂತನೆಯ ಯೋಜನೆಗಳಿಂದ ನನಸಾಗಿಸಿದ್ದು ರಾಜೀವ್ […]

LATEST NEWS

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂರು ಸ್ಥಾನಗಳ ಪೈಕಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ಮೀಸಲು ಸಂಭವ; ನವೀನ್ ಡಿಸೋಜ ಹೆಸರು ಮುಂಚೂಣಿಗೆ

ಬೆಂಗಳೂರು: ಕರ್ನಾಟಕದಿಂದ ತೆರವಾಗಲಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಈ ಪೈಕಿ ಒಂದು ಸ್ಥಾನವನ್ನು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿಧಾನಸಭೆಯಲ್ಲಿನ ಪ್ರಸ್ತುತ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಮೂರೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗುವುದು ಗ್ಯಾರಂಟಿಯಾಗಿದೆ. ಉಳಿದ ಎರಡು […]

HOME

ಅಕ್ರಮ ಜಾನುವಾರು ಸಾಗಾಟ ಪತ್ತೆ; ಪೊಲೀಸರ ಮೇಲೆ ಕಾರು ಚಲಾಯಿಸಿ ಆರೋಪಿ ಪರಾರಿ, ಚಾಲಕನ ಬಂಧನ

ವಿಟ್ಲ, ಮೇ 21: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ತಡೆದ ವಿಟ್ಲ ಠಾಣೆಯ ಪೊಲೀಸರ ಮೇಲೆ ಬೆಂಗಾವಲು ಕಾರು ಚಲಾಯಿಸಿ, ಪ್ರಾಣಕ್ಕೆ ಅಪಾಯ ಉಂಟುಮಾಡಿ ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಜರಕೋಡಿಯಲ್ಲಿ ಇಂದು (ಮೇ 21) ಬೆಳಿಗ್ಗೆ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಪಿಕ್‌ಅಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಎರಡು ಜಾನುವಾರು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗೋಸಾಗಾಟದ ಕುರಿತು ಸಿಕ್ಕ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ […]

COMMUNITY NEWS

ಬಿಜೈ ಸಂತ ಕ್ಷೇವಿಯರ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಸ್ಪ್ಯಾನಿ ಪಿರೇರಾ ಪದಗ್ರಹಣ

ಮಂಗಳೂರು. ಮೇ 21: ನಗರದ ಬಿಜೈ ಸಂತ ಕ್ಷೇವಿಯರ್‌ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ವಂ। ಸ್ಪ್ಯಾನಿ ಪಿರೇರಾ ಅವರು ಪದಗ್ರಹಣ ಗೊಂಡಿದ್ದಾರೆ. ಬಿಜೈ ಚರ್ಚ್‌ನ ಧರ್ಮಗುರುಗಳು ಹಾಗೂ ಸಿಬಿಎಸ್‌ಸಿ ಶಾಲೆಯ ಸಂಚಾಲಕರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಕಾಸರಗೋಡು ವಲಯ ಗುರುಗಳಾಗಿದ್ದರು. ಬೇಳಾ ಚರ್ಚ್‌ನ ಧರ್ಮಗುರುಗಳಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಯಾಜಕ ದೀಕ್ಷೆ ಪಡೆದ ಬಳಿಕ ವಂ। ಸ್ಪ್ಯಾನಿ ಪಿರೇರಾ ಅವರು ಕಳೆದ 30 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೀದರ್‌ನಲ್ಲಿ […]

LATEST NEWS

ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ವಸಂತ ಪೂಜಾರಿ ನೇಮಕ

ಮಂಗಳೂರು: ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ “ಜಿಲ್ಲಾ ಕಾರ್ಯಾಧ್ಯಕ್ಷ”ರನ್ನಾಗಿ ಮಂಗಳೂರಿನ ಜಲ್ಲಿಗುಡ್ಡ ನಿವಾಸಿ ಶ್ರೀ ವಸಂತ ಪೂಜಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಪಕ್ಷದ ಪ್ರಧಾನ ಕಚೇರಿ ‘ಜೆ.ಪಿ ಭವನ’ದಿಂದ ಅಧಿಕೃತವಾಗಿ ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ, ಜಿಲ್ಲೆಯ ಎಲ್ಲಾ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ […]