LATEST NEWS

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ ನವರಾತ್ರಿ ಮಹೋತ್ಸವ

ವಿಟ್ಲ ಮಾಣಿಲ, ಕುಕ್ಕಾಜೆ: ಶ್ರೀ ಕ್ಷೇತ್ರ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ (ರಿ) ದಲ್ಲಿ 2026ರ ಅಕ್ಟೋಬರ್ 11 ರಿಂದ ಅಕ್ಟೋಬರ್ 19 ರವರೆಗೆ ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು:
ಅಕ್ಟೋಬರ್ 11 ರಿಂದ 18 ರವರೆಗೆ ಪ್ರತಿದಿನ ಬೆಳಿಗ್ಗೆ 6:00 ಕ್ಕೆ ದೀಪ ಪ್ರತಿಷ್ಠೆ, ಗಣಪತಿ ಹೋಮ ಹಾಗೂ ನಿತ್ಯ ಪೂಜೆಗಳು ನಡೆಯಲಿವೆ. ಪ್ರತಿದಿನ ಮಧ್ಯಾಹ್ನ 1:00 ಗಂಟೆಗೆ ಮತ್ತು ರಾತ್ರಿ 8:00 ಗಂಟೆಗೆ ಶ್ರೀದೇವಿಗೆ ಮಹಾಪೂಜೆ ನಡೆದು, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.

ಅಕ್ಟೋಬರ್ 19ರ ವಿಶೇಷ ಕಾರ್ಯಕ್ರಮಗಳು:
ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 19 ರಂದು ಸೋಮವಾರದಂದು ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ:

• ಬೆಳಿಗ್ಗೆ 6:00 ಕ್ಕೆ: ದೀಪ ಪ್ರತಿಷ್ಠೆ, ಗಣಪತಿ ಹೋಮ, ನರಸಿಂಹ ಮಂಡಲ ಪೂಜೆ, ಕಲಶ ಸ್ನಾನ ಹಾಗೂ ನಿತ್ಯ ಪೂಜೆ.
• ಮಧ್ಯಾಹ್ನ 1:00 ಕ್ಕೆ: ಮಹಾಪೂಜೆ, ಶ್ರೀದೇವಿ ಉತ್ಸವ ಬಲಿ, ದರ್ಶನ ಬಲಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ.
• ಸಂಜೆ 6:00 ಕ್ಕೆ: ಆಯುಧ ಪೂಜೆ.
• ರಾತ್ರಿ 8:00 ಕ್ಕೆ: ಮಹಾಪೂಜೆ, ಶ್ರೀದೇವಿಯ ಉತ್ಸವ ಬಲಿ, ದರ್ಶನ ಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
• ರಾತ್ರಿ 12:00 ಕ್ಕೆ: ದೇವಿಯ ವಿಶೇಷ ದೊಂದಿ ಸೇವೆ ಮತ್ತು ಶಕ್ತಿ ಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ (ಯಕ್ಷಗಾನ):
ಅಕ್ಟೋಬರ್ 19 ರಂದು ಸಂಜೆ 7:00 ಗಂಟೆಗೆ ಕುಂಬಾಲುಮೂಲೆಯ ಚಿರಂಜೀವಿ ಯಕ್ಷಗಾನ ಕಲಾಸಂಘ (ರಿ) ಇವರಿಂದ “ಪರಕೆದ ಗಗ್ಗರ” ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಕಾಳಿಕಾ ಕಲಾ ಸಂಘ (ರಿ) ಹಾಗೂ ಶ್ರೀ ಕಾಳಿಕಾ ಮಹಿಳಾ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ . ತಿಳಿಸಿದ್ದಾರೆ

Share News