• Home  
  • ಹಕ್ಕು ಪತ್ರ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ: ಶಾಸಕ ಅಶೋಕ್ ರೈ ಎದುರು ಸತ್ಯ ಬಿಚ್ಚಿಟ್ಟ ಪುಣಚಾ ಗ್ರಾಮದ ಫಲಾನುಭವಿಗಳು
- LATEST NEWS

ಹಕ್ಕು ಪತ್ರ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ: ಶಾಸಕ ಅಶೋಕ್ ರೈ ಎದುರು ಸತ್ಯ ಬಿಚ್ಚಿಟ್ಟ ಪುಣಚಾ ಗ್ರಾಮದ ಫಲಾನುಭವಿಗಳು

ಪುತ್ತೂರು: ಪುಣಚಾ ಗ್ರಾಮದ ಪ ಜಾತಿ ಕಾಲನಿಯ ನಿವಾಸಿಗಳಿಗೆ 94 ಸಿ ಹಕ್ಕು ಪತ್ರ ನೀಡಿಲ್ಲ,ಇದರಲ್ಲಿ ಶಾಸಕ ಅಶೋಕ್ ರೈ ಕುಮ್ಮಕ್ಕು ಇದೆ ಎಂದು ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆದಿತ್ತು,ಇದೀಗ ಫಲಾನುಭವಿಗಳು ಶಾಸಕ ಅಶೋಕ್ ರೈ ಕಚೇರಿಗೆ ಬಂದು ಶಾಸಕರಲ್ಲಿ ಮಾತನಾಡಿದ್ದು ನಾವು ನಿಮ್ಮ ವಿರುದ್ದ ಪ್ರತಿಭಟನೆ ಮಾಡಿದ್ದಲ್ಲ, ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ, ಅವರೇ ನಮ್ಮನ್ನು ಕೃದುಕೊಂಡು ಹೋಗಿ ಹಾಗೆ ಹೇಳಿ ಹೀಗೆ ಎಂದು ನಮ್ಮಲ್ಲಿ […]

Share News

ಪುತ್ತೂರು: ಪುಣಚಾ ಗ್ರಾಮದ ಪ ಜಾತಿ ಕಾಲನಿಯ ನಿವಾಸಿಗಳಿಗೆ 94 ಸಿ ಹಕ್ಕು ಪತ್ರ ನೀಡಿಲ್ಲ,ಇದರಲ್ಲಿ ಶಾಸಕ ಅಶೋಕ್ ರೈ ಕುಮ್ಮಕ್ಕು ಇದೆ ಎಂದು ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆದಿತ್ತು,ಇದೀಗ ಫಲಾನುಭವಿಗಳು ಶಾಸಕ ಅಶೋಕ್ ರೈ ಕಚೇರಿಗೆ ಬಂದು ಶಾಸಕರಲ್ಲಿ ಮಾತನಾಡಿದ್ದು ನಾವು ನಿಮ್ಮ ವಿರುದ್ದ ಪ್ರತಿಭಟನೆ ಮಾಡಿದ್ದಲ್ಲ, ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ, ಅವರೇ ನಮ್ಮನ್ನು ಕೃದುಕೊಂಡು ಹೋಗಿ ಹಾಗೆ ಹೇಳಿ ಹೀಗೆ ಎಂದು ನಮ್ಮಲ್ಲಿ ಒತ್ತಾಯ ಮಾಡಿದ್ದಾರೆ ವಿನಾ ನಾವು ಯಾರ ವಿರುದ್ದವೂ ಪ್ರತಿಭಟನೆ ಮಾಡಿಲ್ಲ ,ಬಿಜೆಪಿಯವರೇ ನಮ್ಮ ಸಮಸ್ಯೆಯನ್ನು ಅವರ ಲಾಭಕ್ಕಾಗಿ ಬಳಸಿಕೊಂಡದ್ದು ಎಂದು ತಿಳಿಸಿದ್ದಾರೆ.

ನಮ್ಮ ಜಾಗದ ಹಕ್ಕು ಪತ್ರ ಮಾಡಿಸಿದ್ದು ಅಶೋಕ್ ರೈ ಅವರೆ ಎಂದು ನಾವು ಅವರಲ್ಲಿ ಮೊದಲಿಗೆ ಹೇಳಿದ್ದೆವು ಆಗ ಅವರು ಅದು ಅಲ್ಲಿರಲಿ ಈಗ ನಿಮಗೆ ಹಕ್ಕು ಪತ್ರ ಕೈಗೆ ಸಿಗಲಿಲವಲ್ಲ ,ನೀವು ಪ್ರತಿಭಟನೆ ಮಾಡಿದರೆ ಬೇಗ ಕೊಡ್ತಾರೆ,ಕಾನೂನು ಪ್ರಕಾರ ನಿಮಗೆ ಕೊಡುವುದಕ್ಕೆ ಆಗುವುದಿಲ್ಲ,ಕಾನೂನು ಮೀರಿ‌ನಿಮಗೆ ಹಕ್ಕು ಪತ್ರ ಅಶೋಕ್ ರೈ ಮಾಡಿಸಿದ್ದಾರೆ ಅದನ್ನು ಆದಷ್ಟು ಬೇಗ ಪಡೆಯಬೇಕು ಇಲ್ಲವಾದರೆ ಕಷ್ಟ ಎಂದು ಹೇಳಿ ನಮ್ಮನ್ನು ಬಂಡ್ವಾಳ ತಾಲೂಕು ಕಚೇರಿ ಎದರು ಕೂರಿಸಿದ್ದಾರೆ. ನಾವು ನಿಮ್ಮ ವಿರುದ್ದ ಏನೂ ಮಾತನಾಡಿಲ್ಲ,ಸರಕಾರದ ವಿರುದ್ದವೂ ಮಾತನಾಡಿಲ್ಲ ಎಲ್ಲವೂ ಮಾಡಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಇನ್ನೊಬ್ಬರು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಶಾಸಕರು ನಿಮಗೆ ಹಕ್ಕು ಪತ್ರ ಕೊಟ್ಟು ನಾನು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಬಿಜೆಪಿ‌ಶಾಸಕರು ನಿಮ್ಮ ಹಕ್ಕು ಪತ್ರ ಮಾಡಿಸಿದ್ದಲ್ಲ ,ನಾನೇ ಮಾಡಿಸಿದ್ದು ಎಲ್ಲವೂ ಸರಿಯಾಗುವಾಗ ನೀವು ಪ್ರತಿಭಟನೆ ಮಾಡಿದ್ದೀರಿ.ಈಗ ಅದಕ್ಕೆ ಬೇರೆಯವರು ಕೇಸು ಹಾಕಿದ್ದಾರೆ. ಮುಂದೆ ಕಾನೂನು ಪ್ರಕಾರ ಏನು ಆಗುಯ್ತದೆಯೋ ಅದೇ ರೀತಿ ಆಗಲಿದೆ. ನಿಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದವರು ಈಗ ನಿಮ್ಮ ಜೊತೆ ಇದ್ದಾರ? ನೀವು ಬಲಿಪಶುವಾಗಿದ್ದೀರಿ. ಮುಂದಕ್ಕೆ ಏನಾಗುತ್ತೋ ನೋಡೋಣ ಎಂದು ಹೇಳಿದರು.

Share News