Tag: ಕೆನರಾಟಿವಿ ನ್ಯೂಸ್‌

HOME

ಬೆಂಗಳೂರು: ಸೇಂಟ್ ಜೋಸೆಫ್ಸ್ ವಿವಿಯಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ (OBE) ಕಾರ್ಯಾಗಾರ

ಬೆಂಗಳೂರು: ವೇಗವಾಗಿ ಬದಲಾಗುತ್ತಿರುವ ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯವು 2025 ರ ಜುಲೈನಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ (OBE) ಕುರಿತು ಕಾರ್ಯಾಗಾರ ಸರಣಿಯನ್ನು ಆಯೋಜಿಸಿತ್ತು. ಈ ಕಾರ್ಯಾಗಾರಗಳು ಸ್ಪಷ್ಟ ಕಲಿಕಾ ಫಲಿತಾಂಶಗಳನ್ನು ವ್ಯಾಖ್ಯಾನಿಸಲು ಮತ್ತು ಅವುಗಳನ್ನು ಪಠ್ಯಕ್ರಮ, ಬೋಧನೆ ಮತ್ತು ಮೌಲ್ಯಮಾಪನದೊಂದಿಗೆ ಜೋಡಿಸಲು ಬೋಧಕರಿಗೆ ಸಹಾಯ ಮಾಡಲು ಉದ್ದೇಶಿಸಲಾಗಿತ್ತು. ಪ್ರೊ. ಡಾ. ರೊನಾಲ್ಡ್ ಜೆ. ಮಸ್ಕರೇನ್ಹಸ್ ಅವರ ನಾಯಕತ್ವದಲ್ಲಿ ಮತ್ತು ಡಾ. ಡಬ್ಲ್ಯೂ. ಜ್ಯೋತಿ ಅವರ ಸಂಯೋಜನೆಯಲ್ಲಿ ನಡೆದ ಈ […]

HOME

ಮಂಗಳೂರು: 1300 ಕೋ.ರೂ ವ್ಯವಹಾರದ 113 ವರ್ಷಗಳ ಇತಿಹಾಸದ MCC ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಹಕಾರ ರತ್ನ ಅನಿಲ್ ಲೋಬೊ ಅವರು ತಿಳಿಸಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ […]

DAKSHINA KANNADA HOME LATEST NEWS

ಭಾರೀ ಮಳೆ: ಉಳ್ಳಾಲ ತಾಲೂಕಿನ ಶಾಲೆಗಳಿಗೆ ಇಂದು ರಜೆ

ಮಂಗಳೂರು: ಉಳ್ಳಾಲ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯೆ ಸಂಸ್ಥೆಗಳಿಗೆ ದಿನಾಂಕ15.07.2025 ರಂದು ರಜೆ ಘೋಷಿಸಲಾಗಿದೆ.

DAKSHINA KANNADA HOME

ಬಾಲಿವುಡ್‌ ನಟ ಶಾರೂಖ್‌ ಖಾನ್ ರೋಹನ್ ಕಾರ್ಪೊರೇಷನ್ ಬ್ರಾಂಡ್ ಅಂಬಾಸಿಡರ್

ಮಂಗಳೂರು ಜುಲೈ 12. ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‌ ಖಾನ್ ಅವರನ್ನು ತನ್ನ ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಜುಲೈ 12 ರಂದು ಘೋಷಣೆ ಮಾಡಿತು. ಈ ಬಹು ನಿರೀಕ್ಷಿತ ಕಾರ್ಯಕ್ರಮವು, ಮಂಗಳೂರಿನ ಬಿಜೈ ಭಾರತ್ ಮಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಮತ್ತು ಸಿನಿಮಾ ಜಗತ್ತಿನ ತಾರೆಗಳು ಭಾಗವಹಿಸಿದ್ದರು.ಈ ಘೋಷಣೆ ವಿಶೇಷ […]

DAKSHINA KANNADA HOME LATEST NEWS

ಪುತ್ತೂರು: ಅಪ್ರಾಪ್ತ ಬಾಲಕ-ಬಾಲಕಿಯನ್ನು ತಡೆದು ವೀಡಿಯೋಗೈದ ಪ್ರಕರಣ; ಇಬ್ಬರ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯನ್ನು ತಡೆದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪ್ರಕರಣದ ವಿವರ ಪ್ರಕರಣದ ಸಂತ್ರಸ್ಥ ಬಾಲಕನ ತಂದೆ ನೀಡಿದ ದೂರಿನಂತೆ, ಅಪ್ರಾಪ್ತ ಪ್ರಾಯದ ಮಗನು, ಮೋಟಾರು ಸೈಕಲ್ ನಲ್ಲಿ ಜು.5 ರ ಮಧ್ಯಾಹ್ನದ ವೇಳೆ, ಆತನ ಪರಿಚಯದ ಬಾಲಕಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಥಳಕ್ಕೆ ಬಂದು […]

Breaking News COMMUNITY NEWS LATEST NEWS

ಮಂಜೇಶ್ವರ: ತಾಯಿಯನ್ನೇ ಸುಟ್ಟ ಪುತ್ರ ಮೆಲ್ವಿನ್‌ನ್ನು ಪತ್ತೆ ಹಚ್ಚಿದ್ದೇ ರೋಚಕ…!

ಮಂಜೇಶ್ವರ: ಮಗನೊಬ್ಬ ಬೆಂಕಿ ಹಚ್ಚಿ ತಾಯಿಯನ್ನು ಕೊಲೆಗೈದ ಘಟನೆ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಯೊಳಗೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ನಲ್ಲಂಗಿಯ ದಿ. ಲೂಯಿಸ್ ಮೊಂತೆರೋ ರವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ನಡೆಸಿದ್ದಾನೆ. ನೆರೆಮನೆಯ ಲೋಲಿಟಾ (30) ಗಂಭೀರ ಗಾಯಗೊಂಡಿದ್ದಾರೆ. ಘಟನೆ ವಿವರ ನಿನ್ನೆ ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆಸಿದ್ದಾನೆ […]

DAKSHINA KANNADA HOME LATEST NEWS

ಪುತ್ತೂರು: ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ

ಪುತ್ತೂರು: ಪುತ್ತೂರಿನ ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ ಮಾಡಿದ ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿನ ಬನ್ನೂರು ಸಂತ ಅಂತೋಣಿ ಚರ್ಚ್‌ನ ಅಧೀನದಲ್ಲಿರುವ ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಜೂ.14 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳು ಫಾ.ಬಾಲ್ತಿಜಾರ್ ಪಿಂಟೋ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ […]

DAKSHINA KANNADA

ಜುಲೈ15ರೊಳಗೆ ದಂಡ ಕಟ್ಟಿ, ಇಲ್ಲದಿದ್ದರೆ ಕೋರ್ಟ್‌ಗೆ ಚಾರ್ಜ್‌ಶೀಟ್‌

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವಂತಹ ವಾಹನಗಳ ಮೇಲೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತೆಗೆದಿರುವ ಭಾವಚಿತ್ರಗಳನ್ನು ಮತ್ತು ಟ್ರಾಫಿಕ್ ಕಂಟ್ರೋಲ್ & ಕಮಾಂಡ್ ಸೆಂಟರ್‌ನಲ್ಲಿ ಸಿಸಿಟಿವಿ ಯಲ್ಲಿ ಸೆರೆಯಾಗಿರುವ ವಾಹನ ಚಾಲಕ/ಸವಾರರ ಸಂಚಾರ ನಿಯಮ ಉಲ್ಲಂಘನೆಯ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ.    ವಾಹನ ಚಾಲಕರು/ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಅಂಚೆ ಮೂಲಕ ನೋಟಿಸುಗಳನ್ನು ನೋಂದಣಿ ಸಂಖ್ಯೆಯ ಮಾಲಕರಿಗೆ ಈಗಾಗಲೇ ಕಳುಹಿಸಲಾಗಿದ್ದು, ದಂಡವನ್ನು ಕಟ್ಟದೇ ಹಲವಾರು ಪ್ರಕರಣಗಳು […]

DAKSHINA KANNADA HOME LATEST NEWS

ಆರ್ಥಿಕ ಸಮಸ್ಯೆಯಿಂದ ನೊಂದು ಯುವಕ ನೇಣಿಗೆ ಶರಣು

ಮಂಗಳೂರು: ಆರ್ಥಿಕ ಸಮಸ್ಯೆಯಿಂದ ನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೋಡಿಕಲ್‌ನಲ್ಲಿ ನಡೆದಿದೆ. ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಘಟನೆ ವಿವರ ಸೋಮವಾರ ಬೆಳಗ್ಗೆ ತನ್ನ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ಕೋಣೆ ಸೇರಿದ್ದ. ಸಂಜೆಯವರೆಗೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದ ಕಾರಣ ಮನೆಮಂದಿ ನಿಖಿಲ್ ಪೂಜಾರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.  ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದ್ದರಿಂದ ಫೋನ್ ಕರೆ ಮಾಡಿದರೂ ಆತ  […]

DAKSHINA KANNADA HOME LATEST NEWS

ವಿಟ್ಲ: ವಾಹನ ದಟ್ಟನೆ ನಿಯಂತ್ರಿಸಲು ಫ್ಲೆಕ್ಸ್ ಮತ್ತು ತಳ್ಳುಗಾಡಿ ತೆರವು

ವಿಟ್ಲ: ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆ ನಿಯಂತ್ರಿಸಲು ಇಲ್ಲಿನ ಪಟ್ಟಣ ಪಂಚಾಯತ್ ಅಧಿಕಾರಿಗಳು ವಾಹನ ದಟ್ಟನೆಗೆ ಕಾರಣವಾಗುತ್ತಿದ್ದ ಫ್ಲೆಕ್ಸ್ ಮತ್ತು ತಳ್ಳುಗಾಡಿಗಳನ್ನು ತೆರವುಗೊಳಿಸಿದರು. ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಶನಿವಾರ ಪಟ್ಟಣ ಪಂಚಾಯತ್ ವತಿಯಿಂದ ಪೊಲೀಸ್, ಇಲಾಖೆ ಮತ್ತು ವಾಹನ ಚಾಲಕ ಸಭೆ ಕರೆಯಲಾಗಿತ್ತು. ಈ ವೇಳೆ ಈ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಅಳವಡಿಸಲಾಗಿದ್ದ ಪ್ರಚಾರದ ಫ್ಲೆಕ್ಸ್ […]