LATEST NEWS

ಮಾಧವ ಕೀರ್ತನೋತ್ಸವ-2026 ಸಂಪನ್ನ* ವಿಜಯ ಕುಕ್ಯಾನ್ ಅವರಿಗೆ ಮಾಧವ ಕೀರ್ತನೋತ್ಸವ ಪ್ರಶಸ್ತಿ

ಸುರತ್ಕಲ್, ಆ. 27 : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಹಾಗೂ ಪಣಂಬೂರು-ಕುಳಾಯಿ ಘಟಕದ ಆತಿಥ್ಯದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ. ಸುವರ್ಣ ಸಭಾಂಗಣದಲ್ಲಿ ಮಾಧವ ಕೀರ್ತನೋತ್ಸವ-2026 ಅಂತರ್ ಘಟಕ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭ ನೆರವೇರಿತು.

ಮಾಧವ ಕೀರ್ತನೋತ್ಸವ ಪ್ರಶಸ್ತಿಯನ್ನು ಭಜನಾ ಪ್ರವೀಣರಾದ ವಿಜಯ ಕುಕ್ಯಾನ್ ಅವರಿಗೆ ಪ್ರಧಾನಿಸಲಾಯಿತು. ಶೈಲೇಂದ್ರ ವೈ. ಸುವರ್ಣ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತ ವಿಜಯ ಕುಕ್ಯಾನ್ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾಧವ ಅಂಚನ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಆತಿಥಿಗಳಾಗಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಉದ್ಯಮಿ ಶೈಲೇಂದ್ರ ವೈ. ಸುವರ್ಣ ಹಾಗೂ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಮಾತನಾಡಿ ಶುಭ ಹಾರೈಸಿದರು. ತೀರ್ಪುಗಾರರಾದ ಗುಣವತಿ ಸೋಮೇಶ್ವರ, ಸೋಮಶೇಖರ ಮಯ್ಯ, ಶುಭಕರ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು, ಅವರ ಪರಿಚಯವನ್ನು ಕ್ರಮವಾಗಿ ಸತೀಶ್ ಕಿಲ್ಪಾಡಿ, ವಿದ್ಯಾ ರಾಕೇಶ್, ಸುಧಾ ಸುರೇಶ್ ವಾಚಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷೀಯ ಮಾತುಗಳನಾಡಿದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಸ್ವಾಗತಿಸಿದರು. ಸುರೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಮನೀಷಾ ರೂಪೇಶ್ ಪರಿಚಯಿಸಿದರು, ಸ್ಪರ್ಧೆಯಲ್ಲಿ 22 ಘಟಕಗಳು ಭಾಗವಹಿಸಿದ್ದವು. ಪ್ರಥಮ ಬಂಟ್ವಾಳ ಘಟಕ, ದ್ವಿತೀಯ ಗ್ರಾಮ ಚಾವಡಿ-ಕೊಣಾಜೆ ಘಟಕ, ತೃತೀಯ ಸುರತ್ಕಲ್ ಘಟಕ ಬಹುಮಾನ ಪಡೆದವು. ತೀರ್ಪುಗಾರರ ಮೆಚ್ಚುಗೆ ಕಾರ್ಕಳ ಮತ್ತು ಕೂಳೂರು ಘಟಕಗಳಿಗೆ, ಅತ್ಯುತ್ತಮ ಶಿಸ್ತು ಪಾಲನೆ ಕಾರ್ಕಳ ಘಟಕಕ್ಕೆ, ಉತ್ತಮ ಭಜಕ ಕಡಬ, ಉತ್ತಮ ಭಜಕಿ ಬಂಟ್ವಾಳ, ಅತ್ಯುತ್ತಮ ತಬಲ ವಾದನ ಮೂಡುಬಿದ್ರೆ ಹಾಗೂ ಅತ್ಯುತ್ತಮ ಹಾರ್ಮೋನಿಯಂ ವಾದನ ಬಂಟ್ವಾಳ ಘಟಕಕ್ಕೆ ಲಭಿಸಿತು. ಕಲೆ ಮತ್ತು ಸಾಹಿತ್ಯ ನಿರ್ದೇಶಕ ರಂಜನ್ ಕೆ. ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು.

Share News