*ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ರವಿವಾರ’ ಆಚರಣೆ*
ವಿಟ್ಲ :ಪೆರುವಾಯಿ. ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಇಂದು ‘ಗರಿಗಳ ರವಿವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹಕ್ಕೆ (Holy Week) ಚಾಲನೆ ನೀಡಲಾಯಿತು. ಚರ್ಚ್ ಸಭಾಂಗಣದ ಬಳಿ ನಡೆದ ಧಾರ್ಮಿಕ ವಿಧಿಯ ನೇತೃತ್ವವನ್ನು ಧರ್ಮಗುರು ವಂದನೀಯ ಸೈಮನ್ ಡಿಸೋಜಾ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಗರಿಗಳ ಆಶೀರ್ವಚನ ಮತ್ತು ಪವಿತ್ರ ಬೈಬಲ್ ವಾಚನ ನಡೆಯಿತು. ಬಳಿಕ ಭಕ್ತಾದಿಗಳು ಕೈಯಲ್ಲಿ ಗರಿಗಳನ್ನು ಹಿಡಿದು ‘ಹೊಸ್ಸಾನ್ಹಾ’ ಜಯಘೋಷದೊಂದಿಗೆ ಚರ್ಚ್‌ಗೆ ಭವ್ಯ […]






