ಸುರತ್ಕಲ್:ಹದಿಹರೆಯದವರಲ್ಲಿ ಕಂಡುಬರುವ ಸ್ಥೂಲಕಾಯ (Obesity) ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ. ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ.


ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (JSS AHER) ಸಂಸ್ಥೆಯ ನಿರ್ವಹಣಾ ಅಧ್ಯಯನ ವಿಭಾಗದಿಂದ (Faculty of Management Studies) ನಿರ್ವಹಣಾ ಶಾಸ್ತ್ರ (Management) ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಪ್ರದಾನ ಮಾಡಲಾಗಿದೆ.

ಪಿಎಚ್‌ಡಿ ಪದವಿ ಪುರಸ್ಕೃತರಾದ ದೀಕ್ಷಾ ಎಂ. ಶೆಟ್ಟಿ ಅವರು ಸುರತ್ಕಲ್ ಸಮೀಪದ ಬಾಳ ನಿವಾಸಿಗಳಾದ ಮಾಧವ ಶೆಟ್ಟಿ ಮತ್ತು ಮೀರಾವಾಣಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆಗೆ ವಿವಿಧ ವಲಯಗಳಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳು ವ್ಯಕ್ತವಾಗಿವೆ.


