ಮಂಗಳೂರು, ಜೂನ್ 11: ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ಗಳ ವಿಶೇಷ ಸಭೆಯು ಶಾಸಕ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಪ್ರಮುಖ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್, ಉಪ ಆಯುಕ್ತರಾದ ನರೇಶ್ ಶೆಣೈ, ನಿಕಟಪೂರ್ವ ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಕಾವ್ಯ ನಟರಾಜ್ ಆಳ್ವ ದೇವಸ್ಥಾನದ ಆಡಳಿತ ಸಮಿತಿಯ ಪರವಾಗಿ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ, ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಮಂಕಿಸ್ಟ್ಯಾಂಡ್, ಪ್ರಧಾನ ಕಾರ್ಯದರ್ಶಿ ಸುಧೀರ್, ಕೋಶಾಧಿಕಾರಿ ಲೋಕೇಶ್ ಬೋಳಾರ್, ಮೊಕ್ತೇಸರರಾದ ಸುಜನ್ ದಾಸ್ ಕುಡುಪು, ರವೀಂದ್ರ ಕೆ., ಉಪಾಧ್ಯಕ್ಷ ಉದಯ ಕುಮಾರ್ ಕುಡುಪು ಮತ್ತು ಮಹಿಳಾ ಸಮಿತಿಯ ಜಾಸ್ಮಿನ್ ಸುಜನ್ ದಾಸ್ ಭಾಗವಹಿಸಿದ್ದರು
.ಅಲ್ಲದೆ, ನಗರ ಯೋಜನಾಧಿಕಾರಿ ಶರತ್ ಗೌಡ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಕಾರ್ಯನಿರ್ವಾಹಕ ಇಂಜಿನಿಯರ್ (ಇಇ) ನಾಗರಾಜ್, ಪುನೀತ್ ಶಿವಲಿಂಗಯ್ಯ, ಸಹನಾ, ಚಿನ್ಮಯಿ ಗೋಪಾಲ್ ಹಾಗೂ ಶಿವುಕುಮಾರ್ ಸೇರಿದಂತೆ ಪಾಲಿಕೆಯ ಹಲವು ಅಧಿಕಾರಿಗಳು. ಸಭೆಯಲ್ಲಿ ಉಪಸ್ಥಿತರಿದ್ದರು.