• Home  
  • *ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ರವಿವಾರ’ ಆಚರಣೆ*
- COMMUNITY NEWS

*ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ರವಿವಾರ’ ಆಚರಣೆ*

ವಿಟ್ಲ :ಪೆರುವಾಯಿ. ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಇಂದು ‘ಗರಿಗಳ ರವಿವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹಕ್ಕೆ (Holy Week) ಚಾಲನೆ ನೀಡಲಾಯಿತು. ಚರ್ಚ್ ಸಭಾಂಗಣದ ಬಳಿ ನಡೆದ ಧಾರ್ಮಿಕ ವಿಧಿಯ ನೇತೃತ್ವವನ್ನು ಧರ್ಮಗುರು ವಂದನೀಯ ಸೈಮನ್ ಡಿಸೋಜಾ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಗರಿಗಳ ಆಶೀರ್ವಚನ ಮತ್ತು ಪವಿತ್ರ ಬೈಬಲ್ ವಾಚನ ನಡೆಯಿತು. ಬಳಿಕ ಭಕ್ತಾದಿಗಳು ಕೈಯಲ್ಲಿ ಗರಿಗಳನ್ನು ಹಿಡಿದು ‘ಹೊಸ್ಸಾನ್ಹಾ’ ಜಯಘೋಷದೊಂದಿಗೆ ಚರ್ಚ್‌ಗೆ ಭವ್ಯ […]

Share News

ವಿಟ್ಲ :ಪೆರುವಾಯಿ. ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಇಂದು ‘ಗರಿಗಳ ರವಿವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹಕ್ಕೆ (Holy Week) ಚಾಲನೆ ನೀಡಲಾಯಿತು.


ಚರ್ಚ್ ಸಭಾಂಗಣದ ಬಳಿ ನಡೆದ ಧಾರ್ಮಿಕ ವಿಧಿಯ ನೇತೃತ್ವವನ್ನು ಧರ್ಮಗುರು ವಂದನೀಯ ಸೈಮನ್ ಡಿಸೋಜಾ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಗರಿಗಳ ಆಶೀರ್ವಚನ ಮತ್ತು ಪವಿತ್ರ ಬೈಬಲ್ ವಾಚನ ನಡೆಯಿತು. ಬಳಿಕ ಭಕ್ತಾದಿಗಳು ಕೈಯಲ್ಲಿ ಗರಿಗಳನ್ನು ಹಿಡಿದು ‘ಹೊಸ್ಸಾನ್ಹಾ’ ಜಯಘೋಷದೊಂದಿಗೆ ಚರ್ಚ್‌ಗೆ ಭವ್ಯ ಮೆರವಣಿಗೆ ನಡೆಸಿದರು.


ಚರ್ಚ್‌ನಲ್ಲಿ ನಡೆದ ವಿಶೇಷ ಬಲಿಪೂಜೆಯ ವೇಳೆ ಯೇಸುಕ್ರಿಸ್ತರ ಶಿಲುಬೆ ಪಯಣ ಹಾಗೂ ಅವರ ಮರಣದ ಕಥನವನ್ನು ವಾಚಿಸಲಾಯಿತು. ಯೇಸುವಿನ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುತ್ತಾ ಭಕ್ತರು ಪ್ರಾರ್ಥನೆಯಲ್ಲಿ ಲೀನರಾದರು.ಈ ಸಂದರ್ಭ ದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.


ಯೇಸು ಕ್ರಿಸ್ತರು ತಮ್ಮ ಶಿಲುಬೆ ಮರಣಕ್ಕೂ ಮೊದಲು ಬೆಥಾನಿಯಾದಿಂದ ಜೆರುಸಲೆಮ್ ನಗರಕ್ಕೆ ಪ್ರವೇಶಿಸಿದಾಗ, ಅಲ್ಲಿನ ಜನರು ಆಲಿವ್ ಗರಿಗಳನ್ನು ಹಿಡಿದು ಅವರನ್ನು ವೈಭವದಿಂದ ಸ್ವಾಗತಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದರ ಸಂಕೇತವಾಗಿ ಕ್ರೈಸ್ತರು ತೆಂಗಿನ ಗರಿಗಳನ್ನು ಹಿಡಿದು ಸಂಭ್ರಮಿಸುತ್ತಾರೆ. ಶುಭ ಶುಕ್ರವಾರದ ಮುಂಚಿನ ಭಾನುವಾರವನ್ನು ‘ಗರಿಗಳ ಭಾನುವಾರ’ ಎಂದು ಕರೆಯಲಾಗುತ್ತದೆ.

Share News