canaratvnews

ಮಿಜಾರು ಅಲೇರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ; ದೈವಸ್ಥಾನ, ಚಾವಡಿಯ ನೀಲಿ ನಕಾಶೆ ಲೋಕಾರ್ಪಣೆ

ಮಂಗಳೂರು,: ಮೂಡಬಿದ್ರೆ ಪ್ರಸಿದ್ಧ ಮಿಜಾರು ಅಲೇರಿ ಶ್ರೀ ಸತ್ಯ ಸಾರಮಣಿ ಕಾಣದ ಕಟದ ಮೂಲಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹತ್ವದ ಸಭೆಯು ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಅವರ ಘನ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪ್ರಮುಖ ಸಭೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮುಖ್ಯ ದೈವಸ್ಥಾನ ಮತ್ತು ಚಾವಡಿಯ ನೀಲಿ ನಕಾಶೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ದೈವಸ್ಥಾನ ಹಾಗೂ ಚಾವಡಿಯ ನೀಲಿ ನಕಾಶೆ ಅನಾವರಣ: ಕ್ಷೇತ್ರದಲ್ಲಿ ನೂತನವಾಗಿ ತಲೆಎತ್ತಲಿರುವ ಅಲೇರಾ ಪಂಜುರ್ಲಿ ದೈವಸ್ಥಾನದ ನೀಲಿ ನಕಾಶೆಯನ್ನು ಸಭೆಯಲ್ಲಿ ಅನಾವರಣಗೊಳಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಇದೇ ಸುಸಂದರ್ಭದಲ್ಲಿ ಆದಿದ್ರಾವಿಡ ಸಮುದಾಯದ ಐತಿಹಾಸಿಕ ಅವಾಲಿ ವೀರಪುರುಷರ ಕಾಣದ ಕಟದ ಚಾವಡಿ ಮನೆಯ ನೀಲಿ ನಕಾಶೆಯನ್ನೂ ಸಹ ಸಭೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.

ಸಮುದಾಯದ ಒಗ್ಗಟ್ಟಿನೊಂದಿಗೆ ಮುನ್ನಡೆಯಲು ತೀರ್ಮಾನ:

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಅವರ ಸಮರ್ಥ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಮೂಲಕ್ಷೇತ್ರದ ಇಡೀ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತ ವಾಗಿ ಮತ್ತು ಸಮುದಾಯದ ಒಗ್ಗಟ್ಟಿನೊಂದಿಗೆ ಮುನ್ನಡೆಸಲು ದೃಢ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕ್ಷೇತ್ರದ ಪ್ರಮುಖರು, ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಮುಂಬರುವ ಎಲ್ಲ ಕಾರ್ಯಗಳಿಗೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಒಮ್ಮತದಿಂದ ಭರವಸೆ ನೀಡಿದರು.

Share News
Exit mobile version