• Home  
  • ಪೆರುವಾಯಿ ಶಾಲೆಯಲ್ಲಿ ಇವಿಎಂ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ: ಗಗನರಾಜ್ ಮುಖ್ಯಮಂತ್ರಿ, ಖದೀಜತ್ ಶಿಫಾ ಉಪಮುಖ್ಯಮಂತ್ರಿ
- LATEST NEWS

ಪೆರುವಾಯಿ ಶಾಲೆಯಲ್ಲಿ ಇವಿಎಂ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ: ಗಗನರಾಜ್ ಮುಖ್ಯಮಂತ್ರಿ, ಖದೀಜತ್ ಶಿಫಾ ಉಪಮುಖ್ಯಮಂತ್ರಿ

ವಿಟ್ಲ,ಜೂನ್ 13: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕ 2026-2027ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬಾರಿಯ ಚುನಾವಣೆಯನ್ನು ಆಧುನಿಕ ಇವಿಎಂ (EVM) ಮಾದರಿಯಲ್ಲಿ ನಡೆಸಿರುವುದು ವಿಶೇಷವಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ಕಾರ್ಯ ಆರಂಭವಾಯಿತು. ಚುನಾವಣೆಯ ಫಲಿತಾಂಶದ ಪ್ರಕಾರ, 7ನೇ ತರಗತಿಯ ಗಗನರಾಜ್ […]

Share News

ವಿಟ್ಲ,ಜೂನ್ 13: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕ 2026-2027ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬಾರಿಯ ಚುನಾವಣೆಯನ್ನು ಆಧುನಿಕ ಇವಿಎಂ (EVM) ಮಾದರಿಯಲ್ಲಿ ನಡೆಸಿರುವುದು ವಿಶೇಷವಾಗಿತ್ತು.

ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ಕಾರ್ಯ ಆರಂಭವಾಯಿತು.

ಚುನಾವಣೆಯ ಫಲಿತಾಂಶದ ಪ್ರಕಾರ, 7ನೇ ತರಗತಿಯ ಗಗನರಾಜ್ ಶಾಲಾ ಮುಖ್ಯಮಂತ್ರಿಯಾಗಿ ಹಾಗೂ 7ನೇ ತರಗತಿಯ ಖದೀಜತ್ ಶಿಫಾ.ಡಿ ಉಪಮುಖ್ಯಮಂತ್ರಿಯಾಗಿ ಅತ್ಯಧಿಕ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಪ್ರಭಾಕರ. ಎಂ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವ ಹಿಸಿದರು. ಶಾಲೆಯ ಸಹ ಶಿಕ್ಷಕಿಯರು ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಗಳು ಯಾವುದೇ ಗೊಂದಲವಿಲ್ಲದೆ ವ್ಯವಸ್ಥಿತವಾಗಿ ನಡೆಯುವಂತೆ ಪೂರ್ಣ ಸಹಕಾರ ನೀಡಿದರು.

ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ಪ್ರಜಾಪ್ರಭುತ್ವದ ನಿಯಮಗಳು, ಚುನಾವಣೆಗಳು ನಡೆಯುವ ವಿಧಾನ ಮತ್ತು ಮತದಾನದ ಮಹತ್ವದ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲು ಈ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Share News