canaratvnews

ಆರೋಗ್ಯ ಶಿಕ್ಷಣದಿಂದ ಹದಿಹರೆಯದವರ ಸ್ಥೂಲಕಾಯ ನಿರ್ವಹಣೆ ಕುರಿತು ಸಂಶೋಧನೆ: ದೀಕ್ಷಾ ಎಂ. ಶೆಟ್ಟಿಗೆ ಪಿಎಚ್‌ಡಿ

ಸುರತ್ಕಲ್:ಹದಿಹರೆಯದವರಲ್ಲಿ ಕಂಡುಬರುವ ಸ್ಥೂಲಕಾಯ (Obesity) ಸಮಸ್ಯೆ, ಅದರ ಕುರಿತು ಇರುವ ಜ್ಞಾನ, ಮನೋಭಾವ ಹಾಗೂ ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಆರೋಗ್ಯ ಶಿಕ್ಷಣದ ಪರಿಣಾಮವನ್ನು ವಿಶ್ಲೇಷಿಸಿದ ಸಂಶೋಧನೆಗಾಗಿ ದೀಕ್ಷಾ ಎಂ. ಶೆಟ್ಟಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (JSS AHER) ಸಂಸ್ಥೆಯ ನಿರ್ವಹಣಾ ಅಧ್ಯಯನ ವಿಭಾಗದಿಂದ (Faculty of Management Studies) ನಿರ್ವಹಣಾ ಶಾಸ್ತ್ರ (Management) ವಿಷಯದಲ್ಲಿ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಪ್ರದಾನ ಮಾಡಲಾಗಿದೆ.

“ಹದಿಹರೆಯದವರ ಸ್ಥೂಲಕಾಯದ ಕುರಿತು ಜ್ಞಾನ, ಮನೋಭಾವ ಮತ್ತು ಆಚರಣೆಗಳನ್ನು ನಿರ್ಧರಿಸುವ ಅಧ್ಯಯನ ಹಾಗೂ ಸ್ಥೂಲಕಾಯ ನಿರ್ವಹಣೆಯಲ್ಲಿ ಆರೋಗ್ಯ ಶಿಕ್ಷಣದ ಪರಿಣಾಮದ ಮೌಲ್ಯಮಾಪನ” ಎಂಬ ವಿಷಯದ ಕುರಿತು ಅವರು ಅತ್ಯುತ್ತಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಈ ಮಹತ್ವದ ಸಂಶೋಧನೆಯನ್ನು ಪ್ರಸಿದ್ಧ ಮಾರ್ಗದರ್ಶಕರಾದ ಡಾ. ಕನಕವಳ್ಳಿ ಕೆ. ಕುಂದೂರಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಪಿಎಚ್‌ಡಿ ಪದವಿ ಪುರಸ್ಕೃತರಾದ ದೀಕ್ಷಾ ಎಂ. ಶೆಟ್ಟಿ ಅವರು ಸುರತ್ಕಲ್ ಸಮೀಪದ ಬಾಳ ನಿವಾಸಿಗಳಾದ ಮಾಧವ ಶೆಟ್ಟಿ ಮತ್ತು ಮೀರಾವಾಣಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆಗೆ ವಿವಿಧ ವಲಯಗಳಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳು ವ್ಯಕ್ತವಾಗಿವೆ.

Share News
Exit mobile version