• Home  
  • ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ವಾರ್ಷಿಕ ಹಬ್ಬ
- HOME

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ವಾರ್ಷಿಕ ಹಬ್ಬ

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಇಂದು (ಮೇ.13) ವಾರ್ಷಿಕ ಹಬ್ಬ ನಡೆಯಿತು. ಹಬ್ಬದ ದಿವ್ಯಬಲಿಪೂಜೆಯನ್ನು ನೂತನ ಧರ್ಮಗುರು ಹಾಗೂ ಮಂಗಳೂರಿನ ಬಿಜೈ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂದನೀಯ ಜೀವನ್‌ ಡಿಸೋಜಾ ಇವರು ನೆರವೇರಿಸಿದರು.ಈ ವೇಳೆ ನಡೆದ ಧಾರ್ಮಿಕ ಪ್ರವಚನದಲ್ಲಿ, ಕನ್ಯಾ ಮೇರಿ ಮಾತೆಯು 1917 ರ ಮೇ 13ರಂದು ಪೋರ್ಚುಗಲ್‌ನ ಫಾತಿಮಾ ಎಂಬಲ್ಲಿ ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜೆಸಿಂತಾ ಎಂಬ ಮೂವರು ಮಕ್ಕಳಿಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ಕನ್ಯಾ ಮೇರಿ ಕಾಣಿಸಿಕೊಂಡರು. […]

Share News

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಇಂದು (ಮೇ.13) ವಾರ್ಷಿಕ ಹಬ್ಬ ನಡೆಯಿತು. ಹಬ್ಬದ ದಿವ್ಯಬಲಿಪೂಜೆಯನ್ನು ನೂತನ ಧರ್ಮಗುರು ಹಾಗೂ ಮಂಗಳೂರಿನ ಬಿಜೈ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂದನೀಯ ಜೀವನ್‌ ಡಿಸೋಜಾ ಇವರು ನೆರವೇರಿಸಿದರು.ಈ ವೇಳೆ ನಡೆದ ಧಾರ್ಮಿಕ ಪ್ರವಚನದಲ್ಲಿ, ಕನ್ಯಾ ಮೇರಿ ಮಾತೆಯು 1917 ರ ಮೇ 13ರಂದು ಪೋರ್ಚುಗಲ್‌ನ ಫಾತಿಮಾ ಎಂಬಲ್ಲಿ ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜೆಸಿಂತಾ ಎಂಬ ಮೂವರು ಮಕ್ಕಳಿಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ಕನ್ಯಾ ಮೇರಿ ಕಾಣಿಸಿಕೊಂಡರು. ಅದಾದ ನಂತರ ಮೇರಿ ಮಾತೆ ಅಕ್ಟೋಬರ್ 13, 1917 ರವರೆಗೆ, ಪ್ರತಿ ತಿಂಗಳ 13 ರಂದು ಆ ಮಕ್ಕಳಿಗೆ ಕಾಣಿಸಿಕೊಂಡರು. ಈ ವೇಳೆ ಅವರು ಪ್ರಾರ್ಥನೆ, ಜಪಮಾಲೆ ಪಠಣ ಮಾಡುವಂತೆ ಕರೆ ನೀಡಿದರು ಎಂದು ಫಾತಿಮಾ ಮಾತೆಯ ಪವಾಡಗಳ ಬಗ್ಗೆ ತಿಳಿಸಿದರು.ಬಲಿಪೂಜೆಯ ನಂತರ ಚರ್ಚ್‌ ಆವರಣದಲ್ಲಿರುವ ಫಾತಿಮಾ ಮಾತೆಯ ಪ್ರತಿಮೆಯ ಮುಂದೆ ಪ್ರಾರ್ಥನೆ ನಡೆಯಿತು. ಇದೇ ವೇಳೆ ಹಲವು ಭಕ್ತರು ಮೇಣದ ಬತ್ತಿ ಹೊತ್ತಿಸುವ ಮೂಲಕ ಹರೆಯನ್ನು ಸಲ್ಲಿಸಿದರು.ದಿವ್ಯ ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ವಂದನೀಯ ಲಾರೆನ್ಸ್‌ ಡಿಸೋಜ, ಗೋವಾದ ಧರ್ಮಗುರು ವಂದನೀಯ ಜೊಸ್ಸಿ ಮಸ್ಕರೇನಸ್‌ ಹಾಗೂ ಪೆರುವಾಯಿ ಚರ್ಚ್‌ನ ಧರ್ಮಗುರು ವಂದನೀಯ ಸೈಮನ್‌ ಡಿಸೋಜಾ ಅವರು ಭಾಗವಹಿಸಿದ್ದರು. ಬಲಿಪೂಜೆಯ ನಂತರ ಭಕ್ತರಿಗೆ ಉಪಹಾರ ವಿತರಿಸಿದರು.

Share News