• Home  
  • ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ರಕ್ತದಾನ ಶಿಬಿರ
- LATEST NEWS

ಜೆ.ಎಫ್. ಅಸೋಸಿಯೇಷನ್ ಬಜಾಲ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಜೆ.ಎಫ್. ಅಸೋಸಿಯೇಷನ್ (ರಿ.) ಬಜಾಲ್ ನಂತೂರ್ ಮಂಗಳೂರು ಇದರ ವತಿಯಿಂದ, ಯೇನಪೋಯ ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಸಹಯೋಗ ದೊಂದಿಗೆ ಬಜಾಲ್‌ನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ (ಮರ್ಹೂಮ್ ಬಿ. ಪಕ್ರುದ್ದೀನ್ ವೇದಿಕೆ) ಬೃಹತ್ ರಕ್ತದಾನ ಶಿಬಿರವು ಭಾನುವಾರ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ಅವರು, “ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಿದೆ. ರಕ್ತದಾನದ ಮೂಲಕ ರೋಗಿಗಳ ಮತ್ತು ಗಾಯಗೊಂಡವರ […]

Share News

ಮಂಗಳೂರು: ಜೆ.ಎಫ್. ಅಸೋಸಿಯೇಷನ್ (ರಿ.) ಬಜಾಲ್ ನಂತೂರ್ ಮಂಗಳೂರು ಇದರ ವತಿಯಿಂದ, ಯೇನಪೋಯ ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಸಹಯೋಗ ದೊಂದಿಗೆ ಬಜಾಲ್‌ನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ (ಮರ್ಹೂಮ್ ಬಿ. ಪಕ್ರುದ್ದೀನ್ ವೇದಿಕೆ) ಬೃಹತ್ ರಕ್ತದಾನ ಶಿಬಿರವು ಭಾನುವಾರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರವೂಫ್ ಅವರು, “ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಿದೆ. ರಕ್ತದಾನದ ಮೂಲಕ ರೋಗಿಗಳ ಮತ್ತು ಗಾಯಗೊಂಡವರ ಜೀವ ಉಳಿಸಲು ಸಾಧ್ಯ. ಸುಡುಬಿಸಿಲನ್ನೂ ಲೆಕ್ಕಿಸದೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ,” ಎಂದು ಹಾರೈಸಿದರು.

ಮಂಗಳೂರು ಬ್ಲಡ್ ಡೋನರ್ಸ್ ಮುಖ್ಯಸ್ಥರಾದ ಸಿದ್ದಿಕ್ ಅವರು ಮಾತನಾಡಿ ರಕ್ತದಾನಿಗಳಿಗೆ ಶುಭ ಕೋರಿದರು. ಜೆ.ಎಫ್. ಅಸೋಸಿಯೇಷನ್ ಅಧ್ಯಕ್ಷರಾದ ನಝೀರ್ ಬಜಾಲ್ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು 58 ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ವೇದಿಕೆಯಲ್ಲಿ ಯೇನಪೋಯ ಬ್ಲಡ್ ಬ್ಯಾಂಕ್‌ನ ಡಾ. ದೀಪ್ತಿ, ಹಾಜಿ ಬಿ.ಎನ್. ಅಬ್ಬಾಸ್, ಗೌಷಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಕ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆಸೀಫ್ ಬಜಾಲ್, ಬಿ.ಜೆ.ಎಂ ಮುಅಝಿನ್ ನಿಸಾರ್ ಹಾಸಿಮಿ ಹಾಗೂ ಮುಸ್ತಫಾ ಕಟ್ಟಾ ಉಪಸ್ಥಿತರಿದ್ದರು.ಸಮಿತಿಯ ಸದಸ್ಯರಾದ ಆಸ್ಪಕ್, ಸಾಕೀರ್, ಯು.ಪಿ. ತೌಫೀಕ್, ಎಚ್.ಎಸ್. ಮುನೀರ್, ಇಮ್ರಾನ್, ಯು.ಪಿ. ವಾಸಿಂ, ಅಫೀಜ್, ಹುಸೈನ್, ರಮೀಜ್, ಅರ್ಫಾಕ್, ಎಚ್.ಎಸ್. ತೌಸೀಫ್, ಕಲಂದರ್, ನೌಫಲ್, ಫಾವಾಜ್, ಆರಿಫ್, ಇಸಾಕ್ ಮತ್ತಿತರರು ಸಹಕರಿಸಿದರು.ಇಕ್ಬಾಲ್ ಅಹಸನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಕೀಜ್ ವಂದಿಸಿದರು.

Share News