canaratvnews

ಕರಾವಳಿಯಾದ್ಯಂತ ಕ್ರೈಸ್ತರ ಮೋಂತಿ ಹಬ್ಬದ ಸಂಭ್ರಮ

ಮಂಗಳೂರು: ಕರಾವಳಿಯಾದ್ಯಂತ ಕಥೋಲಿಕ ಕ್ರೈಸ್ತರು ಮೋಂತಿ (ಮೇರಿ ಮಾತೆ) ಹಬ್ಬವನ್ನು ಸಡಗರದಿಂದ ಆಚರಿಸಿದರು.

ತೆನೆ ಹಬ್ಬವೆಂದು ಕರೆಯುವ ಈ ಹಬ್ಬದ ದಿನವಾದ ಇಂದು ಹೊಸ ತೆನೆಯ ಆರ್ಶಿವಾದ, ವಿಶೇಷ ಬಲಿಪೂಜೆ ನಡೆಯಿತು.

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆದ ವಿಶೇಷ ಬಲಿಪೂಜೆ

ಈ ಹಬ್ಬಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೊವೇನಾ ನಡೆಯಿತು. ಮಕ್ಕಳು 9 ದಿನಗಳ ಕಾಲ ತಮ್ಮ ಹಿತ್ತಲಲ್ಲಿ ಸಿಕ್ಕ ಹೂಗಳನ್ನು ಚರ್ಚಿಗೆ ತಂದು ಮೇರಿ ಮಾತೆಗೆ ಅರ್ಪಿಸುತ್ತಾರೆ. ಈ ವೇಳೆ ಮಕ್ಕಳಿಗೆ ಸಿಹಿತಿನಿಸುಗಳನ್ನು ಹಂಚುತ್ತಾರೆ.
ಕೊನೆಯ ದಿನವಾದ ಇಂದು ಎಲ್ಲರ ಮನೆಗಳಲ್ಲಿ ಕುಟುಂಬ ಸಮೇತ ಸಸ್ಯಹಾರಿ ಭೋಜನವಿರುತ್ತದೆ. ಇಂದು ಪರವೂರಿನಲ್ಲಿರುವ ಎಲ್ಲಾ ಕುಟುಂಬಸ್ಥರು ತಮ್ಮ ಮೂಲ ಮನೆಗಳಲ್ಲಿ ಕುಟುಂಬ ಸಮೇತ ಊಟ ಸೇವಿಸುತ್ತಾರೆ. ಇದೊಂದು ಕುಟುಂಬ ಸಂಬಂಧ ಬೆಸೆಯುವ ಹಬ್ಬವಾಗಿದೆ.
ಮಂಗಳೂರಿನ ರೊಸಾರಿಯೋ, ಮಿಲಾಗ್ರಿಸ್ ಚರ್ಚ್ ಸೇರಿದಂತೆ ಎಲ್ಲೆಡೆ ವಿಶೇಷ ಬಲಿಪೂಜೆ ನಡೆಯಿತು.

Share News
Exit mobile version