COMMUNITY NEWS

ರೋಸಾರಿಯೋ ಕೆಥೆಡ್ರಲ್: ಎಸ್‌ವಿಪಿ ಸುವರ್ಣ ಮಹೋತ್ಸವ ಸಂಭ್ರಮದ

ಮಂಗಳೂರು : ಮಂಗಳೂರು ರೋಸಾರಿಯೋ ಕ್ಯಾಥದ್ರಲ್‌ನ ಸಂತ ವಿನ್ಸೆಂಟ್ ಡಿ ಪೋಲ್ ಸೊಸೈಟಿ (SVP) ತನ್ಮೂಲಕ ತನ್ನ 50ನೇ ಸುವರ್ಣ ಮಹೋತ್ಸವದ ನೆನಪಿಗಾಗಿ, ಅವರ್ ಲೇಡಿ ಆಫ್ ದಿ ಹೋಲಿ ರೋಸಾರಿಯೊ ಕೆಥೆಡ್ರಲ್ ಚರ್ಚ್‌ನ ಧರ್ಮಗುರುಗಳು ಹಾಗೂ ಕಮ್ಯುನಿಟಿಯ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಪವಿತ್ರ ಹಾಗೂ ಅದ್ಧೂರಿಯ ‘ಸಾಮೂಹಿಕ ವಿವಾಹ’ ಸಮಾರಂಭವು ಅತ್ಯಂತ ಶ್ರದ್ಧೆ ಮತ್ತು ವೈಭವದಿಂದ ನೆರವೇರಿತು.

ಮಂಗಳೂರಿನ ರೋಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ದಿವ್ಯ ಪವಿತ್ರ ಬಲಿದಾನ ಹಾಗೂ ಪ್ರಾರ್ಥನಾ ವಿಧಿಯೊಂದಿಗೆ ೨ ಜೋಡಿ ನವವಧು-ವರರು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಞೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ರವರು ಪವಿತ್ರ ಬಲಿ ಪೂಜೆಯನ್ನು ಅರ್ಪಿಸಿ, ನವ ದಂಪತಿ ಗಳಿಗೆ ದಾಂಪತ್ಯ ಜೀವನದ ಪಾವಿತ್ರ್ಯತೆಯನ್ನು ಬೋಧಿಸಿ ಆಶೀರ್ವದಿಸಿದರು.

ಧಾರ್ಮಿಕ ವಿಧಿವಿಧಾನಗಳ ನಂತರ ರೋಸಾರಿಯೊ ಕಲ್ಚರಲ್ ಹಾಲ್‌ನಲ್ಲಿ ಪ್ರೀತಿ ಭೋಜನದೊಂದಿಗೆ ನವದಂಪತಿಗಳ ಅಭಿನಂದನಾ ಸಭಾ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸರ್ಜನ್ ಡಾ. ಎಚ್. ಆರ್. ಫೆರ್ನಾಂಡಿಸ್ ಅವರು ನವದಂಪತಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ SSVP ಯೂನಿಟ್‌ನ ಅಧ್ಯಕ್ಷರಾದ ಶ್ರೀಮತಿ ಮೇರಿ ಜೆ. ಪಿಂಟೊ, ಕಾರ್ಯದರ್ಶಿ ಶ್ರೀಮತಿ ಐರಿನ್ ಮಾರ್ಟಿಸ್, ಚರ್ಚ್‌ನ ವಿಕಾರ್/ರೆಕ್ಟರ್ ವಂದನೀಯ ಫಾ. ವಲೇರಿಯನ್ ಡಿಸೋಜಾ, ವಂದನೀಯ ಗುರುಗಳಾದ ಫಾ. ಪ್ರದೀಪ್ ರೋಡ್ರಿಗಸ್, ಫಾ. ವಲೇರಿಯನ್ ಫೆರ್ನಾಂಡಿಸ್ ಹಾಗೂ ಉಪಾಧ್ಯಕ್ಷರಾದ ಶ್ರೀ ಸಿರಿಲ್ ರೋಸಾರಿಯೊ ಉಪಸ್ಥಿತರಿದ್ದು ನವದಂಪತಿಗಳಿಗೆ ಮದುವೆಯ ಶುಭಾಶಯಗಳನ್ನು ಕೋರಿದರು.

ಶ್ರೀಮತಿ ಲೀನೆಟ್ ಡಿಸೋಜಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಚರ್ಚ್‌ನ ಕ್ರೈಸ್ತ ಬಾಂಧವರು, ಧರ್ಮಗುರುಗಳು ಹಾಗೂ ಸ್ವಯಂಸೇವಕರ ಸಹಕಾರದಿಂದ ಈ ಸಮೂಹ ವಿವಾಹ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Share News