Site icon canaratvnews

ಇಂದು ಸುರತ್ಕಲ್‌, ಕೃಷ್ಣಾಪುರ ಸೇರಿ ಹಲವೆಡೆ ವಿದ್ಯುತ್‌ ನಿಲುಗಡೆ

ಮಂಗಳೂರು: ಸುರತ್ಕಲ್ ಇಂಡಸ್ಟ್ರಿಯಲ್ ಫೀಡರ್ ಹಾಗೂ ಕಾಟಿಪಳ್ಳ ಉಪಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ಎ.10ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, ಮುಕ್ಕ, ಸಸಿಹಿತ್ಲು, ಚೇಳ್ಯಾರು, ಮಧ್ಯ, ಕೃಷ್ಣಾಪುರ 1ನೇ ಬ್ಲಾಕ್, 2ನೇ ಬ್ಲಾಕ್,

3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್ ಕೃಷ್ಣಾಪುರ, ಚೊಕ್ಕಬೆಟ್ಟು, ಕೋಟೆ, ಕುತ್ತೆತ್ತೂರು, ಆದರ್ಶನಗರ, ರಾಜೀವನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ, ಹಾಗೂ ಸುತ್ತಮುತ್ತಲಿನಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕುಲಶೇಖರ ಉಪಕೇಂದ್ರದಿಂದ ಹೊರಡುವ ವಾಮಂಜೂರು ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎ.11ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳಾ ನಗರ, ಅಮೃತ ನಗರ, ಆರ್‌ಟಿಒ ಟೆಸ್ಟ್ ಯಾರ್ಡ್, ಸಂತೋಷ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.  *ಕದ್ರಿ ಉಪಕೇಂದ್ರದಿಂದ ಹೊರಡುವ ಲೈಟ್‌ಹೌಸ್‌ಹಿಲ್ ರೋಡ್ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎ.11ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬಂಟ್ಸ್ ಹಾಸ್ಟೆಲ್, ವುಡ್‌ಲ್ಯಾಂಡ್, ಗೋಲ್ಡ್‌ಫಿಂಚ್, ಜ್ಯೋತಿ ಟಾಕೀಸ್, ಲೈಟ್ ಹೌಸ್ ಹಿಲ್, ಲೇಡಿಸ್ ಕ್ಲಬ್, ಸಂತ ಅಲೋಶಿಯಸ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.  *ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬೆಳುವಾಯಿ, ಅಳಿಯೂರು, ಶಿರ್ತಾಡಿ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎ.12ರಂದು ಬೆಳಗ್ಗೆ 930ರಿಂದ ಸಂಜೆ 6ರರವೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್‌ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಮತ್ತಿತರ ಕಡೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Share News
Exit mobile version