• Home  
  • ಪ್ರೊ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ಪತ್ರಕರ್ತರಿಂದ ಸಂತಾಪ ಸೂಚಕ ಸಭೆ
- HOME - LATEST NEWS

ಪ್ರೊ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ಪತ್ರಕರ್ತರಿಂದ ಸಂತಾಪ ಸೂಚಕ ಸಭೆ

ಮಂಗಳೂರು ; ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಯವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು. ಈ ಸಂತಾಪ ಸೂಚಕ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದವರು ಜೊತೆಗೆ ಸಂಘಟ ನೆಗೂ ಒತ್ತು […]

Share News

ಮಂಗಳೂರು ; ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಯವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.

ಈ ಸಂತಾಪ ಸೂಚಕ ಸಭೆಯಲ್ಲಿ
ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದವರು ಜೊತೆಗೆ ಸಂಘಟ ನೆಗೂ ಒತ್ತು ನೀಡಿದವರು ಎಂದು ಅವರ ಜೊತೆಗಿನ ಅನುಭವ ಹಂಚಿಕೊಂಡು ನುಡಿನಮನ ಸಲ್ಲಿಸಿದರು.
ಹಿರಿಯ ಪತ್ರಕರ್ತ ಆನಂದ ಶೆಟ್ಟಿಯವರು ಮಾತನಾಡುತ್ತಾ,ಬಾಲಕೃಷ್ಣ ಗಟ್ಟಿಯವರು ಪತ್ರಕರ್ತರ ಸಂಘಟನೆ ತಳ ಮಟ್ಟದಲ್ಲೂ ಬೆಳೆಯಬೇಕು ಎಂದು ಆಶಯ ಹೊಂದಿ ದ್ದರು ಎಂದರು .ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿ ಯವರು ಸರಳ ಸಜ್ಜನಿಕೆಯ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು. ಪತ್ರಿಕೋದ್ಯಮದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕರ್ತವ್ಯ ನಿಷ್ಠೆ ಯಿಂದ ಸಾಕಷ್ಟು ಶಿಷ್ಯರನ್ನು ಪಡೆದುಕೊಂಡಿದ್ದಾರೆ.ಸಂಖ್ಯೆಯಲ್ಲಿ ಒಂದು ಸಣ್ಣ ಸಮುದಾಯದ ಮೂಲಕ ಸಮಾಜ ಗುರುತಿಸುವಂತಹ ಸಾಧನೆಯನ್ನು ತಮ್ಮ ಸ್ವ ಪ್ರಯತ್ನದ ಮೂಲಕ ಮಾಡಿದವರು ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡುತ್ತಾ,ಬಾಲಕೃಷ್ಣ ಗಟ್ಟಿಯವರು ಮಾಧ್ಯಮ ಕ್ಷೇತ್ರದ ಮೂಲಕ ಸಾಕಷ್ಟು ಮಂದಿಗೆ ಪ್ರೇರಣೆ ನೀಡುವ ಕೊಡುಗೆ ನೀಡಿದವರು ಎಂದರು‌,

ಹಿರಿಯ ಪತ್ರಕರ್ತ ಯಶವಂತ ಬೋಳೂರು ಮಾತನಾಡುತ್ತಾ ಬಾಲಕೃಷ್ಣ ಗಟ್ಟಿಯವರು ಶಿಕ್ಷಣ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಮಜಲುಗಳಲ್ಲಿ ಕಾರ್ಯನಿರ್ವಹಿಸಿದ ಪ್ರತಿಭಾವಂತ ಎಂದರು.
ನಂದ ಗೋಪಾಲ್ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿಯವರು ಸಾಕಷ್ಟು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು ಎಂದರು, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮಾತನಾಡುತ್ತಾ, ಬಾಲಕೃಷ್ಣ ಗಟ್ಟಿ ಯವರು ಮಾಡಿದ ಸಾಧನೆಗೆ ಸಾಕಷ್ಟು ಪ್ರಶಸ್ತಿ ಗಳು ಅವರಿಗೆ ದೊರೆಯಬೇಕಿತ್ತು, ಆದರೆ ಅವರು ಪ್ರಶಸ್ತಿ ಗಳ ಹಿಂದೆ ಹೋಗದ ಸ್ವಾಭಿಮಾನಿ ಯಾಗಿದ್ದರು ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ , ಹಾಗೂ ಬಾಲಕೃಷ್ಣ ಗಟ್ಟಿಯವರ ಒಡನಾಡಿಗಳಾಗಿದ್ದ, ಡೊನಾಲ್ಡ್ ಪಿರೇರಾ,ಬಶೀರ್ , ಪತ್ರಕರ್ತ ಭಾಸ್ಕರ ರೈ ಕಟ್ಟ,ನುಡಿ ನಮನ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ರಾಜೇಶ್ ಕೆ ಪೂಜಾರಿ , ಉಪಾಧ್ಯಕ್ಷ ಆರಿಫ್ ಪಡುಬಿದ್ರೆ, ಕೋಶಾಧಿಕಾರಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸುರೇಶ್ ಡಿ ಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಕುಮಾರ್, ಮಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,
ಬಾಲಕೃಷ್ಣ ಗಟ್ಟಿ ಯವರ ಪುತ್ರ ಸುಕುಮಾರ ಗಟ್ಟಿ, ಅಳಿಯ ಯಶವಂತ ಗಟ್ಟಿ ಕುಟುಂಬದ ಸದಸ್ಯರಾದ ಪದ್ಮನಾಭ ಗಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

Share News