DAKSHINA KANNADALATEST NEWS

ಸಂಶುದ್ಧೀನ್ ಎಣ್ಮೂರವರಿಗೆ ಪ್ರತಿಷ್ಠಿತ ‘ಪ.ಗೋ. ಪ್ರಶಸ್ತಿ’

ಮಂಗಳೂರು, ಅಗಸ್ಟ್ 08 ; ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ‘ಪ.ಗೋ.’ (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಗೆ ಪತ್ರಕರ್ತ ಸಂಶುದ್ಧೀನ್ ಎಣ್ಮೂರು ಅವರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರಿಂದ ಬಂದಿದ್ದ ನೂರಾರು ಅರ್ಜಿಗಳ ಪೈಕಿ, ಅತ್ಯುತ್ತಮವಾದ ಒಂದು ವರದಿಯನ್ನು ತೀರ್ಪುಗಾರರ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ವಿಜೇತ ವರದಿ: ವಾರ್ತಾಭಾರತಿ’ ಕನ್ನಡ ದೈನಿಕದ ಉಪ ಸಂಪಾದಕರಾಗಿರುವ ಸಂಶುದ್ಧೀನ್ ಎಣ್ಮೂರು ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗ್ರಾಮೀಣ ಭಾಗದ ಅವಕಾಶ ವಂಚಿತ ಜನರ ಸಮಸ್ಯೆಗಳ ಕುರಿತು ವಿಶೇಷ ಬೆಳಕು ಚೆಲ್ಲಿದ್ದರು. ಫೆಬ್ರವರಿ 7, 2025ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅವರ ‘ಆದಿವಾಸಿಗಳ ಬಾಳಿನಲ್ಲಿ ಬೆಳಕಾಗುವುದೇ ರಾಜ್ಯ ಸರಕಾರದ ನೀತಿ’ ಎಂಬ ವಿಶೇಷ ತನಿಖಾ ವರದಿಯು ಈ ಗೌರವಕ್ಕೆ ಪಾತ್ರವಾಗಿದೆ.

Share News