• Home  
  • ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ: ಸಂಭ್ರಮದ ಶಾಲಾ ಪ್ರಾರಂಭೋತ್ಸವ
- LATEST NEWS

ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ: ಸಂಭ್ರಮದ ಶಾಲಾ ಪ್ರಾರಂಭೋತ್ಸವ

ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಜೂನ್ 01 ರ ಸೋಮವಾರದಂದು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಶಾಲಾ ವಾದ್ಯಗೋಷ್ಠಿಯ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ಅತಿಥಿ ಗಣ್ಯರನ್ನು ಹಾಗೂ ಶಾಲೆಗೆ ಹೊಸದಾಗಿ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂದನೀಯ ಫಾ. ಮೈಕಲ್ ಲೋಬೋ ಅವರು ವಹಿಸಿದ್ದರು. ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್, ಶಾಲಾ ಆಡಳಿತ ಮಂಡಳಿ […]

Share News

ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಜೂನ್ 01 ರ ಸೋಮವಾರದಂದು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಶಾಲಾ ವಾದ್ಯಗೋಷ್ಠಿಯ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ಅತಿಥಿ ಗಣ್ಯರನ್ನು ಹಾಗೂ ಶಾಲೆಗೆ ಹೊಸದಾಗಿ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂದನೀಯ ಫಾ. ಮೈಕಲ್ ಲೋಬೋ ಅವರು ವಹಿಸಿದ್ದರು. ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಎಡ್ವರ್ಡ್ ರೋಡ್ರಿಗಸ್, ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಹಾಗೂ ಸಿ. ಮರೀನಾ ಉಪಸ್ಥಿತರಿದ್ದರು.ವಿವಿಧ ಧರ್ಮಗ್ರಂಥಗಳ ವಾಚನ, ಶ್ರದ್ಧಾಪೂರ್ವಕ ಪ್ರಾರ್ಥನಾ ವಿಧಿ ಹಾಗೂ ಆಕರ್ಷಕ ಸ್ವಾಗತ ನೃತ್ಯದೊಂದಿಗೆ ಅತಿಥಿ ಅಭ್ಯಾಗತರನ್ನು ಬರಮಾಡಿಕೊಂಡು ಗೌರವಿಸಲಾಯಿತು. ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಅವರು ತಮ್ಮ ಸ್ವಾಗತ ಭಾಷಣದ ಮೂಲಕ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡ ವಂ. ಫಾ. ಮೈಕಲ್ ಲೋಬೋ ಅವರನ್ನು ಆದರದಿಂದ ಸಂಸ್ಥೆಗೆ ಸ್ವಾಗತಿಸಿ, ಗೌರವಿಸಲಾಯಿತು. ಜೊತೆಗೆ ನೂತನ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ ವೃಂದವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಸಾಧಕರಿಗೆ ಅಭಿನಂದನೆ:ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು, ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಹಾಗೂ ಸ್ಕೌಟ್ ಆಂಡ್ ಗೈಡ್ಸ್‌ನಲ್ಲಿ ‘ರಾಜ್ಯ ಪುರಸ್ಕಾರ’ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಪ್ರಾಂಶುಪಾಲರು ಶಾಲಾ ಶೈಕ್ಷಣಿಕ ಪ್ರಗತಿಯ ಪಕ್ಷಿನೋಟವನ್ನು ಸಭೆಯ ಮುಂದಿಟ್ಟು, ಎಲ್ಲರಿಗೂ ಹೊಸ ಶೈಕ್ಷಣಿಕ ವರ್ಷದ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸುವ ಮೂಲಕ ನೂತನ ಶೈಕ್ಷಣಿಕ ವರ್ಷವನ್ನು ಸಿಹಿಯಾಗಿಯೇ ಆರಂಭಿಸಲಾಯಿತು. ಶಾಲೆಯ ಇತಿಹಾಸದಲ್ಲಿ ಇದೊಂದು ಆದರ್ಶ ಕಾರ್ಯಕ್ರಮವಾಗಿ ಮೂಡಿಬಂದಿತು.

Share News