• Home  
  • ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳ ನೂತನ ವರ್ಗಾವಣೆ ಪಟ್ಟಿ ಬಿಡುಗಡೆ
- COMMUNITY NEWS - HOME - LATEST NEWS

ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳ ನೂತನ ವರ್ಗಾವಣೆ ಪಟ್ಟಿ ಬಿಡುಗಡೆ

ಮಂಗಳೂರು: ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ 62 ಧರ್ಮಗುರುಗಳ ವರ್ಗಾವಣೆ ಹಾಗೂ ನೂತನ ನೇಮಕಾತಿ ಪಟ್ಟಿ ಬಿಡುಗಡೆಯಾಗಿದೆ. ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಲ್ಡಾನ ಅವರ ಆದೇಶದ ಮೇರೆಗೆ ಈ ವರ್ಗಾವಣೆ ಮಾಡಲಾಗಿದ್ದು, ಧರ್ಮಕ್ಷೇತ್ರಗಳ ಆಧ್ಯಾತ್ಮಿಕ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಈ ವರ್ಗಾವಣೆಯಲ್ಲಿ ಚರ್ಚ್‌ನ ಪಾದ್ರಿಗಳು, ಸಹಾಯಕ ಪಾದ್ರಿಗಳು, ಆಡಳಿತಾಧಿಕಾರಿಗಳು ಮತ್ತು ಧರ್ಮಕ್ಷೇತ್ರದ ಸಂಸ್ಥೆಗಳಿಗೆ ವಿಶೇಷ ನಿರ್ದೇಶಕರು ಸೇರಿದಂತೆ ನೇಮಕಾತಿಗಳು ನಡೆದಿವೆ. ಈ ನೇಮಕಾತಿಗಳು ಮೇ ಮತ್ತು ಜೂನ್ 2026 […]

Share News

ಮಂಗಳೂರು: ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ 62 ಧರ್ಮಗುರುಗಳ ವರ್ಗಾವಣೆ ಹಾಗೂ ನೂತನ ನೇಮಕಾತಿ ಪಟ್ಟಿ ಬಿಡುಗಡೆಯಾಗಿದೆ. ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಲ್ಡಾನ ಅವರ ಆದೇಶದ ಮೇರೆಗೆ ಈ ವರ್ಗಾವಣೆ ಮಾಡಲಾಗಿದ್ದು, ಧರ್ಮಕ್ಷೇತ್ರಗಳ ಆಧ್ಯಾತ್ಮಿಕ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ.

ಈ ವರ್ಗಾವಣೆಯಲ್ಲಿ ಚರ್ಚ್‌ನ ಪಾದ್ರಿಗಳು, ಸಹಾಯಕ ಪಾದ್ರಿಗಳು, ಆಡಳಿತಾಧಿಕಾರಿಗಳು ಮತ್ತು ಧರ್ಮಕ್ಷೇತ್ರದ ಸಂಸ್ಥೆಗಳಿಗೆ ವಿಶೇಷ ನಿರ್ದೇಶಕರು ಸೇರಿದಂತೆ ನೇಮಕಾತಿಗಳು ನಡೆದಿವೆ. ಈ ನೇಮಕಾತಿಗಳು ಮೇ ಮತ್ತು ಜೂನ್ 2026 ರ ನಡುವೆ ಜಾರಿಗೆ ಬರಲಿವೆ ಎಂದು ತಿಳಿದು ಬಂದಿದೆ. ಈ ನಿಯೋಜನೆಗಳಲ್ಲಿ, ನೂತನವಾಗಿ ಯಾಜಕೀ ದೀಕ್ಷೆ ಪಡೆದ ಐವರು ಧರ್ಮಗುರುಗಳಿಗೆ ಮೊದಲ ಬಾರಿ ಸೇವೆಗೆ ನಿಯೋಜನೆ ಮಾಡಲಾಗಿದೆ.

 

Share News