ಮಂಗಳೂರು: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸು (Infant Jesus) ಮಂದಿರದಲ್ಲಿ ಕ್ರೈಸ್ತ ಬಾಂಧವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಧಾನಿಯವರ 76ನೇ ಜನ್ಮದಿನದ ಸಂಕೇತವಾಗಿ ಚರ್ಚ್‌ನಲ್ಲಿ 76 ಮೇಣದಬತ್ತಿಗಳನ್ನು (ಕ್ಯಾಂಡಲ್) ಬೆಳಗಿಸಿ ವಿಶಿಷ್ಟವಾಗಿ ಹಾರೈಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಹಾಗೂ ದೇಶವನ್ನು ಮುನ್ನಡೆಸಲು ಅಗತ್ಯವಿರುವ ದೈವಿಕ ಶಕ್ತಿ ಮತ್ತು ಮಾರ್ಗದರ್ಶನ ದೊರೆಯಲಿ ಎಂದು ಕ್ರೈಸ್ತ ಬಾಂಧವರು ವಿಶೇಷವಾಗಿ ಪ್ರಾರ್ಥಿಸಿದರು.
ದೇಶದ ಸಮಗ್ರ ಅಭಿವೃದ್ಧಿ, ಜನಕಲ್ಯಾಣ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳನ್ನು ಇನ್ನಷ್ಟು ಸಮರ್ಪಣಾ ಭಾವದಿಂದ ಮುನ್ನಡೆಸಲು ಪ್ರಧಾನಿಯವರಿಗೆ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥನೆಯಲ್ಲಿ ಆಶಿಸಲಾಯಿತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಜೆಸಲ್ ಡಿಸೋಜಾ, ಗ್ಲೆನ್ ವಿಶಾಲ್ ಡಿಸಿಲ್ವಾ, ಜೋಯ್ಸನ್ ಡಿಸೋಜಾ, ಟೀನಾ ಪಿರೇರಾ, ಉದಯ್ ಡಿಸೋಜಾ, ಅಜಿತ್ ಡಿಸಿಲ್ವಾ, ಸುನೀಲ್ ರೊಡ್ರಿಗಸ್ ಹಾಗೂ ರೋಶನ್ ರೆನೊಲ್ಡ್ ಸೇರಿದಂತೆ ಹಲವಾರು ಗಣ್ಯರು ಮತ್ತು ಕ್ರೈಸ್ತ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
