• Home  
  • ಕುದ್ರೋಳಿ ಭಗವತಿ ದೇವಸ್ಥಾನದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಅಧಿಕಾರಿಗಳು ಸಭೆ
- LATEST NEWS

ಕುದ್ರೋಳಿ ಭಗವತಿ ದೇವಸ್ಥಾನದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಅಧಿಕಾರಿಗಳು ಸಭೆ

ಮಂಗಳೂರು, ಜೂನ್ 11: ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ಗಳ ವಿಶೇಷ ಸಭೆಯು ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಇಲ್ಲಿನ ರಸ್ತೆ ಅಗಲೀಕರಣವು ಸ್ಥಳೀಯ ನಾಗರಿಕರ ಹಲವಾರು ವರ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿಂದೆ ಹಲವು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಇದು ಸಾಧ್ಯವಾಗಿರಲಿಲ್ಲ. ರಸ್ತೆಗಳು ಅಗಲವಾದರೆ ಸುತ್ತಮುತ್ತಲಿನ ಎಲ್ಲಾ […]

Share News

ಮಂಗಳೂರು, ಜೂನ್ 11: ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ಗಳ ವಿಶೇಷ ಸಭೆಯು ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಇಲ್ಲಿನ ರಸ್ತೆ ಅಗಲೀಕರಣವು ಸ್ಥಳೀಯ ನಾಗರಿಕರ ಹಲವಾರು ವರ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿಂದೆ ಹಲವು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಇದು ಸಾಧ್ಯವಾಗಿರಲಿಲ್ಲ. ರಸ್ತೆಗಳು ಅಗಲವಾದರೆ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರಿಗೆ ಹಾಗೂ ಬೆಳೆಯುತ್ತಿರುವ ನಗರಕ್ಕೆ ತುಂಬಾ ಅನುಕೂಲವಾ ಗಲಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಹಿತ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಗಲೀಕರಣ ಅನಿವಾರ್ಯವಾಗಿದ್ದು, ಟಿ.ಡಿ.ಆರ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಾಸಕರು ಮನವಿ ಮಾಡಿದರು. ಈ ಮನವಿಗೆ ಭಗವತಿ ದೇವಸ್ಥಾನದ ಆಡಳಿತ ಸಮಿತಿಯು ಸಕಾರಾತ್ಮಕವಾಗಿ ಸ್ಪಂದಿಸಿದೆ.

ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, “ನಮ್ಮ ಮನವಿಗೆ ಒಪ್ಪಿಗೆ ಸೂಚಿಸಿದ ದೇವಸ್ಥಾನದ ಆಡಳಿತ ಸಮಿತಿಗೆ ವಿಶೇಷ ಧನ್ಯವಾದಗಳು. ನಿಯಮಗಳ ಪ್ರಕಾರ ಟಿಡಿಆರ್ ಪ್ರಕ್ರಿಯೆ ನಡೆಸಬೇಕು. ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಪ್ರಮುಖ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್, ಉಪ ಆಯುಕ್ತರಾದ ನರೇಶ್ ಶೆಣೈ, ನಿಕಟಪೂರ್ವ ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಕಾವ್ಯ ನಟರಾಜ್ ಆಳ್ವ ದೇವಸ್ಥಾನದ ಆಡಳಿತ ಸಮಿತಿಯ ಪರವಾಗಿ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ, ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಮಂಕಿಸ್ಟ್ಯಾಂಡ್, ಪ್ರಧಾನ ಕಾರ್ಯದರ್ಶಿ ಸುಧೀರ್, ಕೋಶಾಧಿಕಾರಿ ಲೋಕೇಶ್ ಬೋಳಾರ್, ಮೊಕ್ತೇಸರರಾದ ಸುಜನ್ ದಾಸ್ ಕುಡುಪು, ರವೀಂದ್ರ ಕೆ., ಉಪಾಧ್ಯಕ್ಷ ಉದಯ ಕುಮಾರ್ ಕುಡುಪು ಮತ್ತು ಮಹಿಳಾ ಸಮಿತಿಯ ಜಾಸ್ಮಿನ್ ಸುಜನ್ ದಾಸ್ ಭಾಗವಹಿಸಿದ್ದರು

.ಅಲ್ಲದೆ, ನಗರ ಯೋಜನಾಧಿಕಾರಿ ಶರತ್ ಗೌಡ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಕಾರ್ಯನಿರ್ವಾಹಕ ಇಂಜಿನಿಯರ್ (ಇಇ) ನಾಗರಾಜ್, ಪುನೀತ್ ಶಿವಲಿಂಗಯ್ಯ, ಸಹನಾ, ಚಿನ್ಮಯಿ ಗೋಪಾಲ್ ಹಾಗೂ ಶಿವುಕುಮಾರ್ ಸೇರಿದಂತೆ ಪಾಲಿಕೆಯ ಹಲವು ಅಧಿಕಾರಿಗಳು. ಸಭೆಯಲ್ಲಿ ಉಪಸ್ಥಿತರಿದ್ದರು.

Share News